ಆಹಾರ ನಿಗಮದ ಅಧ್ಯಕ್ಷ-ಶಾಸಕ ನಡಹಳ್ಳಿಗೆ ಕೋವಿಡ್ ಸೋಂಕು
Team Udayavani, Apr 20, 2021, 4:07 PM IST
ವಿಜಯಪುರ : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರಾದ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಸೋಂಕು ದೃಢಪಟ್ಟಿದೆ.
ಮಂಗಳವಾರ ಆರೋಗ್ಯ ಇಲಾಖೆ ಸಿಬ್ಬಂದಿ ರ್ಯಾಪಿಡ್ ಆ್ಯಂಟೊಜನ್ ಪರೀಕ್ಷೆ ನಡೆಸಿದಾಗ ಶಾಸಕ ನಡಹಳ್ಳಿ, ಅವರ ತಂದೆ ಸಂಗನಗೌಡ ಪಾಟೀಲ ಅವರಿಗೆ ಕೋವಿಡ್ ಸೋಂಕು ದೃಡಪಟ್ಟಿದೆ.ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಬ್ಬರನ್ನೂ ವಿಜಯಪುರ ಕೋವಿಡ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ : ಕೋವಿಡ್ ಲಸಿಕೆ ಪಡೆದರೆ ಇಲ್ಲಿ ಸಿಗುತ್ತದೆ ಟೊಮೆಟೊ ಪ್ಯಾಕ್..!
ಸೋಂಕು ದೃಢಪಡುತ್ತಲೇ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಶಾಸಕ ನಡಹಳ್ಳಿ, ಕಳೆದ 4-5 ದಿನಗಳಿಂದ ತಮ್ಮ ಸಂಪರ್ಕದಲ್ಲಿ ಬಂದವರು ಕೂಡಲೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು, ಜೊತೆಗೆ ಸ್ವಯಂ ಹೋಂ ಕ್ವಾರೆಂಟೈನ್ ಆಗಬೇಕು ಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.