ತಲಾ 10 ಸೋಂಕಿತರಲ್ಲಿ 9 ಮಂದಿ ಮನೆ ಆರೈಕೆಯಲ್ಲಿ

ಹೋಂ ಐಸೋಲೇಷನ್‌ನಲ್ಲಿ 90 ಸಾವಿರಕ್ಕೂ ಅಧಿಕ ಸೋಂಕಿತರು

Team Udayavani, Apr 20, 2021, 6:48 PM IST

ತಲಾ 10 ಸೋಂಕಿತರಲ್ಲಿ 9 ಮಂದಿ ಮನೆ ಆರೈಕೆಯಲ್ಲಿ

ಬೆಂಗಳೂರು: ರಾಜಧಾನಿಯ ಒಂದೆಡೆ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿಲ್ಲ, ಕೃತಕ ಆಕ್ಸಿಜನ್‌, ವೆಂಟಿಲೇಟರ್‌ ಕೊರತೆ, ರೆಮ್‌ ಡಿಸಿವಿಯರ್‌ ಔಷಧ ಸಿಗುತ್ತಿಲ್ಲ ಎಂಬಿತ್ಯಾದಿ ಪರದಾಟಗಳಿವೆ. ಮತ್ತೂಂದೆಡೆ ಯಾವ ಆಸ್ಪತ್ರೆಗಳ ಸಹವಾಸವೂ ಬೇಡ ಎಂದು ಬರೋಬ್ಬರಿ 93 ಸಾವಿರ ಸೋಂಕಿತರು ಮನೆಯ ಲ್ಲಿಯೇ ಆರೈಕೆಯಲ್ಲಿದ್ದಾರೆ.

ರಾಜಧಾನಿಯಲ್ಲಿ ಕೋವಿಡ್ ಸೋಂಕು ಮಿತಿ ಮೀರಿದ್ದು, ಕಳೆದ ಐದು ದಿನಗಳಲ್ಲಿಯೇ ಅರ್ಧಲಕ್ಷ ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಕೋವಿಡ್ ಸಕ್ರಿಯ ಸೋಂಕಿತರ ಸಂಖ್ಯೆ ಒಂದು ಲಕ್ಷ ಮೀರಿದೆ. ಸರ್ಕಾರವು ಸೋಂಕಿತರ ಚಿಕಿತ್ಸೆಗೆ ಎರಡು ಸರ್ಕಾರಿ, 14 ಖಾಸಗಿ ವೈದ್ಯಕೀಯ ಕಾಲೇಜು, 14 ಸರ್ಕಾರಿ, 55 ಖಾಸಗಿ ಆಸ್ಪತ್ರೆ ಗಳು, ಎರಡು ಕೊರೊನಾ ಕೇರ್‌ ಸೆಂಟರ್‌ಗಳಲ್ಲಿ 6509 ಹಾಸಿಗಳ ವ್ಯವಸ್ಥೆ ಮಾಡಿದೆ. ಆದರೂ, ಸೋಂಕಿತರಿಗೆ ಸೂಕ್ತ ಸಮಯ ದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್‌, ವೆಂಟಿಲೇಟರ್‌ ಸಿಗದೇ ಪರದಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೋಂ ಐಸೋಲೇಷನ್‌ ರೋಗಿಗಳ ಮತ್ತು ಸರ್ಕಾರ ಪಾಲಿಗೆ ವರವಾಗಿ ಪರಿಣಮಿಸಿದೆ.

93,463 ಸೋಂಕಿತರಿಗೆ ಮನೆಯೇ ಮಂತ್ರಾಲಯ: ಸರ್ಕಾರದ ಮಾರ್ಗಸೂಚಿ ಪ್ರಕಾರ ಕಡಿಮೆ ಪ್ರಮಾ ಣದ ಸೋಂಕು ಲಕ್ಷಣ ಇದ್ದವರು ಮತ್ತು ಸೋಂಕು ಲಕ್ಷಣಗಳೇ ಇಲ್ಲದವರು ಮನೆಯಲ್ಲಿಯೇ ಆರೈಕೆ ಪಡೆ ಯಲು ಅವಕಾಶವಿದೆ. ಈ ನಿಟ್ಟಿನಲ್ಲಿ ಕಳೆದ ವರ್ಷವೇಹೋಂ ಐಸೋಲೇಷನ್‌ ವ್ಯವಸ್ಥೆಯನ್ನು ಜಾರಿ ಗೊಳಿಸಿದೆ. ಈ ವಿಧಾನವನ್ನು ಬಳಿಸಿಕೊಂಡು ನಗರದಲ್ಲಿ ಸೋಮವಾರ ಅಂತ್ಯಕ್ಕೆ 93,463 ಸೋಂಕಿ ತರು ಮನೆಯೇ ಮಂತ್ರಾಲಯ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದಾರೆ.

ಮನೆಯಲ್ಲಿದ್ದು ಆರೈಕೆ ಪಡೆಯುತ್ತಿರುವವರ ಪೈಕಿ ಶೇ.99 ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ. ಈ ಮೂಲಕ ಸೋಂಕಿನಿಂದ ಮುಕ್ತಿ ಪಡೆಯಲು ಆಸ್ಪತ್ರೆ ಗಿಂತ ಮನೆಯೇ ಉತ್ತಮ ಎನ್ನಲಾಗಿದೆ. ಸೋಂಕು ದೃಢಪಟ್ಟವರ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವು ಮುಖ್ಯ. ಆಸ್ಪತ್ರೆ ವಾತಾವರಣ ಸೋಂಕಿತ ರನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಸೋಂಕು ಲಕ್ಷಣ ಇಲ್ಲದಿದ್ದರೆ ಮನೆಯಲ್ಲಿಯೇ ಇರುವುದು ಎನ್ನುತ್ತಾರೆ ಮನೋವೈದ್ಯೆ ಡಾ.ಬಿ.ಎನ್‌.ರಜನಿ.

ಮನೆ ಆರೈಕೆ ಪ್ರಕ್ರಿಯೆ ಹೇಗೆ?: ಸೋಂಕು ದೃಢಪಟ್ಟ ವ್ಯಕ್ತಿಗಳಿಗೆ ಬಿಬಿಎಂಪಿ ವಾರ್‌ರೂಂನಿಂದ (ಆಪ್ತಮಿತ್ರ) ಕರೆ ಮಾಡಿ ಆರೋಗ್ಯ ಸ್ಥಿತಿ ಮಾಹಿತಿ ಪಡೆಯುತ್ತಾರೆ. ಕಡಿಮೆ ಸೋಂಕಿನ ಲಕ್ಷಣವಿದ್ದರೆ, ಮನೆಯಲ್ಲಿ ಅನು ಕೂಲಗಳಿದ್ದರೆ ಅಲ್ಲಿಯೇ ಆರೈಕೆ ಇರುವಂತೆ ಸೂಚಿಸುತ್ತಾರೆ. ಸೋಂಕಿತರು ಮನೆ ಆರೈಕೆಗೆ ಒಪ್ಪಿದರೆ ತಕ್ಷಣ ಆರೋಗ್ಯ ಸಹಾಯಕರ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ. ಸೋಂಕು ಲಕ್ಷಣ ಇಲ್ಲದಿದ್ದರೆ, ಮನೆಯಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯ ಇದ್ದರೆ ಅನುಮತಿ ನೀಡುತ್ತಾರೆ. ಇಲ್ಲದಿದ್ದರೆ ಕೋವಿಡ್‌ ಕೇರ್‌ ಸೆಂಟರ್‌ಗೆ ಶಿಫಾರಸು ಮಾಡುತ್ತಾರೆ. ಔಷಧ ಕಿಟ್‌ ನೀಡುತ್ತಾರೆ: ಹೋಂ ಐಸೋಲೇಷನ್‌ ಇರುವವರಿಗೆ ಹತ್ತು ದಿನಗಳಿಗಾಗಿ ವಿಟಮಿನ್‌ ಸಿ ಮತ್ತು ಜಿಂಕ್‌ ಮಾತ್ರೆ ನೀಡಿ,

ಏನೆಲ್ಲಾ ಚಟುವಟಿಕೆ ಮಾಡಬೇಕು ಎಂಬ ಮಾಹಿತಿ ನೀಡುತ್ತಾರೆ. ಬಳಿಕ ನಿತ್ಯ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತದೆ.

ಈ ಬಾರಿ ಹೋಂ ಐಸೋಲೇಷನ್‌ ಹೆಚ್ಚು: ಮೊದಲ ಅಲೆಯಲ್ಲಿ ಸೋಂಕು ಆರಂಭವಾದ ನಾಲ್ಕು ತಿಂಗಳ ನಂತರ (ಜುಲೈನಲ್ಲಿ) ಹೋಂ ಐಸೋಲೇಷನ್‌ಗೆ ಸೂಚಿಸಲಾಯಿತು. ಆದರೂ, ಅರ್ಧಕ್ಕರ್ಧ ಸೋಂಕಿ ತರು ಮನೆ ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದರು. ಆದರೆ, ಈ ಬಾರಿ 10 ಮಂದಿಯಲ್ಲಿ ಒಬ್ಬರು ಬಹುತೇಕರು ಮನೆ ಆರೈಕೆಯನ್ನೇ ಆಯ್ಕೆ ಮಾಡುತ್ತಿದ್ದಾರೆ

ಸರ್ಕಾರವೂ ಮನೆ ಆರೈಕೆಗೆ ಮನವಿ :

ಸದ್ಯ ನಗರದಲ್ಲಿ ಸೋಂಕು ಪ್ರಕರಣಗಳು ಸಾಕಷ್ಟು ಏರಿಕೆಯಾಗುತ್ತಿರುವ ಹಿನ್ನೆಲೆ ಎಲ್ಲರಿಗೂ ಆಸ್ಪತ್ರೆ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ. ಕಡಿಮೆ ಲಕ್ಷಣ ಇದ್ದವರು ಭಯದಿಂದಆಸ್ಪತ್ರೆ ಸೇರುತ್ತಿದ್ದಾರೆ. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳುಸಕಾಲದಲ್ಲಿ ಹಾಸಿಗೆ ನೀಡುತ್ತಿಲ್ಲ. ಹೀಗಾಗಿಯೇ ಸರ್ಕಾರದಪ್ರಮುಖ ಸಚಿವರು, ಆರೋಗ್ಯ ಇಲಾಖೆ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ಕಡಿಮೆ ಸೋಂಕಿನ ಲಕ್ಷಣಇದ್ದವರಿಗೆ ಮನೆಯಲ್ಲಿಯೇ ಆರೈಕೆಯಲ್ಲಿಯಲ್ಲಿರುವಂತೆ ಮನವಿ ಮಾಡಿದ್ದಾರೆ.

ಹೋಂ ಐಸೋಲೇಷನ್‌ ಮಾನದಂಡಗಳು :

  • ಸೋಂಕಿನ ಲಕ್ಷಣ ಕಡಿಮೆ ಇರಬೇಕು.
  • ರಕ್ತದಲ್ಲಿನ ಆಮ್ಲಜನಕ ಪ್ರಮಾಣ (ಸ್ಯಾಚುರೇಷನ್‌)/ಪಲ್ಸ್‌ ಆಕ್ಸಿಮೀಟರ್‌ ವರದಿ 93ಕ್ಕಿಂತಲೂ ಹೆಚ್ಚಿರಬೇಕು.
  • ಮನೆಯಲ್ಲಿ ಪ್ರತ್ಯೇಕ ಕೋಣೆ, ಶೌಚಾಲಯವಿರಬೇಕು.

ನಗರದ 1.03 ಲಕ್ಷ ಸೋಂಕಿತರಲ್ಲಿ  :

  • ಸರ್ಕಾರಿ ಕೋಟಾದಡಿ ಆಸ್ಪತ್ರೆಯಲ್ಲಿ – 4575
  • ಕೋವಿಡ್ ಕೇರ್‌ ಸೆಂಟರ್‌ನಲ್ಲಿ – 524
  • ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ – 3545
  • ಸ್ವಂತ ಖರ್ಚಿನಲ್ಲಿ ಖಾಸಗಿ ಕೋವಿಡ್ ಕೇರ್‌ ಸೆಂಟರ್‌ನಲ್ಲಿ – 1,071
  • ಹೋಂ ಐಸೋಲೇಷನ್‌ನಲ್ಲಿ – 93,463

ಹೋಂ ಐಸೋಲೇಷನ್‌ ಜವಾಬ್ದಾರಿಗಳು :

  • ಕುಟುಂಬಸ್ಥರು/ ಸ್ನೇಹಿತರಿಗೆ ಸೋಂಕು ಹರಡದಂತೆ ಪ್ರತ್ಯೇಕವಾಗಿರಬೇಕು.
  • ಪಲ್ಸ್‌ ಆಕ್ಸಿಮೀಟರ್‌ ವರದಿ 93ಕ್ಕಿಂತಲೂ ಕಡಿಮೆಯಾದಲ್ಲಿ ಶೀಘ್ರ ಆಸ್ಪತ್ರೆಗೆ ತೆರಳಬೇಕು.
  • ರೋಗನಿರೋಧಕ ಹೆಚ್ಚಿಸುವ ಆಹಾರ ಕ್ರಮ, ಲಘು ವ್ಯಾಯಾಮ ಅಳವಡಿಸಿಕೊಳ್ಳಬೇಕು.
  • ಸೋಂಕಿನ ಕುರಿತು ಋಣಾತ್ಮಕ ಆಲೋಚನೆ ಮಾಡಬಾರದು.

 

ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.