ಹಳೆ ಮಿತ್ರರನ್ನು ಸ್ಮತಿಪುಟಗಳಲ್ಲಿತಂದು ನೆನಪುಗಳನ್ನು ಬೆಸೆಯುವ ಕೊಂಡಿ ಆಟೋಗ್ರಾಫ್

Team Udayavani, Apr 16, 2021, 4:11 PM IST

Autograph

ಆಟೋಗ್ರಾಫ್! ಈ ಪದವೇ ಒಂದು ರೊಮಾಂಚನ..

ಆಟೋಗ್ರಾಫ್ ಎನ್ನುವುದು ಒಂದು ಕನಸು. ಹಲವರಿಗೆ ತಮ್ಮ ನೆಚ್ಚಿನ ಖ್ಯಾತ ವ್ಯಕ್ತಿಗಳ ಬಳಿ ಆಟೋಗ್ರಾಫ್ ಪಡೆಯುವುದೇ ಒಂದು ಕನಸಾದರೆ ಇನ್ನೂ ಕೆಲವರಿಗೆ ತಾವೂ ಸುಪ್ರಸಿದ್ಧ ವ್ಯಕ್ತಿಗಳಾಗಿ ಆಟೋಗ್ರಾಫ್ ನೀಡಬೇಕೆನ್ನುವುದೇ ಒಂದು ಕನಸು-ಗುರಿಯಾಗಿರುತ್ತದೆ.

ನಮ್ಮ ಬಾಲ್ಯದಲ್ಲಿ ಶಾಲೆಗಳಲ್ಲಿ ಸಹಪಾಠಿ, ಮಿತ್ರರ ನೆನಪುಗಳಿಗಾಗಿ ವರ್ಷದ ಕೊನೆಯಲ್ಲಿ ಆಟೋಗ್ರಾಫ್ ಬರೆಸಿಕೊಳ್ಳುತ್ತಿದ್ದೆವು. ಹಲವು ಅಂಗಡಿಗಳಿಗೆ ತೆರಳಿ ಹುಡುಕಿ ವೈವಿಧ್ಯ ಬಣ್ಣ ಬಣ್ಣದ ಆಟೋಗ್ರಾಫ್ ಪುಸ್ತಕ ಕೊಂಡು ಸಹಪಾಠಿ ಮಿತ್ರರಿಗೆ ಒಂದೊಂದುದಿನ ಪಾಳಿ ಪ್ರಕಾರ ಕೊಟ್ಟು ಬರೆಸಿಕೊಳ್ಳುವುದೇ ಒಂದು ಸಡಗರ. ಇನ್ನು ನಮಗೆ ಬಂದ ಆಟೋಗ್ರಾಫ್ ಪುಸ್ತಕ ಬರೆಯುವುದೇ ಒಂದು ದೊಡ್ಡ ಸಾಧನೆ. ಅದನ್ನು ಯಾವ ಕಲರ್‌ ಪೆನ್ಸಿಲಿನಿಂದ ಬರೆಯುವುದು? ಹೇಗೆ ವರ್ಣನಾತ್ಮಕವಾಗಿ ಮಾಡುವುದು?ಎಂಬುದೇ ಯಕ್ಷಪ್ರಶ್ನೆ. ತರಗತಿಯಲ್ಲಿ ದಿನಕ್ಕೆ ಹೆಚ್ಚು ಆಟೋಗ್ರಾಫ್ ಬಂದವರೆ ಹೀರೋ ಆಗಿಬಿಡುತ್ತಿದ್ದರು.

“ಟೀಚರ್‌ ಇವತ್ತು ಆಟೋಗ್ರಾಫ್ ಬುಕ್ಕ ಬರಿಯುದ ಬಾಳ ಇತ್ತರಿ’ ಎಂದೂ ಹೋಂ ವರ್ಕ್‌ ಮಾಡದಿರಲು ಕಾರಣ ಕೊಟ್ಟವರೂ ಉಂಟು. ಶಾಲೆ, ಕಾಲೇಜಿನ ಕೊನೆಯ ದಿನಗಳಲ್ಲಿಎಲ್ಲರ ಕೈಯಲ್ಲೂ ಆಟೋಗ್ರಾಫ್ ಹೊತ್ತಗೆಗಳೇ ರಾರಾಜಿಸುತ್ತಿದ್ದವು.

ನೋಟ್ಸ್‌ಗಳನ್ನಾದ್ದರೂ ತರುವುದು ಮರೆಯುತ್ತಿದ್ದರೇನೋ, ಆದರೆ ಇದನ್ನಲ್ಲ. ವರ್ಷವಿಡೀ ಕೈಯಲ್ಲಿ ಒಂದೇ ಪುಸ್ತಕ ಹಿಡಿದು ಶೋಕಿ ಮಾಡಲು ಬರುವವರೆಲ್ಲ ಆ ಸಮಯಗಳಲ್ಲಿ ಆಟೋಗ್ರಾಫ್ ಪುಸ್ತಕ ವಿನಿಮಯಕ್ಕೆ ಕಾಲೇಜ್‌ ಬ್ಯಾಗೇ ತರುತ್ತಿದ್ದರು. ಆಟೋಗ್ರಾಫ್ ಪುಸ್ತಕ ಎನ್ನುವುದೇ ಒಂದು ಭಾವನಾತ್ಮಕ ನೆನಪಿನ ಬುತ್ತಿ…ಅದು ಹಲವು ಮಧುರಕ್ಷಣವನ್ನು, ಮಿತ್ರರ ಹಸ್ತಾಕ್ಷರವನ್ನು ಹೊತ್ತಿರುವ ಹೊತ್ತಗೆ.

ಎಷ್ಟೋ ವರ್ಷಗಳ ಅನಂತರ ಪುರುಸೊತ್ತು ಮಾಡಿಕೊಂಡು ಕಟ್ಟಿಟ್ಟ ಗಂಟನ್ನು ತೆಗೆದು ಧೂಳು ಜಾಡಿಸಿ ಆಟೋಗ್ರಾಫ್ ಪುಸ್ತಕದ ಒಂದೊಂದೇ ಪುಟ ತಿರುಗಿಸಿದಾಗ ಅದು ನಮ್ಮನ್ನು ಶಾಲಾ, ಕಾಲೇಜಿನ ನೆನಪುಗಳತ್ತ ಕೊಂಡೊಯ್ಯುತ್ತದೆ.ನಮ್ಮದೇ ಉದ್ಯೋಗ, ಸಂಸಾರದ ಜಂಜಾಟದ ಜಗತ್ತಿನಲ್ಲಿ ಕಳೆದು ಹೋದ ನಮಗೆ ಅಲ್ಲಿ ಬರೆದಿರುವ ನಮ್ಮದೇ ಮಿತ್ರರ ಸಾಲುಗಳಿಗೆ ಕಳೆದು ಹೋದ ಸುಂದರ ಪ್ರಪಂಚಕ್ಕೆ ಕೊಂಡೊಯ್ಯುವ ಶಕ್ತಿಯಿದೆ.

ಹಳೆ ಮಿತ್ರರನ್ನು ಸ್ಮತಿಪುಟಗಳಲ್ಲಿ ತಂದು ಕಳೆದು ಹೋದ ಸಹಪಾಠಿಗಳನ್ನು ಮತ್ತೆ ಬೆಸೆಯುವಂತೆ ಮಾಡುವ ಕೊಂಡಿ ಆಟೋಗ್ರಾಫ್ ಪುಸ್ತಕ. ರಭಸದಿಂದ ಹರಿಯುತ್ತಿರುವ ಕಾಲಚಕ್ರದ ಸುಳಿಗೆ ಸಿಕ್ಕಿಹಾಕಿಕೊಂಡು ಮೊಬೈಲ್‌ ಮುಂತಾದ ಆಧುನಿಕ ತಂತ್ರಜ್ಞಾನದ ಮಾಯಾ ಪಾಶ ಗಳಿಗೆ ಸಿಲುಕಿದ ಯುವ ಪೀಳಿಗೆ ಗಳ ಕೈಯಿಂದ ಅಳಿವಿನ ಅಂಚಿ ನಲ್ಲಿರುವ ಮಾಯಾಪುಸ್ತಕಕ್ಕೆ ನನ್ನ ಭಾವಪೂರ್ಣ ನಮನ.

ಮಹಿಮಾ ಭಟ್, ಧಾರವಾಡ ವಿವಿ

ಟಾಪ್ ನ್ಯೂಸ್

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

UV Fusion: ಹಟ್ಟಿ ಹಬ್ಬ ಗ್ರಾಮೀಣ ಸೊಗಡಿನ ಸಂಸ್ಕೃತಿಯ ಕೊಂಡಿ

12-uv-fusion

Mobile Phones: ಸಂಬಂಧ ಕಳಚುತ್ತಿರುವ ಮೊಬೈಲ್‌ ಬಾಂಧವ್ಯ

11-uv-fusion

Teacher: ಟೀ ಫಾರ್‌ ಟೀಚರ್‌

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.