ಕೋವಿಡ್ ಸೋಂಕು ನಿಯಂತ್ರಣದಲ್ಲಿ ಕೇಂದ್ರ ವಿಫಲ : ಮೋದಿ ರಾಜಿನಾಮೆಗೆ ದೀದಿ ಒತ್ತಾಯ
Team Udayavani, Apr 18, 2021, 6:12 PM IST
ಪಶ್ಚಿಮ ಬಂಗಾಳ : ಕೋವಿಡ್ 19 ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿರುವುದಕ್ಕಾಗಿ ರಾಜಿನಾಮೆ ಕೊಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಕೋವಿಡ್ ನ ಎರಡನೇ ಅಲೆಯ ಕಾರಣದಿಂದಾಗಿ ದೇಶದಲ್ಲಿ ಬಿಕ್ಕಟ್ಟನ್ನು ಪರಿಸಲು ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ದೇಶದಲ್ಲಿಯೇ ಕೋವಿಡ್ ನಿಯಂತ್ರಣ ಮಾಡುವುದಕ್ಕಾಗದ ಮೋದಿ, ಲಸಿಕೆಗಳನ್ನು ಇತರ ದೇಶಗಳಿಗೆ ಪೂರೈಸಿದ್ದಾರೆ. ದೇಶದಲ್ಲಿ ಲಸಿಕೆಗಳ ಕೊರತೆ ಇರುವುದು ಮೋದಿಯವರಿಗೆ ಕಾಣಿಸಲಿಲ್ಲ ಎಂದು ಮಮತಾ ಆರೋಪಿಸಿದ್ದಾರೆ.
ಓದಿ : ಹುಳಿಯಾರಿಗೆ ಬರುವ ಪ್ರತಿಯೊಬ್ಬರಿಗೂ ಧೂಳಿನ ಮಜ್ಜನ!
ದೇಶದಲ್ಲಿ ಕೋವಿಡ್ ಪ್ರಕರಣಗಳು ಇಷ್ಟರ ಮಟ್ಟಿಗೆ ಏರಿಕೆಯಾಗಿರುವುದಕ್ಕೆ ಮೋದಿ ತೆಗೆದುಕೊಂಡಿರುವ ನಿರ್ಧಾರಗಳೇ ಕಾರಣ ಎಂದಿರುವ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿಯವರ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಆಡಳಿತಾತ್ಮಕ ಯೋಜನೆಯನ್ನು ಕೈಗೊಳ್ಳುವಲ್ಲಿ ಮೋದಿ ವೈಫಲ್ಯ ಎದ್ದು ಕಾಣುತ್ತಿದೆ. ದೇಶದ ಪ್ರಸ್ತುತ ಸ್ಥಿತಿಗೆ ಮೋದಿಯೇ ಕಾರಣ ಎಂದು ಆಕ್ರೋಶ ಹೊರ ಹಾಕಿದ್ದಾರೆ. 2021 ನೇ ಸಾಲಿಗೆ ಯಾವುದೇ ಆಡಳಿತಾತ್ಮಕ ನಿರ್ಧಾರಗಳನ್ನು ಅವರು ತೆಗೆದುಕೊಂಡಿಲ್ಲ. ಗುಜರಾತ್ ನ ಪರಿಸ್ಥಿತಿಯನ್ನು ಗಮನಿಸಿ, ಗುಜರಾತ್ ನಲ್ಲಿಯೂ ಸಹ ಬಿಜೆಪಿಗೆ ಕೋವಿಡ್ 19 ಸೋಂಕನ್ನು ನಿಭಾಯಿಸಲು ಸಾಧ್ಯವಾಗಿಲ್ಲ. ಪಶ್ಚಿಮ ಬಂಗಾಳ ಸೇರಿದಂತೆ ಇಡೀ ದೇಶ ಕೋವಿಡ್ ನ ಕಾರಣದಿಂದಾಗಿ ಕೆಟ್ಟ ಪರಿಸ್ಥಿತಿಗೆ ಬಂದು ತಲುಪಿದೆ. ಅದು ಮೋದಿ ಕೈಗೊಂಡ ನಿರ್ಧಾರಗಳಿಂದಲೇ ಎಂದು ಮಮತಾ ಗುಡುಗಿದ್ದಾರೆ.
ಇನ್ನು, ಪಶ್ಚಿಮ ಬಂಗಾಳದ ಕೋವಿಡ್ ಪರಿಸ್ಥಿತಿಯನ್ನು ಉಲ್ಲೇಖಿಸಿದ ಮಮತಾ, ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಉಚಿತವಾಗಿ ಲಸಿಕೆ ನೀಡಲು ಉದ್ದೇಶದಿಂದ ಪಶ್ಚಿಮ ಬಂಗಾಳ ಸರ್ಕಾರ 5.4 ಕೋಟಿ ಡೋಸ್ ಲಸಿಕೆ ಕೇಳಿತ್ತು, ಆ ಕುರಿತಾಗಿ ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನಾವು ಪಡೆದಿಲ್ಲ ಎಂದಿದ್ದಾರೆ.
ಓದಿ : ಶಾಂತನಗೌಡರ ಶಾಸಕರಾಗಿದ್ದಾಗ ಮಾಡಿದ ಸಾಧನೆ ಮುಂದಿಡಲಿ
ಈ ವಿಷಯದ ಬಗ್ಗೆ ನಾನು ಇಂದು ಪ್ರಧಾನ ಮಂತ್ರಿಗೆ ಪತ್ರವನ್ನು ಕಳುಹಿಸುತ್ತೇನೆ. ಇಡೀ ದೇಶದಲ್ಲಿ ಆಮ್ಲಜನಕ ಮತ್ತು ರೆಮ್ಡೆಸಿವಿರ್ ಕೊರತೆಯಿದೆ. ಇದಕ್ಕೆ ಯಾರು ಕಾರಣ? ದೇಶದ ಪ್ರತಿಯೊಬ್ಬ ನಿವಾಸಿಗಳಿಗೆ ಲಸಿಕೆ ಹಾಕುವಂತೆ ಕೋರಿ ಪತ್ರ ಕಳುಹಿಸುತ್ತೇನೆ ಎಂದು ಮಮತಾ ಹೇಳಿರುವುದನ್ನು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
80 ದೇಶಗಳಿಗೆ ಕೋವಿಡ್ ಲಸಿಕೆಯನ್ನು ರವಾನೆ ಮಾಡಿರುವುದನ್ನು ಉಲ್ಲೇಖಿಸಿದ ಮಮತಾ, ಇತರ ದೇಶಗಳಿಗೆ ಲಸಿಕೆಯನ್ನು ಪೂರೈಸಿರುವುದರ ಬಗ್ಗೆ ನಮಗೆ ಏನು ಆಕ್ಷೇಪವಿಲ್ಲ. ಆದರೇ, ದೇಶದಲ್ಲಿ ಲಸಿಕೆಗಳ ಕೊರತೆ ಇದೆ. ಸೋಂಕು ಹೆಚ್ಚಳವಿರುವ ಮಹಾರಾಷ್ಟ್ರ, ಉತ್ತರ ಪ್ರದೇಶ, ಬಂಗಾಳ ಸೇರಿ ದೇಶದ ಎಲ್ಲಾ ರಾಜ್ಯಗಳಿಗೆ ಮೊದಲು ಲಸಿಕೆಗಳನ್ನು ಪೂರೈಸಿ. ಮೋದಿ ಇದನ್ನು ಮಾಡುವುದರಲ್ಲಿ ವಿಫಲರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು ಮಾತ್ರ ಅವರ ಉದ್ದೇಶವಾಗಿತ್ತು ಎಂದು ಅವರು ಹೇಳಿದ್ದಾರೆ.
ಓದಿ : ದೇಶದಲ್ಲಿ ಕೋವಿಡ್ ಉಲ್ಬಣ : ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.