ಮಾಯವಾದವೋ ಕೆರೆಗಳು ಮಾಯವಾದವು !

ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ ಕೆರೆಗಳಿಗೆ ಕೊರತೆ ಇರಲಿಲ್ಲ

Team Udayavani, Apr 21, 2021, 2:25 AM IST

ಮಾಯವಾದವೋ ಕೆರೆಗಳು ಮಾಯವಾದವು !

ಪಟ್ಟಣ ಪಂಚಾಯತ್‌ನಲ್ಲಿ ಕೆರೆಗಳಿಗೂ ಬರವಿರಲಿಲ್ಲ ; ಕುಡಿಯುವ ನೀರಿಗೂ ಸಮಸ್ಯೆ ಇರಲಿಲ್ಲ. ಕೃಷಿ ಪ್ರಾಧಾನ್ಯ ಪ್ರದೇಶವಾದ ಗ್ರಾಮಗಳಲ್ಲಿ ನಿಧಾನವಾಗಿ ಕೆರೆಗಳು ಕರಗುತ್ತಾ ಬಂದವು. ಅದರೊಂದಿಗೇ ಕೃಷಿಗೂ ಪ್ರಾಮುಖ್ಯತೆ ಕಡಿಮೆಯಾಗುತ್ತಾ ಬಂದಿತು. ಇದರ ಬೆನ್ನಿಗೇ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸತೊಡಗಿತು. ಈಗ ಸಮಸ್ಯೆಯ ತುತ್ತ ತುದಿಗೆ ಹೋಗಿಲ್ಲ ಎಂಬುದೊಂದೇ ಸಮಾಧಾನದ ಸಂಗತಿ. ಈಗಲಾದರೂ ಕೆರೆಗಳು ಅಭಿವೃದ್ಧಿಪಡಿಸಿ ಸಮೃದ್ಧ ಜಲಮೂಲವನ್ನಾಗಿ ಮಾರ್ಪಡಿಸಿಕೊಂಡರೆ ಅದು ಪಟ್ಟಣ ಪಂಚಾಯತ್‌ನ ಜಾಣ ನಡೆಯಾದೀತು.

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಇದ್ದ ಕೆರೆಗಳ ಪೈಕಿ ಅರ್ಧದಷ್ಟು ಕೆರೆಗಳು ಈಗ ಜೀರ್ಣಗೊಂಡಿವೆ. ಉಳಿದ ಅರ್ಧದಷ್ಟು ಕೆರೆಗಳನ್ನು ಉಳಿಸಿಕೊಳ್ಳಲು ಪಟ್ಟಣ ಪಂಚಾಯತ್‌ ಮತ್ತು ಜನರು ಇನ್ನಾದರೂ ಮುಂದಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ನೀರಿನ ಕೊರತೆ ನಮ್ಮನ್ನು ಕಾಡದಿರದು.

ಉದಯವಾಣಿ ಕಲೆ ಹಾಕಿದ ಮಾಹಿತಿ ಪ್ರಕಾರ ಪ.ಪಂ. ವ್ಯಾಪ್ತಿಯಲ್ಲಿ ಸುಮಾರು 40-50 ವರ್ಷಗಳ ಹಿಂದೆ 16 ದೊಡ್ಡಕೆರೆ ಮತ್ತು 81 ಕಿರುಕೆರೆಗಳು ಸೇರಿದಂತೆ ಒಟ್ಟು 97 ಸರಕಾರಿ ಕೆರೆಗಳಿದ್ದವು. ಕಾರ್ಕಡ ಗ್ರಾಮದಲ್ಲಿ ದೇಸಿಕೆರೆ, ಮಟೆರೆ, ಬಳ್ಳಿಕೆರೆ, ಚೇಂಪಿನಕೆರೆ, ಹೆದ್ದಾರಿ ಕೆರೆ ಎನ್ನುವ ದೊಡ್ಡ ಕೆರೆಗಳು ಹಾಗೂ 25 ಕಿರು ಕೆರೆಗಳು ಸೇರಿದಂತೆ ಒಟ್ಟು 30 ಕೆರೆಗಳಿದ್ದವು. ಗುಂಡ್ಮಿ ಗ್ರಾಮದಲ್ಲಿ ಕಾನ್‌ಕೆರೆ, ಶಾಸ್ತ್ರಿಕೆರೆ, ಆಂತನಕೆರೆ, ತಗ್ಗಿನಬೈಲುಕೆರೆ, ಮಡಿವಾಳಬೆಟ್ಟು ಕೆರೆ, ಯಕ್ಷಿಮಠಕೆರೆ ದೊಡ್ಡಕೆರೆ ಮತ್ತು 24 ಚಿಕ್ಕ ಕೆರೆ ಸೇರಿದಂತೆ ಒಟ್ಟು 30 ಕೆರೆಗಳಿದ್ದವು. ಪಾರಂಪಳ್ಳಿ ಗ್ರಾಮದಲ್ಲಿ ವಿಷ್ಣುಮೂರ್ತಿ ಕೆರೆ, ದಾಸನಕೆರೆ, ಅಡಿಗರಕೆರೆ ಮತ್ತು 19 ಕಿರು ಕೆರೆ ಸೇರಿದಂತೆ 22 ಕೆರೆಗಳು ಅಸ್ತಿತ್ವದಲ್ಲಿದ್ದವು. ಚಿತ್ರಪಾಡಿ ಗ್ರಾಮದಲ್ಲಿ ಬೆಟ್ಲಕ್ಕಿ ಕೆರೆ ಮತ್ತು 14 ಕಿರುಕೆರೆಗಳೊಂದಿಗೆ ಒಟ್ಟು 15 ಕೆರೆಗಳಿದ್ದವು. ಒಟ್ಟು 97 ಕೆರೆಗಳಿದ್ದವು ಎಂದು ಕಂದಾಯ ಇಲಾಖೆಯ ದಾಖಲೆಯಲ್ಲಿದೆ.

ರೈತರು ಈ ಕೆರೆಗಳ ನೀರನ್ನು ಬಳಸಿಕೊಂಡು ವರ್ಷದಲ್ಲಿ 3 ಬಾರಿ ಭತ್ತ, ಶೇಂಗಾ ಮುಂತಾದ ಬೆಳೆ ಬೆಳೆಯುತ್ತಿದ್ದರು.

ಕೆರೆಗಳ ಸ್ವರೂಪ ಹಾಳಾಗದಿರಲಿ
ಕೆರೆಯ ಸುಂದರೀಕರಣ, ಆಧುನೀಕರಣ (ವಾಕಿಂಗ್‌ ಟ್ರ್ಯಾಕ್‌ ಇತ್ಯಾದಿ)ದ ಹೆಸರಿನಲ್ಲಿ ಒಟ್ಟೂ ಕೆರೆಗಳ ಅಸ್ತಿತ್ವಕ್ಕಾಗಲೀ ಅಥವಾ ಸುತ್ತಲಿನ ಹಸಿರಿನ ಅಸ್ತಿತ್ವಕ್ಕಾಗಲೀ (ಮರ-ಗಿಡ) ಚ್ಯುತಿ ಬಾರದಂತೆ ಸಂಬಂಧಪಟ್ಟ ಇಲಾಖೆಗಳು, ಪಟ್ಟಣ ಪಂಚಾಯತ್‌ ಗಮನಹರಿಸಬೇಕಿದೆ. ಕೆರೆ ಅಭಿವೃದ್ಧಿಪಡಿಸುವ ಗ್ರಾಮಸ್ಥ ರಿಗೂ, ಸಂಘ ಸಂಸ್ಥೆಗಳಿಗೂ ಹಸುರಿನ ಮಹತ್ವವನ್ನು ತಿಳಿಸಿ ಕೊಡಬೇಕಿದೆ. ಯಾಕೆಂದರೆ, ಈಗ ಕೆರೆಗಳ ಸುಂದರೀಕರಣ ಎಂದರೆ ಸುತ್ತಲಿನ ಬೃಹತ್‌ ಮರಗಳನ್ನು ಕಡಿದು, ಇಂಟರ್‌ಲಾಕ್‌ ಹಾಕುವುದು. ಇಂಥ ಕಾಂಕ್ರೀಟ್‌ ವನ ನಿರ್ಮಿಸುವ ಅಪಾಯವನ್ನು ತಡೆಯಬೇಕಿದೆ.

 ಕುಡಿಯುವ ನೀರಿಗೆ ಬಳಕೆ
ಪ.ಪಂ. ವ್ಯಾಪ್ತಿಯಲ್ಲಿ 417 ಮನೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜತೆಗೆ 8.9. ಎಂ.ಸಿ.ಎಫ್‌.ಟಿ. ನೀರಿನ ಬೇಡಿಕೆಯನ್ನು ಪ.ಪಂ.ನ 8 ಬಾವಿಗಳಿಂದ ಪೂರೈಸಲಾಗುತ್ತಿಲ್ಲ. ಹೀಗಾಗಿ ಕೆರೆಗಳ ಹೂಳೆತ್ತಿ ಅಭಿವೃದ್ಧಿ ಪಡಿಸಿದರೆ ಬಾವಿಯ ನೀರಿನ ಮಟ್ಟ ಮತ್ತು ಅಂತರ್ಜಲ ಮಟ್ಟ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ದೂರವಾಗಲಿದೆ ಹಾಗೂ ಖಾಸಗಿ ಬಾವಿಗಳಲ್ಲೂ ಜಲಮಟ್ಟ ಹೆಚ್ಚಾಗಲಿದೆ.

ಕಂದಾಯ ಇಲಾಖೆಯ ಮೂಲಕ ಸರಕಾರಿ ಕೆರೆಗಳ ಸರ್ವೆ ನಡೆಸಿ ಗುರುತಿಸಬೇಕಿದ್ದು, ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಬೇಕಿದೆ. ಪ್ರಸ್ತುತ ಪಾರಂಪಳ್ಳಿ ವಿಷ್ಣುಮೂರ್ತಿ ದೇವಸ್ಥಾನ ಕೆರೆಯನ್ನು ಸ್ಥಳೀಯರು ಒಟ್ಟಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಇದೇ ಮಾದರಿಯ ಕೆಲಸ ಪ್ರತಿಯೊಂದು ಗ್ರಾಮದಲ್ಲೂ ಆಗಬೇಕಿದೆ ಮತ್ತು ಕೆರೆಗಳ ಅಭಿವೃದ್ಧಿ ಸರಕಾರ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾಕಷ್ಟು ಅವಕಾಶಗಳಿದೆ. ಗ್ರಾಮಸ್ಥರ ಸಭೆ ಕರೆದು, ಕೆರೆಗಳ ಉಳಿವಿನ ಬಗ್ಗೆ ಚರ್ಚಿಸಿ ಯೋಜನೆಗಳನ್ನು ಹಾಕಿಕೊಳ್ಳುವ ಇಚ್ಛಾಶಕ್ತಿಯನ್ನು ಆಡಳಿತ ವ್ಯವಸ್ಥೆ ತೋರಬೇಕಿದೆ.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.