ಅತಿ ಹೆಚ್ಚು ಮತದಾನ; ಯಾರಿಗೆ ವರದಾನ?
Team Udayavani, Apr 19, 2021, 7:24 PM IST
ಮಲ್ಲಿಕಾರ್ಜುನ ಚಿಲ್ಕರಾಗಿ
ಮಸ್ಕಿ: ಉಪಚುನಾವಣೆ ಮೂಲಕ ರಾಜ್ಯದ ಗಮನ ಸೆಳೆದ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಅತ್ಯಧಿ ಕ ಮತದಾನ ದಾಖಲಾಗಿದೆ. ಶೇ.70ರ ಗಡಿದಾಟಿದ ಮತ ಪ್ರಮಾಣ ಯಾರ ಪಾಲಿಗೆ ವರ? ಇನ್ಯಾರಿಗೆ ಶಾಪ? ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಒಟ್ಟು 2,06,429 ಮತದಾರರ ಪೈಕಿ 1,45,458 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಒಟ್ಟು ಮತದಾನ ಪ್ರಮಾಣ ಶೇ.70.46 ದಾಖಲಾಗಿದೆ. ವಿಶೇಷವಾಗಿ ಮಹಿಳಾ ಮತದಾರರು ಈ ಬಾರಿ ವೋಟಿಂಗ್ ಪ್ರಮಾಣದಲ್ಲಿ ಮುಂದಿದ್ದಾರೆ. ಪ್ರತಿ ಬಾರಿಯೂ ಮತಗಟ್ಟೆಯಿಂದ ದೂರವೇ ಉಳಿಯುತ್ತಿದ್ದ ಮಹಿಳಾ ಮತದಾರರು ಈ ಬಾರಿ ಅತಿ ಉತ್ಸಾಹದಿಂದಲೇ ಮತದಾನಕ್ಕೆ ಮುಂದಾಗಿದ್ದು ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳಲ್ಲೂ ಕುತೂಹಲಕ್ಕೆ ಕಾರಣವಾಗಿದೆ. ಮಹಿಳಾ ಮತದಾರರ ಹಕ್ಕು ಚಲಾವಣೆ ಎರಡು ಪಾರ್ಟಿಗೂ ವರ ಎನ್ನುವ ಲೆಕ್ಕಾಚಾರ ಆಯಾ ಪಕ್ಷಗಳಲ್ಲಿ ಶುರುವಾಗಿದೆ.
ಹೀಗಿದೆ ಮತದಾನ ವಿವರ: ಒಟ್ಟು 1,01,340 ಮಹಿಳಾ ಮತದಾರರಲ್ಲಿ 73,293 ಜನ ಮಹಿಳೆಯರು ತಮ್ಮ ವೋಟ್ ಹಾಕಿದ್ದಾರೆ. 1,05,076 ಪುರುಷ ಮತದಾರರ ಪೈಕಿ 72,164 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇತರೆ 13 ಮತದಾರರ ಪೈಕಿ ಒಬ್ಬರೇ ವೋಟ್ ಹಾಕಿದ್ದಾರೆ. ಈ ಪರಿಯ ಮತದಾನ ಪ್ರಮಾಣ ದಾಖಲಾಗಿದ್ದು, ಈ ಹಿಂದೆ 2008, 2013 ಮತ್ತು 2018ರ ಸಾರ್ವತ್ರಿಕ ಚುನಾವಣೆ ವೇಳೆ ಶೇ.60ರ ಗಡಿಯಲ್ಲಿ ಮಾತ್ರ ಮತದಾನ ಪ್ರಮಾಣ ದಾಖಲಾಗಿದೆ. ಆದರೀಗ ಉಪಚುನಾವಣೆಯಲ್ಲೇ ಹೆಚ್ಚು ಮತದಾನ ದಾಖಲಾಗಿದ್ದು ಗಮನಾರ್ಹ.
2018ರಲ್ಲಿ ಶೇ.68.98 ಮತದಾನವಾಗಿದ್ದರೆ, 2013ರಲ್ಲಿ ಶೇ.64.14 ಮತದಾನ ದಾಖಲಾಗಿದೆ. ಈ ಹಿಂದಿನ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಮತದಾನವೇ ಹೆಚ್ಚಾಗಿದೆ.
ಕೈ ಹಿಡಿದ ಸ್ಟಾಟರ್ಜಿ: ಮಸ್ಕಿ ಉಪಚುನಾವಣೆಯನ್ನು ತೀವ್ರ ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳ ವರಿಷ್ಠರು ಹಲವು ರೀತಿಯ ದಾಳಗಳನ್ನು ಅಖಾಡದಲ್ಲಿ ಉರುಳಿಸಿದ್ದರು. ವಿಶೇಷವಾಗಿ ಜಾತಿ ಅಸ್ತ್ರ ಮತ್ತು ಮಹಿಳಾ ಮತದಾರರನ್ನೇ ಗುರಿಯಾಗಿಸಿಕೊಂಡು ನಡೆದ ರಾಜಕೀಯ ಸ್ಟಾಟರ್ಜಿ ಎರಡು ಪಕ್ಷಗಳ ಕೈ ಹಿಡಿದಿದೆ. ಒಂದು ಪಕ್ಷ ಸರಕಾರದ ಯೋಜನೆಗಳನ್ನು ಮುಂದಿಟ್ಟು ಮಹಿಳೆಯರನ್ನು ಆಕರ್ಷಿಸಿದರೆ, ಮತ್ತೂಂದು ಪಕ್ಷ ಅನುಕಂಪದ ಅಲೆಯನ್ನು ತೇಲಿ ಬಿಟ್ಟು ಮಹಿಳಾ ಮತದಾರರನ್ನು ಓಲೈಸಿಕೊಳ್ಳುವ ಕಸರತ್ತು ನಡೆಸಿತ್ತು. ಈ ಪ್ರಯತ್ನ ಎರಡು ಪಕ್ಷಕ್ಕೂ ಕೈ ಹಿಡಿದಿದೆ. 73 ಸಾವಿರದಷ್ಟು ಮಹಿಳಾ ಮತದಾರರು ಹಕ್ಕು ಚಲಾವಣೆ ಮೂಲಕ ಫಲಿತಾಂಶ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.