ಅರಿವು ಮೂಡಿಸಿದ ಬಳಿಕ ಲಸಿಕೆ ಪಡೆದ ಗ್ರಾಮಸ್ಥರು
Team Udayavani, Apr 17, 2021, 2:41 PM IST
ಎಚ್.ಡಿ.ಕೋಟೆ: ತಾಲೂಕಿನ ಗಡಿಭಾಗದಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಜಯಲಕ್ಷ್ಮೀಪುರದ ಮಂದಿ ಕೊರೊನಾ ಲಸಿಕೆಪಡೆಯಲು ತಪ್ಪು ಗ್ರಹಿಕೆಯಿಂದ ಹಿಂದೇಟುಹಾಕುತ್ತಿದ್ದು, ಆರೋಗ್ಯ ಇಲಾಖೆ ಜನರಮನವೊಲಿಸಿ 25 ಮಂದಿಗೆ ಲಸಿಕೆ ಹಾಕಿಸುವಲ್ಲಿಯಶಸ್ವಿಯಾಗಿದ್ದಾರೆ.
ಎಚ್.ಡಿ.ಕೋಟೆ-ಸರಗೂರು ತಾಲೂಕಿನಗಡಿಭಾಗವಾದ ಜಯಲಕ್ಷ್ಮೀಪುರದಲ್ಲಿ ಒಟ್ಟು 436ಜನಸಂಖ್ಯೆ ಇದೆ. ಆ ಗ್ರಾಮದ 109 ಮಂದಿಗೆ ಇದೇತಿಂಗಳ 25ರೊಳಗೆ ಲಸಿಕೆ ನೀಡಬೇಕೆನ್ನುವ ಗುರಿಹೊಂದಲಾಗಿದೆ. ವ್ಯಾಕ್ಸಿನ್ ತೆಗೆದುಕೊಂಡರೆ ಸಾವುಸಂಭವಿಸುತ್ತದೆ ಎಂಬ ತಪ್ಪು ಕಲ್ಪನೆಯಿಂದ ಗ್ರಾಮದಮಂದಿ ಹಿಂದೇಟು ಹಾಕುತ್ತಿದ್ದರು. ಹೀಗಾಗಿಯೇಲಸಿಕೆಗೆ ಅತ್ಯಗತ್ಯ ದಾಖಲೆಗಳಾದ ಆಧಾರ್ ಕಾರ್ಡ್‌ಮರೆ ಮಾಚುವುದು, ಮೊಬೈಲ್ ಇಲ್ಲ ಎಂಬ ಕಾರಣಗಳನ್ನು ಹೇಳಿ ಲಸಿಕೆ ಪಡೆದುಕೊಳ್ಳುತ್ತಿಲ್ಲ ಎಂದುಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಲಸಿಕೆ ಪಡೆಯಲು ಹಿಂದೇಟು ಹಾಕಿದರೆತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿಹಾಗೂ ಆರೋಗ್ಯ ಇಲಾಖೆ ಜನರಲ್ಲಿ ಅರಿವುಮೂಡಿಸಿ ಲಸಿಕೆ ನೀಡುವ ಮೂಲಕ ಇಂತಿಷ್ಟು ಗುರಿಸಾಧಿಸಬೇಕು. ಸೋಂಕು ತಡೆಗೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ತಾಲೂಕು ಆರೋಗ್ಯಾಧಿಕಾರಿಡಾ. ರವಿಕುಮಾರ್, ಡಾ.ಅಲೀಂಪಾಷ ಮತ್ತುಗ್ರಾಪಂ ಪಿಡಿಒ ಶಿಲ್ಪಾ, ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರು ಗ್ರಾಮಕ್ಕೆ ಭೇಟಿ ನೀಡಿ ಜನರಮನ ಒಲಿಸಿ ಒಂದೇ ದಿನದಲ್ಲಿ 25 ಮಂದಿಗೆ ಲಸಿಕೆಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಮನೆಗೆ ತೆರಳಿ ಮನವೊಲಿಸುವ ಕಾರ್ಯನಿರಂತರವಾಗಿ ಸಾಗಿದರೂ ಜನ ಮಾತ್ರ ಸ್ಪಂದಿಸುತ್ತಿಲ್ಲಎಂಬ ಆರೋಪಗಳು ಕೇಳಿ ಬಂದಿವೆ. ಸಾರ್ವಜನಿಕರುಊಹಾಪೋಹಕಗಳಿಗೆ ಕಿವಿ ಗೊಡದೆ ಸೋಂಕುತಡೆಗಟ್ಟುವ ಉದ್ದೇಶದಿಂದ ಕೂಡಲೇ ಸರ್ಕಾರಿತೆರೆದಿರುವ ಆರೋಗ್ಯ ಕೇಂದ್ರಗಳಿಗೆ ತೆರಳಿಸಿ ಉಚಿತಲಸಿಕೆ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳುಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.