ಉಪಚುನಾವಣೆ: ಮಸ್ಕಿಯಲ್ಲಿ ಶೇ. 11.23ರಷ್ಟು ಮತದಾನ
Team Udayavani, Apr 17, 2021, 9:59 AM IST
ರಾಯಚೂರು: ಮಸ್ಕಿ ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದು ಬೆಳಗ್ಗೆ 9.30ರ ವೇಳೆಗೆ ಶೇ.11.23ರಷ್ಟು ಮತದಾನವಾಗಿದೆ. 13115 ಪುರುಷರು, 10,065 ಮಹಿಳೆಯರು ಹಾಗೂ 10 ಇತರೆ ಮತದಾರರು ಮತ ಚಲಾಯಿಸಿದರು.
ಮಸ್ಕಿ ಕ್ಷೇತ್ರದ ವಟಗಲ್ ನ ಮತಗಟ್ಟೆ ಏಳರಲ್ಲಿ 95 ವರ್ಷದ ಅಂಬಮ್ಮ ಮತ ಚಲಾಯಿಸಿದರು. ನಡೆಯಲು ಶಕ್ತರಲ್ಲದ ಅವರು ಸೊಸೆ ನೆರವಿನೊಂದಿಗೆ ಬಂದು ಹಕ್ಕು ಚಲಾಯಿದರು. ಇನ್ನೂ ತುರವಿಹಾಳನ ಮತಗಟ್ಟೆ 217ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಮತ ಚಲಾಯಿಸಿದರು.
ಬಿಸಿಲಿನ ಝಳ ಕಡಿಮೆ ಇದ್ದಾಗ್ಯೂ ಮತಗಟ್ಟೆಯತ್ತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಬೆಳಗ್ಗೆ 10 ಗಂಟೆ ಬಳಿಕ ಮತದಾನ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಉಪಚುನಾವಣೆ: ಬೆಳಗಾವಿ, ಬಸವಕಲ್ಯಾಣ, ಮಸ್ಕಿಯಲ್ಲಿ ಮತದಾನಕ್ಕೆ ಚಾಲನೆ
ಉಪ ಚುನಾವಣೆ ನಿಮಿತ್ತ ಮಸ್ಕಿಯ ಸರಕಾರಿ ಪಪೂ ಕಾಲೇಜಿನಲ್ಲಿ ಸ್ಥಾಪಿಸಿದ ಸಖಿ ಮತಗಟ್ಟೆಯಲ್ಲಿ ಮೊದಲು ಮತ ಚಲಾಯಿಸಿದ ಮಹಿಳೆಗೆ ಸಸಿ ನೀಡಿ ಅಭಿನಂದಿಸಲಾಯಿತು. ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿಬಲ್ಲಿ ಸಖಿ ಮತಗಟ್ಟೆ ಕೇಂದ್ರವನ್ನು ಶೃಂಗಾರ ಮಾಡಲಾಗಿದೆ. ಪ್ರಥಮ ಬಾರಿಗೆ ಮತದಾನ ಮಾಡಿದ ಅಕ್ಷತಾ ಮಸ್ಕಿ ಅವರಿಗೆ ಸಹಾಯಕ ಆಯುಕ್ತ ರಾಜಶೇಖರ್ ಡಂಬಳ ಸಸಿ ನೀಡಿ ಅಭಿನಂದಿಸಿದರು. ಇನ್ನೂ ಪ್ರತಾಪ ಗೌಡ ಪಾಟೀಲ್ ಹೊರತಾಗಿಸಿ ಅವರ ಕುಟುಂಬ ಸದಸ್ಯರು ಮಸ್ಕಿಯಲ್ಲಿ ಹಕ್ಕು ಚಲಾಯಿಸಿದರು.
ಇದನ್ನೂ ಓದಿ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.