ಕೊವಿಡ್ ವೈರಾಣುವಿನ ಉಗಮ ಸ್ಥಾನ ಎಂದು ಗುರುತಿಸಲ್ಪಟ್ಟ ವುಹಾನ್ ಮಾರ್ಕೆಟ್ ಈಗ ಹೇಗಿದೆ?
Team Udayavani, Apr 20, 2021, 7:20 AM IST
ಬೀಜಿಂಗ್: ಸುತ್ತಲೂ ಬ್ಯಾರಿಕೇಡ್‌ಗಳು… ಅಂಗಡಿಗಳು ಬಂದ್. ಯಾವುದೇ ನರಪಿಳ್ಳೆಯೂ ಸುಳಿಯದಂಥ ವಾತಾವರಣ… ಸಂಶೋಧಕರಿಗಷ್ಟೇ ಒಳ ಹೋಗಿ ಬರಲು ಅವಕಾಶ.. ಅದೂ ಚೀನ ಸರಕಾರದ ಅನುಮತಿಯೊಂದಿಗೆ… ಜನರಿಲ್ಲದೆ, ನಿರ್ವಹಣೆಯಿಲ್ಲದೆ ನಿಧಾನವಾಗಿ ಶಿಥಿಲಾವಸ್ಥೆಗೆ ಜಾರುತ್ತಿರುವ ಕಟ್ಟಡ!
ಇದು ಇಡೀ ಜಗತ್ತಿಗೇ ಕೊರೊನಾ ಎಂಬ ಮಹಾಮಾರಿಯನ್ನು ಪಸರಿಸಿದ ಕೊವಿಡ್-19 ಎಂಬ ಮಾರಕ ವೈರಾಣುವಿನ ಉಗಮ ಸ್ಥಾನ ಎಂದು ಗುರುತಿಸಲ್ಪಟ್ಟ ಚೀನದ ವುಹಾನ್ ನಗರದ ಮಾಂಸದ ಮಾರುಕಟ್ಟೆಯ ಇಂದಿನ ದುಃಸ್ಥಿತಿ. 2019ರ ಅಂತ್ಯದ ವೇಳೆಯಲ್ಲೇ ವುಹಾನ್‌ನಲ್ಲಿ ಕೊರೊನಾ ಪ್ರತ್ಯಕ್ಷವಾಗಿತ್ತು. ಇದರ ಮೂಲವನ್ನು ಕೆದಕಿದ ತಜ್ಞರು ಬೆರಳು ತೋರಿಸಿದ್ದೇ ಈ ಮಾರುಕಟ್ಟೆ ಕಡೆಗೆ. ಆಗಿನಿಂದ, ಈ ಮಾರುಕಟ್ಟೆ ಜಗತ್ತಿನಾದ್ಯಂತ ಕುಖ್ಯಾತಿ ಪಡೆಯಿತು. 2020ರ ಜ. 1ರಂದು ಇಡೀ ಮಾರುಕಟ್ಟೆಯನ್ನು ಸೀಲ್‌ಡೌನ್ ಮಾಡಲಾಯಿತು. ಅದಾಗಿ ವರ್ಷವೇ ಉರುಳಿದೆ. ಆಗಿನಿಂದ ಇಲ್ಲಿಯ ವರೆಗೂ ಮಾರುಕಟ್ಟೆ ಸಹಜ ಸ್ಥಿತಿಗೆ ಮರಳಿಲ್ಲ. ಈಗಲೂ ಇಡೀ ಮಾರುಕಟ್ಟೆ ಪ್ರದೇಶವನ್ನು ಬ್ಯಾರಿಕೇಡ್‌ಗಳಿಂದ ಮುಚ್ಚಲಾಗಿದೆ.
ಆಮದಿನಿಂದ ಇಂದಿನವರೆಗೂ ಈ ಮಾರುಕಟ್ಟೆಗೆ ತಜ್ಞರು ಬಿಟ್ಟರೆ ಮಿಕ್ಕವರ್ಯಾರೂ ಹೋಗುತ್ತಿಲ್ಲ. ಯಾವುದಾದರೂ ಅಧ್ಯಯನ ತಂಡವೊಂದು ಸಂಪೂರ್ಣ ಪಿಪಿಇ ಕಿಟ್‌ಗಳನ್ನು ಧರಿಸಿ ಇದರೊಳಗೆ ಹೋಗುವುದು ಸ್ಯಾಂಪಲ್‌ಗಳನ್ನು ತರುವುದು ಮಾಮೂಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.