ಕಾರ್ಕಳ: ತೆರಿಗೆ, ಶುಲ್ಕ ಪಾವತಿಗೆ ಅಲೆದೂ ಅಲೆದೂ ಸುಸ್ತಾಗುವ ಹಿರಿಯ ನಾಗರಿಕರು!

Team Udayavani, Apr 20, 2021, 4:00 AM IST

ಕಾರ್ಕಳ: ತೆರಿಗೆ, ಶುಲ್ಕ ಪಾವತಿಗೆ ಅಲೆದೂ ಅಲೆದೂ ಸುಸ್ತಾಗುವ ಹಿರಿಯ ನಾಗರಿಕರು!

ಕಾರ್ಕಳ: ಹಿರಿಯ ನಾಗರಿಕರಿಗೆ ಅನಗತ್ಯ ತೊಂದರೆ ತಪ್ಪಿಸಲು ಸರಕಾರವೇ ಪಿಂಚಣಿ, ಬ್ಯಾಂಕಿಂಗ್‌ ಸಹಿತ ಕೆಲವೊಂದು ಸೇವೆಗಳನ್ನು ಮನೆ ಬಾಗಿಲಲ್ಲೇ ನೀಡುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದೆ. ಆದರೆ ಒಂದು ಸಣ್ಣ ಮೊತ್ತದ ಪಾವತಿಗೂ ಎರಡು-ಮೂರು ಕಡೆ ಅಲೆದಾಡುವ ಸ್ಥಿತಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿದೆ.

ಹಿರಿಯರಿಗೆ ಕಷ್ಟ
ಪುರಸಭೆ ವ್ಯಾಪ್ತಿಯಲ್ಲಿ ಹನ್ನೆರಡು ಸಾವಿರಕ್ಕೂ ಅಧಿಕ ಕಟ್ಟಡ, ನೀರಿನ ಸಂಪರ್ಕ ಹೊಂದಿದ್ದರೂ ತೆರಿಗೆ/ ಶುಲ್ಕ ಸಂಗ್ರಹಕ್ಕೆ ನಗದು ಸ್ವೀಕೃತಿ ವಿಭಾಗ ಇಲ್ಲ. ಇದರಿಂದಾಗಿ ಜನಸಾಮಾನ್ಯರು ಕಚೇರಿಗಳಿಗೆ ಅಲೆದಾಡುವುದು ನಿತ್ಯದ ಕಾಯಕವಾಗಿದೆ. ಇದರಿಂದ ಹೆಚ್ಚು ಕಿರಿಕಿರಿ ಅನುಭವಿಸುತ್ತಿರುವವರು ಹಿರಿಯ ನಾಗರಿಕರು. ಸದ್ಯ ಬಿಸಿಲಿನ ತಾಪ, ಕೊರೊನಾ ಸೋಂಕಿನ ಭೀತಿ ನಡುವೆ ಹಿರಿಯರು ತೆರಿಗೆ/ಶುಲ್ಕ ಪಾವತಿಗೆ ಅಲೆದಾಡುತ್ತಿದ್ದಾರೆ. ಮೊದಲೆಲ್ಲ ಶುಲ್ಕ, ತೆರಿಗೆ ಸಂಗ್ರಹಕ್ಕೆ ಮನೆ ಬಾಗಿಲಿಗೆ ಸಿಬಂದಿಯೇ ಬಂದು ಸಂಗ್ರಹಿಸುತ್ತಿದ್ದರು. ಅದು ಕಾಲಕ್ರಮೇಣ ರದ್ದುಗೊಂಡಿದೆ. ಪುರಸಭೆ ಕಚೇರಿಗೆ ಬಂದು ಪಾವತಿಸುವ ನಿಯಮ ರೂಪಿಸಲಾಯಿತು. ಅದಕ್ಕೂ ನಾಗರಿಕರೂ ಹೊಂದಿಕೊಂಡಿದ್ದರು.

ಇತ್ತೀಚಿನ ಕೆಲವು ವರ್ಷಗಳಿಂದ ಬ್ಯಾಂಕ್‌ ಸಹಿತ ಕಚೇರಿಗಳಲ್ಲಿ ನೌಕರರ ಕೊರತೆಯಿದೆ. ಕಚೇರಿಗಳ ಮುಂದೆ ತಾಸುಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಕೆಲಸ ಮಾಡಿಸಿಕೊಳ್ಳಬೇಕು. ಕೆಲವೊಮ್ಮೆ ಅರ್ಧ ದಿನವೇ ಕಳೆದು ಹೋಗುತ್ತಿದೆ. ಅಲ್ಲಿ ಹಿರಿಯ ನಾಗರಿಕರೂ ಅನುಭವಿಸುವ ಸಂಕಷ್ಟಕ್ಕೆ ಮಿತಿಯೆನ್ನುವುದೇ ಇಲ್ಲ.

ಪುರಸಭೆಯಲ್ಲಿ ಹಿರಿಯ ನಾಗರಿಕರಿಗೆ ಆಗುತ್ತಿ ರುವ ತೊಂದರೆ ಕುರಿತು ಎರಡು ವರ್ಷಗಳಿಂದಲೂ ಹಿರಿಯ ನಾಗರಿಕರು ಪುರಸಭೆ ಆಡಳಿತದ ಗಮನಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ. ಪುರಸಭೆ, ಸಂಬಂಧಿಸಿದ ಸಚಿವರ ಸಹಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸರಳೀಕರಣಕ್ಕೆ ಒತ್ತಾಯಿಸಿದ್ದರೂ ಯಾವ ಪ್ರಯೋಜನವೂ ಆಗಿಲ್ಲ ಎನ್ನುತ್ತಾರೆ ಹಿರಿಯ ನಾಗರಿಕರು. ಕನಿಷ್ಠ ಬ್ಯಾಂಕಿನಲ್ಲಿ ಒಂದು ಪ್ರತಿ ಉಳಿಸಿ ಸೀಲ್‌ ಹಾಕಿ ಕಳುಹಿಸಿಕೊಟ್ಟರೂ ಸ್ವಲ್ಪ ಹಗುರವಾಗುತ್ತದೆ ಎನ್ನುತ್ತಾರೆ.

ಆನ್‌ಲೈನ್‌ ಸೌಕರ್ಯ ಬೇಕು
ಮೆಸ್ಕಾಂ ವ್ಯವಸ್ಥೆಯಲ್ಲಿ ಕೌಂಟರ್‌ನಲ್ಲಿ ಹಣ ಪಾವತಿಸುವ, ಆನ್‌ಲೈನ್‌ನಲ್ಲಿ ಹಣ ಪಾವತಿಸುವ ಸೌಕರ್ಯವಿದೆ. ಇಂತಹ ವ್ಯವಸ್ಥೆ ಪುರಸಭೆಗೂ ಬಂದರೆ ಅನುಕೂಲ. ಅಥವಾ ಪುರಸಭೆ ಆವರಣದಲ್ಲೇ ಒಂದು ನಗದು ಸ್ವೀಕೃತಿ ವಿಭಾಗ ತೆರೆದು ಅನುಕೂಲ ಮಾಡಿಕೊಡುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಕೋಟ್ಯಂತರ ರೂ. ತೆರಿಗೆ, ನೀರಿನ ಬಿಲ್ಲು ಇತ್ಯಾದಿ ಹರಿದು ಬರುವಾಗ ಪ್ರತ್ಯೇಕ ಕೌಂಟರ್‌ ತೆರೆಯು ವುದು ಸಂಸ್ಥೆಗೆ ಹೊರೆಯಾಗದು ಎನ್ನುವ ಅಭಿ ಪ್ರಾಯವೂ ವ್ಯಕ್ತವಾಗಿದೆ.

ಎರಡು ಬಾರಿ ಅಲೆದಾಟ
ಇತ್ತೀಚಿನ ಕೆಲವು ವರ್ಷಗಳಿಂದ ಬದಲಾದ ನಿಯಮಗಳಿಂದ ಹೆಚ್ಚು ತೊಂದರೆಗೆ ಒಳಗಾಗು ತ್ತಿರುವವರು ಹಿರಿಯ ನಾಗರಿಕರು. ವರ್ಷಕ್ಕೊಮ್ಮೆ ಮನೆ ತೆರಿಗೆ ಬ್ಯಾಂಕು, ಕಚೇರಿಗೆ ತೆರಳಿ ಕಟ್ಟುವುದಕ್ಕೆ ಸಮಸ್ಯೆ ಆಗುತ್ತಿರಲಿಲ್ಲ. ಇತ್ತೀಚೆಗೆ ಮಾಸಿಕ ನೀರಿನ ಶುಲ್ಕವನ್ನು ಕೂಡ ಪುರಸಭೆಗೆ ಆಗಮಿಸಿ ಅಲ್ಲಿಂದ ಚಲನ್‌ನೊಂದಿಗೆ ಬ್ಯಾಂಕಿಗೆ ತೆರಳಿ ಹಣ ಪಾವತಿಸಿ ಅನಂತರ ಪುರಸಭೆಗೆ ತಲುಪಿಸಬೇಕು. ಈ ನಿಯಮಗಳಿಂದಾಗಿ ಕಚೇರಿಯಿಂದ ಕಚೇರಿಗೆ ಅಲೆದು ಹಿರಿ ಜೀವಗಳು ಸುಸ್ತಾಗುತ್ತಿವೆ.

ಗಮನ ಸೆಳೆಯಲು ಯತ್ನ
ಹಿರಿಯ ನಾಗರಿಕರು ನಾವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ತೆರಿಗೆ/ಶುಲ್ಕ ಪಾವತಿಗೆ ಸಮಸ್ಯೆಯಾಗಿದ್ದು, ಈ ಬಗ್ಗೆ ಒಕ್ಕೂಟಗಳಲ್ಲಿ ಚರ್ಚಿಸಿ ಸಂಬಂಧಪಟ್ಟವರ ಗಮನ ಸೆಳೆಯಲು ಯತ್ನಿಸುತ್ತಿದ್ದೇವೆ.
-ಕೆ.ವಾಸುದೇವ ರಾವ್‌, ಕಾರ್ಯದರ್ಶಿ, ಹಿರಿಯ ನಾಗರಿಕರ ವೇದಿಕೆ ಕಾರ್ಕಳ ತಾ| ಸಮಿತಿ

ಶೀಘ್ರ ಅಳವಡಿಕೆ
ಹಿರಿಯ ನಾಗರಿಕರಿಗೆ ಕಷ್ಟವಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಶೀಘ್ರವೇ ಪೇಮೆಂಟ್‌ ಇನ್‌ಸ್ಟಾಲೇಶನ್‌ ವ್ಯವಸ್ಥೆಯನ್ನು ಪುರಸಭೆ ಆವರಣದಲ್ಲಿ ಅಳವಡಿಸಲಾಗುವುದು. ಇದರಿಂದ ಅನುಕೂಲವಾಗಲಿದೆ.-

ರೇಖಾ ಜೆ. ಶೆಟ್ಟಿ , ಮುಖ್ಯಾಧಿಕಾರಿ, ಪುರಸಭೆ

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

voter

RSS ಕಚೇರಿ ಟೆಕ್ಕಿಗಳ ಬಳಸಿ ಇವಿಎಂ ಹ್ಯಾಕ್‌: ವಸಂತ

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.