1249.60 ಲಕ್ಷ ರೂ. ಉಳಿತಾಯ ಬಜೆಟ್
Team Udayavani, Apr 17, 2021, 6:43 PM IST
ದಾವಣಗೆರೆ: ಮಹಾನಗರ ಪಾಲಿಕೆಯ 2021-22ನೇ ಸಾಲಿಗೆ 1249.60 ಲಕ್ಷ ರೂಪಾಯಿಯ ಉಳಿತಾಯ ಬಜೆಟ್ ನ್ನು ಮೇಯರ್ ಎಸ್.ಟಿ. ವೀರೇಶ್ ಮಂಡಿಸಿದರು.
ಶುಕ್ರವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ 45 ನಿಮಿಷಗಳ ಕಾಲ, 39 ಕಾರ್ಯಕ್ರಮಗಳ ಆಯವ್ಯಯ ಪತ್ರ ಮಂಡಿಸಿ, ಸಭೆಯ ಅನುಮೋದನೆ ಕೋರಿದರು.
ಸಾಕಷ್ಟು ಚರ್ಚೆ ನಂತರ ಸಭೆ ಪ್ರಸಕ್ತ ಸಾಲಿನ ಬಜೆಟ್‌ಗೆ ಅನುಮೋದನೆ ನೀಡಿತು. 2021-22ನೇ ಸಾಲಿನಲ್ಲಿ ರಾಜ್ಯ ಹಣಕಾಸು ಆಯೋಗದ ಮುಕ್ತ ನಿಧಿಯಿಂದ ರಾಜ್ಯ ಸರ್ಕಾರ 672 ಲಕ್ಷ ಹಂಚಿಕೆ ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 2476 ಲಕ್ಷ ವಿದ್ಯುತ್ ಅನುದಾನ ಹಂಚಿಕೆ ಮಾಡಲಾಗಿದೆ. ನಗರಪಾಲಿಕೆಯ ಕಾಯಂ, ನೇರ ಪಾವತಿ, ಗುತ್ತಿಗೆ ಆಧಾರಿತ ನೌಕರರ ವೇತನಕ್ಕಾಗಿ 3796 ಲಕ್ಷ ನೀಡಲಾಗಿದೆ. 15ನೇ ಕೇಂದ್ರ ಹಣಕಾಸು ಆಯೋಗದಿಂದ 2579 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿದೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಈಗಾಗಲೇ 2500 ಲಕ್ಷ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ನಗರ ವ್ಯಾಪ್ತಿಯಲ್ಲಿನ ಕಟ್ಟಡ, ಖಾಲಿ ನಿವೇಶನಗಳ ಮೇಲೆ ವಿಧಿಸಲಾಗುವ ತೆರಿಗೆಯಿಂದ 2200 ಲಕ್ಷ, ವಾಣಿಜ್ಯ ಮಳಿಗೆಗಳಿಂದ 55 ಲಕ್ಷ, ನೀರಿನ ಕಂದಾಯದಿಂದ 600 ಲಕ್ಷ, ನೀರು ಸರಬರಾಜು ಸಂಪರ್ಕ ಶುಲ್ಕದ ರೂಪದಲ್ಲಿ 25 ಲಕ್ಷ, ಒಳಚರಂಡಿ ಸಂಪರ್ಕ ಬಳಕೆದಾರರ ಶುಲ್ಕದ ರೂಪದಲ್ಲಿ 75 ಲಕ್ಷ, ಹೊಸ ಸಂಪರ್ಕಗಳಿಂದ 25 ಲಕ್ಷ, ಸಂತೆ, ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಂದ 50 ಲಕ್ಷ ಸುಂಕ, ಘನ ತ್ಯಾಜ್ಯ ನಿರ್ವಹಣೆ ಬಳಕೆದಾರರಿಂದ 35 ಲಕ್ಷ, ಕಟ್ಟಡ ಪರವಾನಿಗೆಯಿಂದ 100 ಲಕ್ಷ ಶುಲ್ಕ, ಉದ್ದಿಮೆ ಪರವಾನಿಗೆಯಿಂದ 80 ಲಕ್ಷ ಒಳಗೊಂಡಂತೆ ಒಟ್ಟಾರೆಯಾಗಿ ನಗರಪಾಲಿಕೆಯ ಸ್ವಂತ ಮೂಲಗಳಿಂದ 3991.85 ಲಕ್ಷ ಅನುದಾನ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.
ದೈನಂದಿನ ಆಡಳಿತ ನಿರ್ವಹಣಾ ವೆಚ್ಚವಾಗಿ 361.75 ಲಕ್ಷ, ಮಾನವ ಸಂಪನ್ಮೂಲ ವೆಚ್ಚವಾಗಿ 3784.50 ಲಕ್ಷ, ಮೂಲಭೂತ ಸೌಕರ್ಯ ಆಸ್ತಿಗಳ ನಿರ್ವಹಣೆ ಮತ್ತು ದುರಸ್ತಿಗೆ 750 ಲಕ್ಷ, ಹೊರ ಗುತ್ತಿಗೆಗಾಗಿ 685 ಲಕ್ಷ, ಉಗ್ರಾಣ ಸಾಮಗ್ರಿ ಖರೀದಿಗೆ 185 ಲಕ್ಷ, ಇಂಧನ ವೆಚRಕ್ಕಾಗಿ 3380 ಲಕ್ಷ ಅಂದಾಜು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಒಟ್ಟಾರೆಯಾಗಿ 2021-2ನೇ ಸಾಲಿನ ಬಜೆಟ್ ಆರಂಭಿಕ ಶಿಲ್ಕು 8414.50 ಲಕ್ಷ, 12710.85 ಲಕ್ಷ ರಾಜಸ್ವ ಸ್ವೀಕೃತಿ, 9970 ಲಕ್ಷ ಬಂಡವಾಳ ಸ್ವೀಕೃತಿ, 12234 ಲಕ್ಷ ಅಸಾಮಾನ್ಯ ಸ್ವೀಕೃತಿ ಒಳಗೊಂಡಂತೆ ಒಟ್ಟು 43329.35 ಲಕ್ಷ ಸ್ವೀಕೃತಿ ಹೊಂದಿದೆ.
ಅಂತೆಯೇ 11431.25 ಲಕ್ಷ ರಾಜಸ್ವ ಪಾವತಿ, 14643 ಲಕ್ಷ ಬಂಡವಾಳ ಪಾವತಿ, 16005 ಲಕ್ಷ ಅಸಾಮಾನ್ಯ ಪಾವತಿ ಒಳಗೊಂಡಂತೆ ಒಟ್ಟಾರೆ 42079.75 ಲಕ್ಷ ಪಾವತಿ ಹೊಂದಿದೆ. ಒಟ್ಟು 43329.35 ಲಕ್ಷ ಸ್ವೀಕೃತಿಯಲ್ಲಿ 42079.75 ಪಾವತಿ ಮಾಡಿದರೆ 1249.60 ಲಕ್ಷ ಉಳಿತಾಯ ಆಗುತ್ತದೆ ಎಂದು ವೀರೇಶ್ ಮಾಹಿತಿ ನೀಡಿದರು. ಬಿಜೆಪಿ ಸದಸ್ಯರು ಬಜೆಟ್‌ನ್ನು ಸ್ವಾಗತಿಸಿದರು. ಕಾಂಗ್ರೆಸ್ ಸದಸ್ಯರು ಕೆಲವಾರು ಸಲಹೆ ನೀಡಿದರು.
ಸಾಕಷ್ಟು ಚರ್ಚೆಯ ನಂತರ ಸಭೆ ಪ್ರಸಕ್ತ ಸಾಲಿನ ಆಯವ್ಯಯಕ್ಕೆ ಅನುಮೋದನೆ ನೀಡಿತು. ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.