ಉದ್ಯೋಗ ಕ್ಷೇತ್ರದ ಮೇಲೆ ಮತ್ತೆ ಕೋವಿಡ್ ಪರಿಣಾಮ : ನಿರುದ್ಯೋಗ ಪ್ರಮಾಣ ಶೇ.8 ಏರಿಕೆ
Team Udayavani, Apr 16, 2021, 6:40 AM IST
ಕೋವಿಡ್‌ನ ಎರಡನೇ ಆಲೆಯನ್ನು ನಿವಾರಿಸಲು ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ಇದು ಎಪ್ರಿಲ್ ಮೊದಲ ಎರಡು ವಾರಗಳಲ್ಲಿ ನಿರುದ್ಯೋಗ ದರವನ್ನು ಶೇ. 8ಕ್ಕಿಂತ ಹೆಚ್ಚಿಸಿದೆ ಎಂದು ಭಾರತೀಯ ಆರ್ಥಿಕತೆಯ ನಿಗಾ ಕೇಂದ್ರ (ಸಿಎಂಐಇ) ಹೇಳಿದೆ. ಅದರ ಪ್ರಕಾರ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚೇತರಿಕೆ ಇನ್ನಷ್ಟು ದುರ್ಬಲಗೊಳ್ಳಲಿದ್ದು, ಇದು ಅಸಂಘಟಿತ ವಲಯದ 120 ಮಿಲಿಯನ್ ಕಾರ್ಮಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಶೇ. 40ಕ್ಕೆ ಇಳಿಕೆ
ಸಿಎಂಐಇ ಪ್ರಕಾರ ಎಪ್ರಿಲ್ ಮೊದಲ ಎರಡು ತಿಂಗಳಲ್ಲಿ ನಿರುದ್ಯೋಗ ದರವು ಶೇ. 8 ಮೀರಿದೆ. ಕಾರ್ಮಿಕರ ಪಾಲ್ಗೊಳ್ಳು ವಿಕೆ ದರವು ಶೇ. 40ಕ್ಕೆ ಕುಸಿದಿದೆ.
ಎಪ್ರಿಲ್: ಅಂಕಿಅಂಶಗಳ ಪ್ರಕಾರ ಎಪ್ರಿಲ್ 14ರಂದು ನಿರುದ್ಯೋಗ ದರವು ಶೇ. 7.2ರಷ್ಟಿತ್ತು. ನಗರಗಳಲ್ಲಿನ ನಿರುದ್ಯೋಗ ದರವು ಶೇ. 8.4ರಷ್ಟಿದ್ದರೆ, ಗ್ರಾಮೀಣ ನಿರುದ್ಯೋಗ ದರವು ಶೇ. 6.6ರಷ್ಟಿತ್ತು.
ಮಾರ್ಚ್: ಮಾರ್ಚ್‌ನಲ್ಲಿ ನಿರು ದ್ಯೋಗ ದರವು ಶೇ. 6.52ರಷ್ಟಿತ್ತು. ನಗರಗಳಲ್ಲಿನ ನಿರುದ್ಯೋಗ ದರವು ಶೇ. 7.24ರಷ್ಟಿದ್ದರೆ, ಗ್ರಾಮೀಣ ನಿರುದ್ಯೋಗ ದರವು ಶೇ. 6.17ರಷ್ಟಿತ್ತು.
1.88 ಕೋಟಿ
2020ರ ಮಾರ್ಚ್ ಅಂತ್ಯಕ್ಕೆ 8.59 ಕೋಟಿ ಜನರು ಉದ್ಯೋಗದಲ್ಲಿದ್ದರೆ 2021ರ ಮಾರ್ಚ್ ಅಂತ್ಯಕ್ಕೆ ಈ ಸಂಖ್ಯೆ 7.62 ಕೋಟಿಗೆ ಕುಸಿಯಲ್ಪಟ್ಟಿದೆ. ಅಂದರೆ ಕಳೆದೊಂದು ವರ್ಷದಲ್ಲಿ ಸರಿಸುಮಾರು 98ಲಕ್ಷ ಮಂದಿ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ.ಇನ್ನು ಗ್ರಾಮಾಂತರದಲ್ಲಿ ಮಾರ್ಚ್ 2021ರ ವೇಳೆಗೆ 60 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದರೆ, 30ಲಕ್ಷ ಉದ್ಯಮಿಗಳು ನಿರುದ್ಯೋಗಿಗಳಾಗಿದ್ದಾರೆ. ಹೀಗೆ ಒಂದು ವರ್ಷದಲ್ಲಿ ಗ್ರಾಮಗಳಲ್ಲಿ ಒಟ್ಟು 90 ಲಕ್ಷ ಉದ್ಯೋಗಗಳು ಇಲ್ಲದಾಗಿದೆ. ಈ ಜನರು ಕೃಷಿ ಅಥವಾ ಇತರ ಕಡಿಮೆ ಉತ್ಪಾದಕ ಕೆಲಸದಲ್ಲಿ ತೊಡಗಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಲಾಕ್‌ಡೌನ್ ಆಘಾತ
ಸಿಎಂಐಇ ಪ್ರಕಾರ ಎಪ್ರಿಲ್ ಮೊದಲ ವಾರದಿಂದ ದೇಶದಲ್ಲಿ ನಿರುದ್ಯೋಗ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸಿತು. ಲಾಕ್‌ಡೌನ್ ಮುಂದುವರಿದರೆ ಈ ತಿಂಗಳು ನಗರಗಳಲ್ಲಿ ನಿರುದ್ಯೋಗ ಹೆಚ್ಚಾಗುತ್ತದೆ ಎಂದು ಸಿಎಂಐಇ ತನ್ನ ಸಾಪ್ತಾಹಿಕ ವರದಿಯಲ್ಲಿ ತಿಳಿಸಿದೆ. ಉದ್ಯೋಗಸ್ತರು ಕಚೇರಿಗೆ ಮರಳಲು ಮತ್ತು ಉನ್ನತ ಉದ್ಯೋಗವನ್ನು ಪಡೆಯುವ ಸಾಧ್ಯತೆ ಕಡಿಮೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.