ರನ್ ವೇ ಉನ್ನತೀಕರಣಕ್ಕೆ ಪ್ರಸ್ತಾವನೆ
Team Udayavani, Apr 18, 2021, 8:02 PM IST
ವಿಜಯಪುರ: ಈಗಾಗಲೇ ನಿರ್ಮಾಣ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣದಲ್ಲಿರುವ ಮೊದಲ ಹಂತದ ಕಾಮಗಾರಿ ಭರದಿಂದ ಸಾಗಿದ್ದು, ನಿಗದಿಗಿಂತ ಒಂದು ತಿಂಗಳ ಮೊದಲೇ ಕಾಮಗಾರಿ ಮುಗಿಯಲಿದೆ.
ಇದೇ ವೇಳೆ ಸರಕು ಸಾಗಿಸುವ ಬೃಹತ್ ವಿಮಾನಗಳು ಇಳಿಯಲು ಅವಕಾಶ ಕಲ್ಪಿಸುವ ರನ್ ವೇ ಉನ್ನತೀಕರಣಕ್ಕೆ 90 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಮಾಜಿ ಸಚಿವರೂ ಆಗಿರುವ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಶನಿವಾರ ಮದಭಾವಿ-ಬುರಣಾಪುರ ಪ್ರದೇಶದಲ್ಲಿ ಉದ್ದೇಶಿತ ವಿಜಯಪುರ ವಿಮಾನ ನಿಲಾœಣ ಯೋಜನಾ ಪ್ರದೇಶದಲ್ಲಿ ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಅವರು, ಸದ್ಯ 80ಆರ್72 ಮಾದರಿಯಲ್ಲಿ ಕೇವಲ ಪ್ರಯಾಣಿಕರ ಸಣ್ಣ ವಿಮಾನ ಇಳಿಯುವ ವ್ಯವಸ್ಥೆಯ ರನ್‌ವೇ ನಿರ್ಮಿಸಲಾಗುತ್ತಿದೆ.
ಆದರೆ ರಫ್ತು ಗುಣಮಟ್ಟದ ದ್ರಾಕ್ಷಿ, ಲಿಂಬೆ, ದಾಳಿಂಬೆಯಂಥ ತೋಟಗಾರಿಕೆ ಬೆಳೆ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ರೈತರ ಉತ್ಪನ್ನಗಳು ವಿದೇಶಕ್ಕೆ ರವಾನಿಸಲು ಅವಕಾಶ ಕಲ್ಪಿಸಬೇಕಿದೆ. ಹೀಗಾಗಿ ಸರಕು ಸಾಗಾಣಿಕೆಯ ಬೃಹತ್ ಸಾಮರ್ಥ್ಯದ ವಿಮಾನ ಇಳಿಯುವ ವ್ಯವಸ್ಥೆ ಕಲ್ಪಿಸಲು ಯೋಜಿಸಿದೆ ಎಂದರು. ಇದಕ್ಕಾಗಿ 3 ಕಿ.ಮೀ. ಉದ್ದದ ಹಾಗೂ 40 ಮೀಟರ್ ಅಗಲದ ರನ್‌ವೇ ಮಾಡಬೇಕಿದೆ. ಒಂದೊಮ್ಮೆ ಇದೀಗ ನಡೆದಿರುವ ಕಾಮಗಾರಿಯಂತೆ 2050 ಮೀಟರ್ ಉದ್ದ ಹಾಗೂ 30 ಮೀಟರ್ ಅಗಲದ ರನ್‌ವೇ ಮಾಡಿದಲ್ಲಿ ಭವಿಷ್ಯದಲ್ಲಿ ಉನ್ನತೀಕರಣಕ್ಕೆ ಈ ರನ್‌ವೇ ಕಿತ್ತು ಹಾಕಿಯೇ ಉನ್ನತೀಕರಿಸಬೇಕು.
ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂ. ನಷ್ಟವಾಗಲಿದೆ. ನಮ್ಮಲ್ಲಿ ಅಗತ್ಯ ಸ್ಥಳ ಇರುವ ಕಾರಣ ಈಗಲೇ ದೊಡ್ಡ ಪ್ರಮಾಣದ ವಿಮಾನ ಇಳಿಯುವ ರನ್‌ವೇ ನಿರ್ಮಿಸುವ ಚಿಂತನೆ ನಡೆದಿದೆ ಎಂದರು. ದೊಡ್ಡ ಗಾತ್ರದ ಸರಕು ವಿಮಾನಗಳ ರನ್‌ವೇ ನಿರ್ಮಾಣಕ್ಕಾಗಿ ಮೂರನೇ ಹಂತದ ಯೋಜನೆ ರೂಪಿಸಿ, ತಾಂತ್ರಿಕ ಸಲಹೆ ನೀಡಿರುವ ಅ ಧಿಕಾರಿಗಳು ಇದಕ್ಕಾಗಿ 90 ಕೋಟಿ ರೂ. ವೆಚ್ಚದ ಅಂದಾಜು ಮಾಡಿದ್ದಾರೆ.
ಈ ಪ್ರಸ್ತಾವನೆ ಸಲ್ಲಿಸಿ ಕೇಂದ್ರ-ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ನನ್ನ ಕನಸಿನ ವಿಮಾನ ನಿಲ್ದಾಣ ಯೋಜನೆ ಮಾಡಿಯೇ ತೀರುತ್ತೇನೆ ಎಂದರು. ಈಗಾಗಲೇ 220 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತದ ಕಾಮವಾರಿ ರೂಪಿಸಿದ್ದು, ಮೊದಲ ಹಂತದಲ್ಲಿ 905 ಕೋಟಿ ರೂ. ಕಾಮಗಾರಿ ಭರದಿಂದ ನಡೆದಿದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಆಲೂರ ಹಸರಿನ ಗುತ್ತಿಗೆದಾರರು ಹಗಲು-ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದು, 11 ತಿಂಗಳ ಕಾಲಮಿತಿಯ ಕಾಮಗಾರಿ 10 ತಿಂಗಳಲ್ಲೇ ಮುಗಿಸುವ ನಿರೀಕ್ಷೆ ಇದೆ ಎಂದರು. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚಿನ ಹಣ ನೀಡಿ, ವಿಜಯಪುರ ವಿಮಾನ ನಿಲ್ದಾಣಕ್ಕೆ ಕಡಿಮೆ ಅನುದಾನದ ಕೊಟ್ಟು ತಾರತಮ್ಯ ಮಾಡಿದ್ದಾರೆ ಎಂಬ ವಾದ ಸರಿಯಲ್ಲ.
ಯಾವುದೇ ವ್ಯಕ್ತಿ ಅಧಿಕಾರಕ್ಕೆ ಬಂದಾಗ ತನ್ನ ತವರಿಗೆ ಹೆಚ್ಚಿನ ಆದ್ಯತೆಯ ಪ್ರೀತಿ ತೋರುವುದು ಸಾಮಾನ್ಯ. ಹಾಗಂತ ಇದನ್ನು ಅನ್ಯಾಯ ಮಾಡಿದ್ದಾರೆ ಎನ್ನಲಾದು. ಇಷ್ಟಕ್ಕೂ ಶಿವಮೊಗ್ಗಕ್ಕೂ, ವಿಜಯಪುರಕ್ಕೂ ಹೋಲಿಕೆ ಮಾಡದೇ ನಮಗೂ ಹೆಚ್ಚಿನ ಅನುದಾನ ನೀಡಿ ಎಂದು ಆಗ್ರಹಿಸುವುದು ಸೂಕ್ತ. ನಾನು ಇದನ್ನೇ ಮಾಡಲು ಹೊರಟಿದ್ದೇನೆ ಎಂದು ಸಮರ್ಥಿಸಿದರು. ಮೂಡಾ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರು, ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಘಟಕಾಂಬಳೆ, ಲೋಕೋಪಯೋಗಿ ಎಎ ಬಿ.ಬಿ. ಪಾಟೀಲ, ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.