ಮುಂಗಾರು ಮಳೆಗೆ ನವವಸಂತ ಗ್ರೀನ್ ಸಿಗ್ನಲ್
Team Udayavani, Apr 17, 2021, 3:20 PM IST
ತಿಪಟೂರು: ಯುಗಾದಿ ಮಾರನೇ ದಿನವಾದ ವರ್ಷದ ತೊಡಕಿನ ದಿನದಿಂದ ಸಣ್ಣಮಟ್ಟಿಗಿನ ಗುಡುಗು-ಮಿಂಚಿನೊಂದಿಗೆ ಆರಂಭವಾಗಿರುವ ಪೂರ್ವ ಮುಂಗಾರು ಮಳೆಯಾದ ಅಶ್ವಿನಿ ಮಳೆ,ತಾಲೂಕಿನ ಕೆಲವು ಭಾಗಗಳಿಗೆ ಸುರಿಯುವ ಮೂಲಕ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ತಾಲೂಕಿನಲ್ಲಿ ಕಳೆದೆರಡು ತಿಂಗಳಿಂದಲೂ ಇದ್ದಬಿರು ಬೇಸಿಗೆಯ ಬಿಸಿಲಿನ ಹೊಡೆತಕ್ಕೆ ತೆಂಗು, ಅಡಿಕೆ, ಬಾಳೆ ಮತ್ತಿತರೆ ತೋಟಗಾರಿಕೆ, ತರಕಾರಿ ಬೆಳೆ ಗಳುನೀರಿಲ್ಲದೆ ನಲುಗಿ ಹೋಗಿದ್ದವು.
ಅಂತ ರ್ಜ ಲದ ಅಭಾವದಲ್ಲೂ ರೈತರು ಪಂಪ್ ಸೆಟ್‌ಗಳ ಮು ಖಾಂತರ ನೀರು ಹಾಯಿಸಲು ಹರಸಾಹಸ ಪಡು ತ್ತಿದ್ದರು.ಎಷ್ಟೇ ನೀರು ಹಾಯಿಸಿದರೂ ಧಗೆಗೆ ಒಂದೆರಡು ಗಂಟೆಗೆಲ್ಲ ನೀರು ಆವಿಯಾಗಿ ಬಿಡುತ್ತಿತ್ತು. ಬೆಳೆಗಳೆಲ್ಲಾ ಬಾಡುವ ಸ್ಥಿತಿ ತಲುಪಿ ಮಳೆರಾಯಯಾವಾಗ ಕೃಪೆ ತೋರುವನೋ ಎಂದು ರೈತರು ಆಕಾಶದತ್ತ ದಿಟ್ಟಿಸುತ್ತಿದ್ದರು.
ಯುಗಾದಿ ಕಳೆದ ತಕ್ಷಣಈ ಬಾರಿ ಮಳೆ ಬರುವುದು ಗ್ಯಾರಂಟಿ ಎಂದುಬಿಸಿಲಿನ ತಾಪ ನೋಡಿ ಜನರು ಮಾತಾಡಿಕೊಳ್ಳುತ್ತಿದ್ದಸಂದರ್ಭದಲ್ಲೇ ವರ್ಷದ ತೊಡಕು ಬುಧವಾರ, ಗುರುವಾರ ತಾಲೂಕಿನಲ್ಲಿ ಮಳೆರಾಯ ಶುಭ ಶಕುನನೀಡಿದ್ದು, ಮಳೆ ಬಿದ್ದಿರುವ ಭಾಗದ ರೈತರ ಮಾಗಿ ಉಳುಮೆ ಪ್ರಾರಂಭಿಸಿ ಬಿಟ್ಟಿದ್ದಾರೆ.
ಬೀಜ, ಗೊಬ್ಬರ ಹುಡುಕಾಟ: ರೈತರು ತಮ್ಮ ಜಮೀನುಗಳ ಮಾಗಿ ಉಳುಮೆ ಮಾಡುವುದರಿಂದ ಮಳೆ ಬಂದಾಗ ಭೂಮಿ ಹೆಚ್ಚು ನೀರುಇಂಗಿಸಿಕೊಳ್ಳುವುದರಿಂದ ಮುಂದೆ ಬಿತ್ತುವಬೆಳೆಗಳಿಗೆ ತೇವಾಂಶ ಹೆಚ್ಚು ಕಾಲ ಸಿಗುವುದು.ಎಲ್ಲಕ್ಕಿಂತ ಹೆಚ್ಚಾಗಿ ಈ ಭಾಗದಲ್ಲಿ ಪೂರ್ವಮುಂಗಾರು ಬೆಳೆಗಳಾಗಿ ಹೆಸರು, ಉದ್ದು, ಎಳ್ಳು,ಜೋಳ ಮತ್ತು ತೊಗರಿ ಬಿತ್ತುವುದು ವಾಡಿಕೆ.
ಹಾಗಾಗಿ ಮಳೆ ಬಿದ್ದಿರುವ ಪ್ರದೇಶಗಳಲ್ಲಿ ರೈತರುಬಿತ್ತನೆಗೆ ಅಣಿಯಾಗಲು ಬೀಜ, ಗೊಬ್ಬರಹುಡುಕಾಟದಲ್ಲಿರುವುದು ಕಂಡು ಬರುತ್ತಿದೆ.
ಜಬಾಬ್ದಾರಿ ಮರೆತ ಸರ್ಕಾರ: ರೈತರಿಗೆ ಮಳೆಬಾರದಿದ್ದರೆ ಒಂದು ಚಿಂತೆ. ಆದರೆ, ಮಳೆ ಬಂದರೆ ಖುಷಿಯ ಜೊತೆಗೆ ಏಳೆಂಟು ಚಿಂತೆ ಎಂಬುದುಎದ್ದು ಕಾಣುತ್ತಿದ್ದು, ಕೊರೊನಾ 2ನೇ ಅಬ್ಬರ, ಸೀಡಿರಗಳೆ, ಬೈ ಎಲೆಕ್ಷನ್ ಸೋಲು-ಗೆಲುವು, ಮಿನಿಲಾಕ್‌ಡೌನ್, ಲಾಕ್‌ಡೌನ್ ನಂತಹ ಹತ್ತಾರು ಚಿಂತೆಗಳಲ್ಲೇ ಮುಳುಗಿ ಹೋಗಿರುವ ಸರ್ಕಾರರೈತರಿಗೆ ಸಬ್ಸಿಡಿ ದರದಲ್ಲಿ ಬೀಜ, ಗೊಬ್ಬರ, ಬಾಡಿಗೆ ಟ್ರಾಕ್ಟರ್, ಯಂತ್ರಗಳನ್ನು ಒದಗಿಸುವ ಬಗ್ಗೆ ಇರುವಗುರುತರ ಜಬಾಬ್ದಾರಿಯನ್ನೇ ಮರೆತು ಗೊಂದಲಗಳ ಗೂಡಿನಲ್ಲಿ ಮುಳುಗಿರುವುದು ನೋಡಿದರೆ ಹೊಸ ವರ್ಷದ ಕೃಷಿ, ಕೃಷಿಚಟುವಟಿಕೆಗಳು ಎತ್ತ ಸಾಗುತ್ತವೋ ಕಾಯ್ದುನೋಡಬೇಕಾಗಿದೆ.
ಬಿ.ರಂಗಸ್ವಾಮಿ, ತಿಪಟೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.