“ಇಂಡಿಯಾ ಓಪನ್ ಸೂಪರ್-500 ಬ್ಯಾಡ್ಮಿಂಟನ್’ ಟೂರ್ನಿ ಮುಂದಕ್ಕೆ
Team Udayavani, Apr 19, 2021, 11:02 PM IST
ಹೊಸದಿಲ್ಲಿ : ಟೋಕಿಯೊ ಒಲಿಂಪಿಕ್ಸ್‌ನ ಕೊನೆಯ ಮೂರು ಅರ್ಹತಾ ಕೂಟಗಳಲ್ಲಿ ಒಂದಾಗಿದ್ದ “ಇಂಡಿಯಾ ಓಪನ್ ಸೂಪರ್-500 ಬ್ಯಾಡ್ಮಿಂಟನ್’ ಪಂದ್ಯಾವಳಿಯನ್ನು ಕೋವಿಡ್-19 ಕಾರಣದಿಂದ ಸತತ ಎರಡನೇ ವರ್ಷವೂ ಮುಂದೂಡಲಾಗಿದೆ.
400,000 ಡಾಲರ್ ಬಹುಮಾನದ ಈ ಪಂದ್ಯಾವಳಿ ಮೇ 11ರಿಂದ 16ರ ತನಕ ಹೊಸದಿಲ್ಲಿಯ ಖಾಲಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು.
“ಈಗಿನ ಕಠಿನ ಸವಾಲು ಮತ್ತು ಸಮಸ್ಯೆಗಳನ್ನು ಮನಗಂಡು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಕೂಟವನ್ನು ಮುಂದೂಡುವುದು ಅನಿವಾರ್ಯವಾಗಿದೆ. ನಮ್ಮ ಮುಂದೆ ಬೇರೆ ಮಾರ್ಗಗಳಿಲ್ಲ’ ಎಂದು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ (ಬಿಎಐ) ಮಹಾ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“ಒಮ್ಮೆ ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ 2021ರ ಪಂದ್ಯಾವಳಿಯನ್ನು ನಡೆಸುವುದು ನಮ್ಮ ಉದ್ದೇಶ. ಮುಂದೆ ನೂತನ ದಿನಾಂಕವನ್ನು ಪ್ರಕಟಿಸಲಾಗುವುದು’ ಎಂದು ಸಿಂಘಾನಿಯಾ ಹೇಳಿದರು.
ಇದನ್ನೂ ಓದಿ :ರೆಮಿಡಿಸಿವಿಯರ್ ಮಾಫಿಯಾ : ಪೊಲೀಸರಿಂದ 8ಕ್ಕೂ ಅಧಿಕ ಮಂದಿ ಸೆರೆ
ಕಳೆದ ವರ್ಷ ರದ್ದು
ಕಳೆದ ವರ್ಷವೂ ಈ ಪಂದ್ಯಾವಳಿಗೆ ಕೊರೊನಾ ಕಂಟಕ ಎದುರಾಗಿತ್ತು. ಪಂದ್ಯಾವಳಿಯನ್ನು ಮಾರ್ಚ್ ನಿಂದ ಡಿಸೆಂಬರ್ ತಿಂಗಳಿಗೆ ಮುಂದೂಡಲಾಗಿತ್ತು. ಆದರೆ ವರ್ಷಾಂತ್ಯದಲ್ಲೂ ಇದನ್ನು ನಡೆಸಲು ಅಸಾಧ್ಯವಾದ ಕಾರಣ ಕೂಟವನ್ನೇ ರದ್ದುಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.