ತಾಯಲೂರಲ್ಲಿ ಕಸ ವಿಲೇವಾರಿ ಮಾಡಿಲ್ಲ
Team Udayavani, Apr 19, 2021, 8:30 PM IST
ಮುಳಬಾಗಿಲು: ಗ್ರಾಪಂ ಸದಸ್ಯರೊಬ್ಬರು ಗ್ರಾಮದಲ್ಲಿಕಳೆದೊಂದು ತಿಂಗಳಿನಿಂದ ತ್ಯಾಜ್ಯ ವಿಲೇವಾರಿಮಾಡದೇ ಸಾರ್ವಜನಿಕರಿಗೆ ತೊಂದರೆಯಾಗಿದೆಎಂದು ಪಿಡಿಒ ಮಾಡಿರುವ ವಾಟ್ಸ್ ಆ್ಯಪ್ ಗ್ರೂಪ್‌ಗೆಹಾಕಿದ್ದಾರೆ. ಇದರಿಂದ ಕುಪಿತಗೊಂಡ ಪಿಡಿಒ, ತರ್ಲೆಸದಸ್ಯರು ಎಂದು ಹಾಕಿರುವ ವಿಚಾರ ಸಾಮಾಜಿಕಜಾಲತಾಣದಲ್ಲಿ ರಾರಾಜಿಸುತ್ತಿದೆ.
ತಾಲೂಕಿನ ತಾಯಲೂರು ಗ್ರಾಪಂ ವ್ಯಾಪ್ತಿಗೆತಾಯಲೂರು, ಅಗರ ಮತ್ತು ತಿರುಮನಹಳ್ಳಿಗ್ರಾಮಗಳು ಸೇರಿದ್ದು, ತಾಯಲೂರು ಗ್ರಾಮವುಹೋಬಳಿ ಕೇಂದ್ರವಾಗಿರುವುದರಿಂದ ಇಲ್ಲಿ ವಿವಿಧಇಲಾಖೆಗಳು ಕಾರ್ಯನಿರ್ವಹಿಸುತ್ತಿದೆ. ಹೋಬಳಿವ್ಯಾಪ್ತಿಯ 50ಕ್ಕೂ ಅಧಿಕ ಹಳ್ಳಿಗಳ ಜನರು ತಮ್ಮದೈನಂದಿನ ಕೆಲಸಕ್ಕಾಗಿ ಬಂದು ಹೋಗುತ್ತಾರೆ.
ಸಾವಿರಾರು ಜನರು ಇಲ್ಲಿ ವಾಸವಾಗಿದ್ದು, ವಾರಕ್ಕೊಮ್ಮೆನಡೆಯುವ ಸಂತೆ, ಅಂಗಡಿಗಳು, ಹೋಟೆಲ್‌ಗಳು,ಬೇಕರಿ, ಬಾರ್‌ಗಳು, ಮಾಂಸ, ತರಕಾರಿ ಸೇರಿದಂತೆಹಲವಾರು ರೀತಿಯ ಕುಲಕಸಬುಗಳನ್ನು ತಮ್ಮಜೀವನೋಪಾಯಕ್ಕಾಗಿ ಜನರು ಮಾಡುತ್ತಿದ್ದಾರೆ.ಇದರಿಂದ ಪ್ರತಿ ನಿತ್ಯ ಸಾಕಷ್ಟು ತ್ಯಾಜ್ಯಉತ್ಪತ್ತಿಯಾಗುತ್ತಿದೆ. ತಾಯಲೂರು ಗ್ರಾಪಂ ಕೇಂದ್ರಸ್ಥಾನದಲ್ಲಿ ಆಡಳಿತ ನಿರ್ವಹಣೆಗಾಗಿ ಗ್ರಾಪಂಕಾರ್ಯಾಲಯವಿದ್ದು, 10 ಗ್ರಾಪಂ ಸದಸ್ಯರು ಈಗ್ರಾಮದಲ್ಲಿಯೇ ಜನರಿಂದ ಆಯ್ಕೆಯಾಗಿದ್ದಾರೆ.
ಪ್ರತಿನಿತ್ಯ ತ್ಯಾಜ್ಯ ಉತ್ಪತ್ತಿ: ಮುಖ್ಯವಾಗಿ ಗ್ರಾಪಂಸದಸ್ಯರೇ ಹೇಳುವಂತೆ ವಾಣಿಜ್ಯ ವಹಿವಾಟುಗಳಹೆಚ್ಚು ನಡೆಯುವ ಒಂದು, ಮೂರು ಮತ್ತು ನಾಲ್ಕುಬ್ಲಾಕ್‌ಗಳಲ್ಲಿಯೇ ಪ್ರತಿನಿತ್ಯ ತ್ಯಾಜ್ಯಉತ್ಪತ್ತಿಯಾಗುತ್ತಿದೆ. ಈ ಕಸವನ್ನು ಸರಿಯಾದರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದುನಾಲ್ಕನೇ ಬ್ಲಾಕ್‌ನ ಸದಸ್ಯ ಜಾಲಾರಿ ಮಂಜುನಾಥ್,ಮೂರನೇ ಬ್ಲಾಕ್‌ನ ಸದಸ್ಯೆ ಗೌರಮ್ಮ, ಎರಡನೇಬ್ಲಾಕ್‌ನಿಂದ ಆಯ್ಕೆಯಾಗಿರುವ ಅಧ್ಯಕ್ಷೆ ಶೋಭಮ್ಮಮತ್ತು ಉಪಾಧ್ಯಕ್ಷೆ ಸುನಂದಮ್ಮ ಮತ್ತು ಒಂದನೇಬ್ಲಾಕ್‌ನ ಸದಸ್ಯರಾದ ರಮೇಶ್, ಪೂಜಾ ಮತ್ತುಪದ್ಮಮ್ಮ ಇವರು 2 ಗ್ರಾಪಂ ಸಭೆಗಳಲ್ಲಿ ಚರ್ಚಿಸಿ,ಪಿಡಿಒ ಮಂಗಳಾಂಭರಿಗೆ ತಿಳಿಸಲಾಗಿತ್ತು. ಆದರೆ,ಕಳೆದ ಒಂದು ತಿಂಗಳಿನಿಂದ ಸದರಿ ಬ್ಲಾಕ್‌ಗಳಲ್ಲಿ ಕಸವಿಲೇವಾರಿ ಮಾಡದ ಕಾರಣದಿಂದ ಸಾರ್ವಜನಿಕರಿಗೆಕಿರಿಕಿರಿ ಉಂಟಾಗಿದೆ ಎಂದು ಸದಸ್ಯ ಜಾಲಾರಿಮಂಜುನಾಥ್, ಕಸದ ರಾಶಿಗಳ ಹಲವಾರುಭಾವಚಿತ್ರಗಳನ್ನು ತಾಯಲೂರು ಗ್ರಾಪಂ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಾಕಿದ್ದರು.
ಸಹಾಯ ಮಾಡಿ, ಇಲ್ಲಾ ಸುಮ್ಮನೇ ಇರಿ: ಈಕುರಿತು ಮತ್ತೂಬ್ಬ ಸದಸ್ಯರು, ಗ್ರಾಪಂ ಅಧಿಕಾರಿಮತ್ತು ಸಿಬ್ಬಂದಿ ಕಾರ್ಯವೈಖರಿ ಕುರಿತುಫೋಟೋಗಳನ್ನು ಹಾಕಿ ಪ್ರತಿಕ್ರಿಯಿಸಿದ್ದರು. ಇದನ್ನುಕಂಡ ಪಿಡಿಒ ಕೆಲವೇ ಹೊತ್ತಿನಲ್ಲಿ ಕಸ ವಿಲೇವಾರಿವಾಹನವನ್ನು ಕಳುಹಿಸಿ, ಸಿಬ್ಬಂದಿ ಮೂಲಕ ಗ್ರಾಪಂಮುಂಭಾಗದಲ್ಲಿ ಕಸ ಸಂಗ್ರಹಣೆ ಮಾಡಿಸಿ, ಅದರಭಾವಚಿತ್ರಗಳನ್ನು ಗ್ರೂಪ್‌ನಲ್ಲಿ ಹಾಕಿದ್ದಾರೆ. ಕೂಡಲೇ ಸದಸ್ಯರೊಬ್ಬರು ಒಳ್ಳೆಯ ಪ್ರತಿಕ್ರಿಯೆ ಎಂದುಮೆ ಸೇಜ್ ಹಾಕಿದ್ದಾರೆ.
ಕೂಡಲೇ ಪ್ರತಿಕ್ರಿಯಿಸಿದಪಿಡಿಒ ಮಂಗಳಾಂಭ ರೆಸ್ಪಾನ್ಸ್ ಅಲ್ಲ, ನೀವು ಗ್ರಾಪಂಅನ್ನು ಬೀದಿಗೆ ತರುತ್ತೀರಾ, 24 ಗಂಟೆಅದೇ ಕೆಲಸ, ಆದರೆ, ಸಹಾಯ ಮಾಡಿ, ಇಲ್ಲಾಸುಮ್ಮನೇ ಇರಿ. ತರ್ಲೆ ಸದಸ್ಯರು, ಒಳ್ಳೆಯದಲ್ಲ.ಸಾರ್ವಜನಿಕವಾಗಿ ಮರ್ಯಾದೆ ಇರಲ್ಲ ಎಂದುಮೆಸೇಜ್ ಹಾಕಿದ್ದಾರೆ.ಇದನ್ನು ಕಂಡ ಸದಸ್ಯರಾದ ಜಾಲಾರಿಮಂಜುನಾಥ್, ಗೌರಮ್ಮ, ರಮೇಶ್, ಪದ್ಮಮ್ಮ,ಪೂಜಾ ಸದಸ್ಯರಿಗೆ ಗೌರವ ನೀಡಿ. ಇದು ಒಳ್ಳೆಯಪದ್ಧತಿಯಲ್ಲ. ಕಸದ ಸಮಸ್ಯೆಯನ್ನು ತಮ್ಮ ಗಮನಕ್ಕೆತಂದರೆ ತರ್ಲೆ ಸದಸ್ಯರು ಎಂದು ಅವಮಾನಿಸಿದ್ದೀರಿಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಪಂಸದಸ್ಯರು ಮತ್ತು ಪಿಡಿಒ ನಡುವೆ ಭಾನುವಾರವಾಟ್ಸ್ ಆ್ಯಪ್‌ನಲ್ಲಿ ನಡೆದ ವಾರ್ ಸಾಮಾಜಿಕಜಾಲತಾಣದಲ್ಲಿ ರಾರಾಜಿಸುತ್ತಿದ್ದು, ಸಾರ್ವಜನಿಕವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಎಂ.ನಾಗರಾಜಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.