ಕಲ್ಲು ಸಂಕ ಸಂರಕ್ಷಣೆ ಕಾಮಗಾರಿಗೆ ಚಾಲನೆ
ಪಾಕೃತಿಕ ಕೊಡುಗೆ ಮುಂದಿನ ತಲೆಮಾರಿಗಾಗಿ ರಕ್ಷಿಸಬೇಕಿದೆ: ಕಾಗೇರಿ
Team Udayavani, Apr 18, 2021, 6:59 PM IST
ಸಿದ್ದಾಪುರ: ಪಾಕೃತಿಕ ಕೊಡುಗೆಗಳು ಮುಂದಿನ ತಲೆಮಾರಿಗಾಗಿ ಸಂರಕ್ಷಣೆಗೊಳ್ಳಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಮಲವಳ್ಳಿಯ ನಿಸರ್ಗ ನಿರ್ಮಿತ ಕಲ್ಲು ಸಂಕದ ಆವರಣದಲ್ಲಿ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರವು ಯೋಜಿಸಿದ 20 ಲಕ್ಷ ರೂ. ಅನುದಾನದ ಕಲ್ಲು ಸಂಕದ ಸಂರಕ್ಷಣೆ ಕಾಮಗಾರಿಗೆ ಚಾಲನೆ ನೀಡಿದರು.
ಕಲ್ಯಾಣಿ, ದೇವಾಲಯ, ಕೋಟೆ ಕೊತ್ತಲಗಳಂತಹ ಪಾರಂಪರಿಕ ಸಂಪತ್ತು ಜಿಲ್ಲೆಯಾದ್ಯಂತ ಇದೆ. ನಿರ್ಲಕ್ಷಿತವಾದ ಅವುಗಳನ್ನು ಸಂರಕ್ಷಣೆಗಾಗಿ ಶಿವಮೊಗ್ಗಾ, ಕಾರವಾರ, ಚಿಕ್ಕಮಗಳೂರು ಸೇರಿದಂತೆ ಮೂರು ಜಿಲ್ಲೆಯ ವ್ಯಾಪ್ತಿಯುಳ್ಳ ಪ್ರಾಧಿಕಾರ 2012ರಲ್ಲಿಯೇ ಅಸ್ತಿತ್ವಕ್ಕೆ ಬಂದಿದೆ. ಕಲ್ಲುಸಂಕದ ಸಂರಕ್ಷಣೆ ಅತ್ಯಂತ ಸೂಕ್ಷ್ಮ, ನಾಜೂಕಿನ ಕಾರ್ಯವಾಗಿದ್ದು, ಕಾಮಗಾರಿ ಮಾಡುವುದು ಸವಾಲಿನ ಕೆಲಸವಾಗಿದೆ. ಸಣ್ಣ ವ್ಯತ್ಯಾಸವೂ ಕಲ್ಲು ಸಂಕವನ್ನು ಪುಡಿ ಮಾಡಬಹುದು ಎಂದು ಎಚ್ಚರಿಸಿದ ಅವರು, ಜವಾಬ್ದಾರಿಯುತವಾಗಿ ಕಾಮಗಾರಿ ನಡೆಸಬೇಕು ಎಂದು ಪ್ರಾಧಿಕಾರ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಮಡಿವಾಳ, ಜಿಲ್ಲಾ ಪಂಚಾಯತ್ ಸದಸ್ಯೆ ಸುಮಂಗಲಾ, ತಾಲೂಕು ಪಂಚಾಯತ್ ಅಧ್ಯಕ್ಷ ಸುಧೀರ್ ಗೌಡರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಬಲೇಶ್ವರ ಹೆಗಡೆ, ತಾಪಂ ಸದಸ್ಯೆ ಪದ್ಮಾವತಿ ಮಡಿವಾಳ, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮಾ, ಸದಸ್ಯರಾದ ಶಿವಾನಂದ ಹೆಗಡೆ ಕೆರೆಮನೆ, ಶ್ರೀಪಾದ ಬಿಚ್ಚುಗತ್ತಿ, ನಿರ್ಮಿತಿ ಕೇಂದ್ರದ ಅಭಿಯಂತರ ಕುಮಾರ್, ಗ್ರಾಮಸ್ಥರಾದ ಲಕ್ಷ್ಮೀನಾರಾಯಣ ಹೆಗಡೆ ಕಲಗಾರು, ಗುರುಮೂರ್ತಿ ಹೆಗಡೆ ಮಲವಳ್ಳಿ, ವಸಂತ ನಾಯ್ಕ, ತಿಮ್ಮಪ್ಪ ಹೆಗಡೆ, ಹರ್ಷ ಹೆಗಡೆ, ಸತ್ಯ ಮನ್ಮನೆ, ಶ್ರೀನಿವಾಸ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.