ಕೋವಿಡ್ ಸೋಂಕಿನಿಂದ ರಕ್ಷಣೆ ಮಾಡುತ್ತದೆಯೇ ಸ್ಟೀಮಿಂಗ್..!? ಅಧ್ಯಯನಗಳು ಏನು ಹೇಳುತ್ತವೆ..?
Team Udayavani, Apr 22, 2021, 11:34 AM IST
ನವ ದೆಹಲಿ : ಕೋವಿಡ್ ನ ಎರಡನೇ ಅಲೆ ಮತ್ತೆ ಇಡೀ ವಿಶ್ವವನ್ನೇ ಅಡಿಮೇಲಾಗಿಸಿದೆ. ನಾಗರಿಕ ವ್ಯವಸ್ಥೆ ಚೇತರಿಕೆಗೊಳ್ಳುತ್ತಿದೆ ಎಂಬಷ್ಟರಲ್ಲೇ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ ಕೋವಿಡ್ ರೂಪಾಂತರಿ ಅಲೆ.
ವಿಶ್ವಾದ್ಯಂತ 143 ದಶಲಕ್ಷಕ್ಕೂ ಹೆಚ್ಚು ಜನರು ತೀವ್ರವಾದ ಉಸಿರಾಟದ SARS-CoV-2 ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು 3 ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಈ ನಡುವೆ, ಜನರು ತಮ್ಮನ್ನು ತಾವು ಮಾರಣಾಂತಿಕ ವೈರಸ್ ನಿಂದ ರಕ್ಷಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಾದ್ಯಂತ ಟ್ರೆಂಡ್ ಆಗುತ್ತಿದೆ ಎಂದು ಸುದ್ದಿಯಾಗಿದ್ದು, ಸ್ಟೀಮ್ ಇನ್ ಹೇಲಿಂಗ್ ಅಥವಾ ಉಗಿ ಉಸಿರಾಡುವಿಕೆಯ ಕಾರಣದಿಂದಾಗಿ ಕೋವಿಡ್ ಸೊಂಕನ್ನು ದೂರ ಮಾಡಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಯಡಿಯೂರಪ್ಪ
ಆದರೆ, ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಅಥವಾ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ನಿಂದ ಕೋವಿಡ್ ಸೋಂಕನ್ನು ದೂರ ಮಾಡಲು ಅಥವಾ ಅದರಿಂದ ರಕ್ಷಿಸಿಕೊಳ್ಳಲು ಸ್ಟೀಮ್ ಸಹಾಐ ಮಾಡುತ್ತದೆ ಎಂಬ ಯಾವುದೇ ಅಧಿಕೃತವಾಗಿ ಹೇಳಿಲ್ಲ ಎಂಬುವುದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಈ ಬಗ್ಗೆ ಸುದ್ದಿ ಸಂಸ್ಥೆ ರಾಯಿಟರ್ಸ್ ಗೆ ಪ್ರತಿಕ್ರಿಯೆ ನೀಡಿದ ಸಿಡಿಸಿಯ ಪ್ರತಿನಿಧಿಯೊಬ್ಬರು, ಕೋವಿಡ್ ಸೋಂಕಿಗೆ ಸ್ಟೀಮ್ ಇನ್ ಹೇಲಿಂಗ್ ಸಹಾಯ ಮಾಡುತ್ತದೆ ಎನ್ನುವುದರ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಶೀತಗಳು ಮತ್ತು ಮೇಲ್ಭಾಗದ ಶ್ವಾಸ ಕೋಶದ ಸಮಸ್ಯೆಗಳಿಗೆ ಸಾಮಾನ್ಯವಾಗಿ ಪರಿಹಾರ ಮಾರ್ಗವಾಗಿ ಈ ಸ್ಟೀಮ್ ಇನ್ ಹೇಲಿಂಗ್ ಅಥವಾ ಉಗಿ ಉಸಿರಾಡುವಿಕೆಯನ್ನು ಬಳಸಲಾಗುತ್ತದೆ.
ಆದರೆ ವೈಜ್ಞಾನಿಕ ಅಧ್ಯಯನಗಳು ಇದು ಕೆಲವು ಪ್ರಯೋಜನಗಳನ್ನು ಹೊಂದಿದೆ ಎಂದು ಸಾಬೀತು ಪಡಿಸಿದೆ. ಆದರೇ, ಚರ್ಮ ಸಂಬಂಧಿ ಕೆಲವು ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ತಿಳಿಸಿವೆ.
“ಬಿಸಿನೀರಿನಿಂದ ತುಂಬಿದ ಪ್ಯಾನ್ ಮೇಲೆ ಟವೆಲ್ ಅಥವಾ ಬೆಡ್ ಶೀಟ್ ನ ಸಹಾಯದಿಂದ ತಲೆ ಮುಚ್ಚಿಕೊಂಡು ಉಗಿಯನ್ನು ಸೇವಿಸುವ ಸಾಮಾನ್ಯ ತಂತ್ರ ಇದಾಗಿದ್ದು, ಬಿಸಿ ದ್ರವ ಅಥವಾ ಕಂಟೇನರ್ ನ ಸಂಭಾವ್ಯ ಸಂಪರ್ಕದಿಂದಾಗಿ ಅಪಾಯಕಾರಿ” ಎಂದು ಸ್ಪ್ಯಾನಿಷ್ ಪೀಡಿಯಾಟ್ರಿಕ್ಸ್ ಅಸೋಸಿಯೇಷನ್ ನ ಅಧ್ಯಯನವು ಹೇಳಿದೆ.
ಇನ್ನು, ಬರ್ಮಿಂಗ್ ಹ್ಯಾಮ್ ನ ಮಕ್ಕಳ ಆಸ್ಪತ್ರೆ ಸ್ಟೀಮ್ ಇನ್ ಹೇಲೇಷನ್ ಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಕೋವಿಡ್ ನಂತಹ ಮಾರಣಾಂತಿಕ ಸೋಂಕನ್ನು ಸ್ಟೀಮ್ ಇನ್ ಹೇಲೇಷನ್ ಗುಣಪಡಿಸದಿದ್ದರೂ ಸಹ, ನಿಮ್ಮ ದೇಹವು ಆರಾಮವಾಗುವಂತೆ ಮಾಡುತ್ತದೆ ಎನ್ನುತ್ತಾರೆ ಕೆಲವು ತಜ್ಞ ವೈದ್ಯರು.
ಇದನ್ನೂ ಓದಿ : ಭಾರತ: ಕಳೆದ 24ಗಂಟೆಗಳಲ್ಲಿ ದಾಖಲೆಯ 3.14 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.