ದೇಶದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಒಪ್ಪೊ ಎ 74 5ಜಿ ಸ್ಮಾರ್ಟ್ ಫೋನ್..! ವಿಶೇಷತೆಗಳೆನು..?
Team Udayavani, Apr 20, 2021, 5:22 PM IST
ಒಪ್ಪೊ ಎ 74 5ಜಿ ಅನ್ನು ಮಂಗಳವಾರ(ಏ. 20) ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.
ಕಂಪನಿಯ ಮೊದಲ 5ಜಿ ಫೋನ್ ರೂ. 20,000 ಬೆಲೆಯಾಗಿದೆ. ನೂತನವಾಗಿ ಬಿಡುಗಡೆಗೊಂಡ ಈ ಒಪ್ಪೊ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480 SoC ಯೊಂದಿಗೆ ಬರುತ್ತದೆ. ಮತ್ತು 90Hz ಡಿಸ್ಪ್ಲೇ ಹೊಂದಿದೆ.
ಒಪ್ಪೋ ಎ 74 5ಜಿ 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಕೂಡ ಹೊಂದಿದೆ. ಒಪ್ಪೋ ಎ 74 5ಜಿ ಯ ಇತರ ಪ್ರಮುಖ ಮುಖ್ಯಾಂಶಗಳೆಂದರೇ, ಟ್ರಿಪಲ್ ರಿಯರ್ ಕ್ಯಾಮೆರಾಗಳು, 5,000 Mah ಬ್ಯಾಟರಿ ಮತ್ತು ಹೀಟ್ ನಿರ್ವಹಣೆಗಾಗಿ ಮಲ್ಟಿ-ಕೂಲಿಂಗ್ ಸಿಸ್ಟಮ್ ಕೂಡ ನೀಡುತ್ತಿದೆ.
ಈ ತಿಂಗಳ ಆರಂಭದಲ್ಲಿ ಒಪ್ಪೊ ಎ 74 5ಜಿ ಅನ್ನು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ಸೇರಿದಂತೆ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಯಿತು.
ಭಾರತದಲ್ಲಿ ಒಪ್ಪೊ ಎ 74 5ಜಿ ಬೆಲೆ, ಲಾಂಚ್ ಆಫರ್ ಗಳೇನಿದೆ..?
ಭಾರತದಲ್ಲಿ ಒಪ್ಪೊ ಎ 74 5ಜಿ ಬೆಲೆಯನ್ನು 6 ಜಿಬಿ ರಾಮ್ + 128 ಜಿಬಿ ಸ್ಟೋರೇಜ್ ರೂಪಾಂತರಕ್ಕೆ 17,990 ರೂ. ಫೋನ್ ಫ್ಲೂಯಿಡ್ ಬ್ಲ್ಯಾಕ್ ಮತ್ತು ಫೆಂಟಾಸ್ಟಿಕ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಒಪ್ಪೋ ಎ 74 5 ಜಿ ಯಲ್ಲಿ ಲಾಂಚ್ ಆಫರ್ ಗಳು ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಇಎಂಐ ಮತ್ತು ಅಮೆಜಾನ್ ಮೂಲಕ ಮಾಡಿದ ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ 10 ಪ್ರತಿಶತದಷ್ಟು ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಒಳಗೊಂಡಿವೆ.
ಒಪ್ಪೋ ಎ 74 5 ಜಿ ವಿಶೇಷತೆಗಳೇನು..?
ಡ್ಯುಯಲ್-ಸಿಮ್ (ನ್ಯಾನೋ) ಒಪ್ಪೊ ಎ 74 5ಜಿ 6.5-ಇಂಚಿನ ಪೂರ್ಣ-ಎಚ್ಡಿ + (1,080×2,400 ಪಿಕ್ಸೆಲ್ಗಳು) ಹೊಂದಿದೆ. ಒಪ್ಪೊ ಎ 74 5 ಜಿ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480 ಎಸ್‌ಒಸಿ ಜೊತೆಗೆ 6 ಜಿಬಿ RAM ಅನ್ನು ಹೊಂದಿದೆ.
ಇನ್ನು, ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಅದು 48 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್, ಎಫ್ / 1.7 ಲೆನ್ಸ್ ಹೊಂದಿದೆ, ಜೊತೆಗೆ 2 ಮೆಗಾಪಿಕ್ಸೆಲ್ ಡೀಪ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಇದೆ . ವಿಷಯಗಳನ್ನು ಸಂಗ್ರಹಿಸುವ ದೃಷ್ಟಿಯಿಂದ, ಒಪ್ಪೋ ಎ 74 5 ಜಿ 128 ಜಿಬಿ ಆನ್‌ಬೋರ್ಡ್ ಸ್ಟೋರೇಜ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5 ಜಿ, 4 ಜಿ ಎಲ್ ಟಿ ಇ, ವೈ-ಫೈ 802.11 ಎಸಿ, ಬ್ಲೂಟೂತ್ ವಿ 5.1, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.