ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ : ವ್ಯಾಕ್ಸಿನೇಶ‌ನ್‌ ಡ್ರೈವ್‌ ನೋಂದಣಿ ಹೇಗೆ?

Team Udayavani, Apr 21, 2021, 6:50 AM IST

ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ : ವ್ಯಾಕ್ಸಿನೇಶ‌ನ್‌ ಡ್ರೈವ್‌ ನೋಂದಣಿ ಹೇಗೆ?

ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಭಾರತೀಯ ನಾಗರಿಕರು ಮೇ 1ರ ಬಳಿಕ ಕೋವಿಡ್‌ -19 ಲಸಿಕೆ ಪಡೆಯಬಹುದು. ಭಾರತದಲ್ಲಿ ಸಂಪೂರ್ಣ ಕೋವಿಡ್‌ -19 ವ್ಯಾಕ್ಸಿನೇಶನ್‌ ಡ್ರೈವ್‌ ನೋಂದಣಿ ಹಾಗೂ ಆ ಬಳಿಕದ ಎಲ್ಲ ಪ್ರಕ್ರಿಯೆಗಳು ಡಿಜಿಟಲ್‌ ವ್ಯವಸ್ಥೆಯಡಿ ನಡೆಯಲಿದೆ. ಆನ್‌ಲೈನ್‌ನಲ್ಲಿ ಲಸಿಕೆಗಾಗಿ ನೋಂದಾಯಿಸುವುದು, ಅಪಾಯಿಂಟ್ಮೆಂಟ್‌ ಅನ್ನು ನಿಗದಿಪಡಿಸುವುದು ಮತ್ತು ಲಸಿಕೆ ಪ್ರಮಾಣ ಪತ್ರವನ್ನು ಡೌನ್ಲೋಡ್‌ ಮಾಡುವುದು ಸಹಿತ ಕೋವಿಡ್‌-19 ಲಸಿಕೆ ಪಡೆಯುವ ಹಂತಗಳ ವಿವರ ಇಲ್ಲಿ ನೀಡಲಾಗಿದೆ.

ಕೋವಿಡ್‌ -19 ಲಸಿಕೆಗಾಗಿ ಯಾವುದೇ ಮೊಬೈಲ್‌ ಆ್ಯಪ್ಲಿಕೇಶನ್‌ ಇಲ್ಲ. ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿ ಗೂಗಲ್‌ ಕ್ರೋಮ್‌ ಅಥವಾ ಯಾವುದೇ ಇಂಟರ್‌ನೆಟ್‌ ಬ್ರೌಸರ್‌ ಅನ್ನು ಬಳಸಬೇಕಾಗುತ್ತದೆ. ಚಾಲ್ತಿಯಲ್ಲಿರುವ ಮೊಬೈಲ್‌ ಸಂಖ್ಯೆ ಮತ್ತು ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ ಇವುಗಳಲ್ಲಿ ಯಾವುದಾದರೂ ಒಂದು ಫೋಟೋ ಐಡಿ ಆ ಸಂದರ್ಭ ಅಗತ್ಯವಿರುತ್ತದೆ.

ಆನ್‌ಲೈನ್‌ನಲ್ಲಿ ಲಸಿಕೆ ನೋಂದಣಿ ಹೇಗೆ?
www.cowin.gov.in ಗೆ ಲಾಗ್‌ ಇನ್‌ ಮಾಡುವ ಮೂಲಕ ನೀವು ಕೋವಿಡ್‌ -19 ಲಸಿಕೆಗಾಗಿ ನೋಂದಾಯಿಸಿಕೊಳ್ಳಬಹುದು. SMS ಮೂಲಕ ಪರಿಶೀಲನೆಗಾಗಿ OTP ಸ್ವೀಕರಿಸಲು ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ. ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘Verify’ಬಟನ್‌ ಕ್ಲಿಕ್‌ ಮಾಡಿ.

ನೋಂದಣಿಯನ್ನು ದೃಢಪಡಿಸುವುದು ಹೇಗೆ?
ವೆಬ್‌ಸೈಟ್‌ನಲ್ಲಿ ನೋಂದಾಯಿಸಿದ ಆಮೇಲೆ “ವ್ಯಾಕ್ಸಿನೇಶ‌ನ್‌ ನೋಂದಣಿ (Registration of Vaccination)ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಫೋಟೋ ಐಡಿ ಪ್ರೂಫ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಇತರ ವಿವರಗಳನ್ನು ನಮೂದಿಸಿ. ಅನಂತರ “ರಿಜಿಸ್ಟರ್‌ ಬಟನ್‌’ ಕ್ಲಿಕ್‌ ಮಾಡಿ. ಚುಚ್ಚುಮದ್ದಿನ ಬಗ್ಗೆ ಅಗತ್ಯ ವಿವರಗಳನ್ನು ನೀವು ಮೆಸೇಜ್‌ ಮೂಲಕ ಸ್ವೀಕರಿಸುತ್ತೀರಿ. ನೀಡಲಾದ ವಿವರಗಳನ್ನು ಸರಿಯಾಗಿದೆಯೇ ಎಂಬುದನ್ನು ಮತ್ತೂಮ್ಮೆ ಪರಿಶೀಲಿಸಿ. ಲಸಿಕೆಗಾಗಿ ನೋಂದಾಯಿಸುವ ಸಮಯದಲ್ಲಿ ಫ‌ಲಾನುಭವಿ ಐಡಿ(Beneficiary Reference ID)ಪಡೆಯುತ್ತೀರಿ. ಈ ಐಡಿಯನ್ನು ಎಲ್ಲಾದರೂ ಸೇವ್‌ ಮಾಡಿಟ್ಟುಕೊಳ್ಳಿ.

ಒಂದು ಮೊಬೈಲ್‌ ಸಂಖ್ಯೆಯಲ್ಲಿ ಎಷ್ಟು ನೋಂದಣಿ?
ಕೋವಿನ್‌ ವೆಬ್‌ಸೈಟ್‌ನಲ್ಲಿ ಲಿಂಕ್‌ ಮಾಡಲಾದ ಖಾತೆಗೆ ಇನ್ನೂ 3 ಜನರನ್ನು ನೀವು ಸೇರಿಸಬಹುದು. ಇದನ್ನು ಮಾಡಲು, ಖಾತೆ ವಿವರಗಳ ಪುಟದ ಕೆಳಗಿನ ಬಲಭಾಗದಲ್ಲಿರುವ ಇನ್ನಷ್ಟು ಸೇರಿಸಿ'(Add More) ಬಟನ್‌ ಕ್ಲಿಕ್‌ ಮಾಡಿ. ವ್ಯಾಕ್ಸಿನೇಶ‌ನ್‌ಗಾಗಿ ಇತರರನ್ನು ನೋಂದಾಯಿಸಲು ಮೇಲೆ ತಿಳಿಸಲಾದ ಎಲ್ಲ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.

ಪ್ರಮಾಣಪತ್ರವನ್ನು ಡೌನ್ಲೋಡ್‌ ಮಾಡುವುದು ಹೇಗೆ?
ಮೊದಲ ಲಸಿಕೆ ಪಡೆದ ಬಳಿಕ ವ್ಯಾಕ್ಸಿನೇಶನ್‌ ಪ್ರಮಾಣಪತ್ರವನ್ನು ಡೌನ್ಲೋಡ್‌ ಮಾಡಬಹುದು. ಪ್ರಮಾಣಪತ್ರದಲ್ಲಿ ಹೆಸರು, ಹುಟ್ಟಿದ ದಿನಾಂಕ, ಫ‌ಲಾನುಭವಿ ಉಲ್ಲೇಖ ಐಡಿ, ಫೋಟೋ ಐಡಿ, ಲಸಿಕೆ ಹೆಸರು, ಆಸ್ಪತ್ರೆಯ ಹೆಸರು, ದಿನಾಂಕ ಮತ್ತು ಇತರ ವಿವರಗಳಿರುತ್ತವೆ. ಪ್ರಮಾಣಪತ್ರವನ್ನು ಪಡೆಯಲು Beneficiary Reference ID ಬಹಳ ಮುಖ್ಯ. ಕೋ-ವಿನ್‌ ಪೋರ್ಟಲ್‌ (cowin.gov.in)/ ಆರೋಗ್ಯ ಸೇತು ಅಪ್ಲಿಕೇಶನ್‌/ಡಿಜಿ-ಲಾಕರ್‌ ಮೂಲಕ ಡೌನ್ಲೋಡ್‌ ಮಾಡಬಹುದು.

46 ಕೋಟಿ ಲಸಿಕೆ ಅಗತ್ಯ
ಎಪ್ರಿಲ್‌ 19ರಂದು ಬೆಳಗ್ಗೆ 8.00ರ ವರೆಗೆ 12.38 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಈ ಪೈಕಿ 10.73 ಕೋಟಿ ಮೊದಲ ಡೋಸ್‌ ಆಗಿದ್ದರೆ, 1.64 ಕೋಟಿ ಎರಡನೇ ಡೋಸ್‌ ಆಗಿದೆ. ಜನಗಣತಿಯ ಮಾಹಿತಿಯ ಪ್ರಕಾರ ಆರೋಗ್ಯ ರಕ್ಷಣೆ, ಮುಂಚೂಣಿ ಕಾರ್ಮಿಕರು ಮತ್ತು ದೇಶದ 45+ ಜನಸಂಖ್ಯೆಗೆ ಲಸಿಕೆ ನೀಡಲು ಸುಮಾರು 46 ಕೋಟಿ ಲಸಿಕೆ ಇನ್ನೂ ಅಗತ್ಯವಿದೆ. ಎಪ್ರಿಲ್‌ 1ರ ಅನಂತರ ವ್ಯಾಕ್ಸಿನೇಷನ್‌ ವೇಗವನ್ನು ಪಡೆಯಿತು. ಎಪ್ರಿಲ್‌ 5ರಂದು ದಾಖಲೆಯ 4.5 ಮಿ. ಡೋಸೇಜ್‌ ನೀಡಲಾಯಿತು, ಆದರೆ ಬಳಿಕ ಕೇವಲ 30 ಲಕ್ಷ ಡೋಸೇಜ್‌ಗಳನ್ನಷ್ಟೇ ನೀಡಲು ಸಾಧ್ಯವಾಗಿದೆ. ಲಸಿಕೆ ಕೊರತೆಯಿಂದಾಗಿ ಈ ಅಂಕಿ-ಅಂಶವು ದಿನದಿಂದ ದಿನಕ್ಕೆ ಕಡಿಮೆಯಾಗಿದೆ.

ಆನ್‌ಲೈನ್‌ ಅಪಾಯಿಂಟ್ಮೆಂಟ್‌ ಹೇಗೆ?
ವೆಬ್‌ಸೈಟ್‌ನಲ್ಲಿ ಕಾಣುವ ಕ್ಯಾಲೆಂಡರ್‌ ಐಕಾನ್‌ ಕ್ಲಿಕ್‌ ಮಾಡಿ ಅಥವಾ ನೇರವಾಗಿ ಅಪಾಯಿಂಟ್ಮೆಂಟ್‌‌ ಬಟನ್‌ ಕ್ಲಿಕ್‌ ಮಾಡಿ. ನಿಮ್ಮನ್ನು ವ್ಯಾಕ್ಸಿನೇಶ‌ನ್‌ನ ಅಪಾಯಿಟ್ಮೆಂಟ್‌‌ಗಾಗಿ “ಬುಕ್‌’ ಮಾಡುವ ಪುಟಕ್ಕೆ ಕೊಂಡೊಯ್ಯುತ್ತದೆ. ಈ ಪುಟದಲ್ಲಿ ರಾಜ್ಯ, ಜಿಲ್ಲೆ, ಬ್ಲಾಕ್‌ ಮತ್ತು ನಿಮ್ಮ ಪಿನ್‌ಕೋಡ್‌ ಮೂಲಕ ಆಯ್ಕೆಯ ವ್ಯಾಕ್ಸಿನೇಶನ್‌ ಕೇಂದ್ರವನ್ನು ಹುಡುಕಿ. ಅಲ್ಲಿ ಕಂಡುಬರುವ ಕೇಂದ್ರದ ಹೆಸರಿನ ಮೇಲೆ ಕ್ಲಿಕ್‌ ಮಾಡಿ ಮತ್ತು ಅದು ಲಭ್ಯವಿರುವ ಸ್ಲಾಟ್‌ಗಳನ್ನು ತೋರಿಸುತ್ತದೆ. ಅನಂತರ “ಬುಕ್‌’ ಬಟನ್‌ ಅನ್ನು ಕ್ಲಿಕ್‌ ಮಾಡಿ. ಆಮೇಲೆ ‘Appointment Confirmation’ಪುಟ ತೆರೆದುಕೊಳ್ಳುತ್ತದೆ. ಎಲ್ಲ ವಿವರಗಳನ್ನು ಸರಿಯಾಗಿ ಪರಿಶೀಲಿಸಿ “ಕನ್ಫರ್ಮ್’ ಬಟನ್‌ ಕ್ಲಿಕ್‌ ಮಾಡಿ. ನಿಮಗೆ ನೀಡಲಾದ ದಿನಾಂಕದಂದು ತಪ್ಪದೇ ಭೇಟಿ ನೀಡಿ ಲಸಿಕೆ ಸ್ವೀಕರಿಸಿ.

ಹತ್ತಿರದ ಕೇಂದ್ರದಲ್ಲಿ ಪಡೆಯುವುದು ಹೇಗೆ?
ಯಾವುದೇ ವೆಬ್‌ ಬ್ರೌಸರ್‌ನಲ್ಲಿ www.cowin.gov.in ಗೆ ಭೇಟಿ ನೀಡಿ. ಪುಟದ ಕೆಳಗಡೆ ಕಾಣುವ Enter place/address/eLoc ಮೇಲೆ ಕ್ಲಿಕ್‌ ಮಾಡಿ, ಅಲ್ಲಿ ಸ್ಥಳ ವಿವರಗಳನ್ನು ನಮೂದಿಸಿ ಮತ್ತು “ಗೋ’ ಬಟನ್‌ ಒತ್ತಿರಿ.

ಟಾಪ್ ನ್ಯೂಸ್

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್‌ ತಂದೆ

Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್‌ ತಂದೆ

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.