ಎ. 25ರಂದು ಬೃಂದಾವನ ಕನ್ನಡ ಕೂಟದಿಂದ ವಸಂತೋತ್ಸವ
Team Udayavani, Apr 21, 2021, 12:28 PM IST
ನ್ಯೂಜರ್ಸಿ : ಬೃಂದಾವನ ಕನ್ನಡ ಕೂಟದಿಂದ ವಸಂತೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎ. 17ರಂದು ಭಾವ ಮೈದುನ ನಾಟಕ ಪ್ರದರ್ಶನ, ಎ. 23ರಂದು ಬಂಟಪಲ್ಲಿ ಸುದರ್ಶನ್ ಮತ್ತು ಬೃಂದಾವನ ತಂಡದಿಂದ ಸಂಗೀತ ಸುಧೆ ಸುಗಮ ಸಂಗೀತ ಕಾರ್ಯಕ್ರಮ, ಎ. 24ರಂದು ಹಬ್ಬದೂಟ, ಎ. 25ರಂದು ಬೆಳಗ್ಗೆ 10 ಗಂಟೆಯಿಂದ ಯೋಗೀಂದ್ರ ಭಟ್ ಉಳಿ ಅವರಿಂದ ಪಂಚಾಂಗ ಶ್ರವಣ, ಡಾ| ತೇಜಸ್ವಿನಿ ಅನಂತ್ ಕುಮಾರ್ ಅವರಿಂದ ಹೊಸ ವರ್ಷದ ಸಂದೇಶ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಬೃಂದಾವನದ ಸದಸ್ಯರಿಂದ ವರ್ಣರಂಜಿತ ಫ್ಯಾಷನ್ ಶೋ, ಯುವ ಬೃಂದಾವನ ತಂಡದಿಂದ ಪ್ರತಿಭಾ ಪ್ರದರ್ಶನ, ಮೇ 2ರಂದು ಇಂಟಿಗ್ರೇಟಿವ್ ಹೆಲ್ತ್ ವೆಬಿನಾರ್, ಜು. 10ರಂದು ಪಿಕ್ನಿಕ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.brindavana.org ಅನ್ನು ನೋಡಬಹುದು.
ಎ. 24, ಮೇ 1ರಂದು ತರಬೇತಿ
ಉತ್ತರ ಕೆರೊಲೈನಾ : ಕೆರೊಲೈನಾ ಕನ್ನಡ ಬಳಗ ಮತ್ತು ವಿವಿಧ ಕನ್ನಡ ಸಂಘಗಳ ಸಹಯೋಗದೊಂದಿಗೆ ನಡೆಯುತ್ತಿರುವ ಧ್ಯಾನ ಕಲೆಯಲ್ಲಿ ಎ. 24ರಂದು ಧ್ಯಾನದ ಮೂಲಕ ಪ್ರಾರ್ಥನೆ ಮತ್ತು ಮೇ 1ರಂದು ಜಾಗೃತ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಕುರಿತು ತರಬೇತಿ ಕಾರ್ಯಕ್ರಮ ನಡೆಯಲಿದೆ.
ಮೇ 2ರಂದು ಯುಗಾದಿ ಸಂಭ್ರಮ
ನ್ಯೂಯಾರ್ಕ್ : ಕನ್ನಡ ಕೂಟ ಕ್ಯಾಪಿಟಲ್ ವತಿಯಿಂದ ವರ್ಚುವಲ್ ಯುಗಾದಿ ಸಂಭ್ರಮ ಮೇ 2ರಂದು ಸಂಜೆ 6ರಿಂದ 8 ಗಂಟೆ ವರೆಗೆ ಕೆಕೆಸಿಡಿ ಫೇಸ್‌ಬುಕ್ ಲೈವ್‌ನಲ್ಲಿ ನಡೆಯಲಿದೆ.
ಎ. 25ರಂದು ಯುಗಾದಿ ವಿಶೇಷ ಆದರ್ಶ ದಂಪತಿ ಸ್ಪರ್ಧೆ
ಜರ್ಮನಿ
ರೈನ್‌ಮೈನ್ ಕನ್ನಡ ಸಂಘದಿಂದ ವಿಸ್ತಾರ ಏರ್‌ಲೈನ್ ಪ್ರಾಯೋಜಕತ್ವದಲ್ಲಿ ಯುಗಾದಿ ವಿಶೇಷವಾಗಿ ರೈನ್‌ಮೈನ್ ಕನ್ನಡ ಸಂಘದ ನೋಂದಣಿ ಮಾಡಿದ ಅಭ್ಯರ್ಥಿಗಳಿಗಾಗಿ ಆದರ್ಶ ದಂಪತಿಗಳು ಸ್ಪರ್ಧೆ ಎ. 25ರಂದು ಅಪರಾಹ್ನ 2 (ಸಿಇಟಿ) ಗಂಟೆಗೆ ನಡೆಯಲಿದೆ.
ಇಂದು ನ್ಯೂಜಿಲ್ಯಾಂಡ್ ಕನ್ನಡ ಕೂಟದಿಂದ ಯುಗಾದಿ ಸಂಭ್ರಮ
ನ್ಯೂಜಿಲ್ಯಾಂಡ್
ಇಲ್ಲಿನ ಕನ್ನಡ ಕೂಟದ ವತಿಯಿಂದ ಯುಗಾದಿ ವಿಶೇಷ ಕಾರ್ಯಕ್ರಮ ಎ. 17ರಂದು ಬೆಳಗ್ಗೆ 10.30ರಿಂದ ಮೌಂಟ್ ಈಡನ್ ವಾರ್ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.