![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 18, 2021, 7:45 PM IST
ಬೀದರ : ಬಸವಕಲ್ಯಾಣ ಉಪ ಚುನಾವಣೆ ಮತದಾನ ದಿನವಾದ ಶನಿವಾರ ತಮ್ಮ ಅಂಗರಕ್ಷಕ ಮತ್ತು ವಾಹನ ಚಾಲಕನು ತಮ್ಮ ಹಕ್ಕು ಚಲಾಯಿಸಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸಹಕರಿಸಿ ಗಮನ ಸೆಳೆದರು.
ಅಂಗರಕ್ಷಕ ಹನುಮಂತ ರೆಡ್ಡಿ ಮತ ಚಲಾಯಿಸಬೇಕಾದ ಇಲ್ಲಾಳ ಗ್ರಾಮದ ಮತಗಟ್ಟೆ ಸಂಖ್ಯೆ 175ಕ್ಕೆ ಮತ್ತು ವಾಹನ ಚಾಲಕನು ಮತದಾನ ಚಾಯಿಸಬೇಕಾದ ಮುಚಳಂಬ ಗ್ರಾಮದ ಮತಗಟ್ಟೆ ಸಂಖ್ಯೆ 40ಗೆ ಜಿಲ್ಲಾ ಧಿಕಾರಿಗಳು ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಪರಿಶೀಲಿಸಿ, ತಮ್ಮ ಕರ್ತವ್ಯಪಾಲನೆ ಜತೆಗೆ ತಮ್ಮ ಇಬ್ಬರು ಸಿಬ್ಬಂದಿಗಳ ಮತದಾನಕ್ಕೆ ಅವಕಾಶ ಕಲ್ಪಿಸಿದರು.
ಅಭಿನಂದನೆ ತಿಳಿಸಿದ ಅಂಗರಕ್ಷಕ: ಇಲ್ಲಾಳ ಮತಗಟ್ಟೆಯಲ್ಲಿ ಮತದಾನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹನುಮಂತ ರೆಡ್ಡಿ, ಮತದಾನ ದಿನದಂದು ಜಿಲ್ಲಾಧಿಕಾರಿಗಳ ಅಂಗರಕ್ಷಕ ಸೇವೆಯ ಜತೆಗೆ ಮತದಾನ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಟ್ಟ ಜಿಲ್ಲಾಧಿಕಾರಿಗಳಿಗೆ ವಂದನೆಗಳು ಎಂದು ತಿಳಿಸಿದರು.
ಅಂಗರಕ್ಷಕ ಮತದಾನ ಮಾಡಿದ ಬಳಿಕ ಡಿಸಿ, ತಮ್ಮ ವಾಹನ ಚಾಲಕನಾದ ಪಾಪನಾಶ ಅವರನ್ನು ಇಲ್ಲಾಳದಿಂದ ಮುಚಳಂಬ ಗ್ರಾಮಕ್ಕೆ ಮತದಾನ ಮಾಡಲು ಕರೆದುಕೊಂಡು ಬಂದರು. ಪಾಪನಾಶ ಅವರು, ಮುಚಳಂಬ ಗ್ರಾಮದ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ 40ರಲ್ಲಿ ಮತದಾನ ಜಿಲ್ಲಾಧಿ ಕಾರಿಗಳಿಗೆ ಅಭಿನಂದಿಸಿದರು.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.