ಹೊರನಾಡಿನಲ್ಲಿ ಕನ್ನಡದ ಕಂಪು ಹರಡುತ್ತಿರುವ ಆರ್‌ಎಂಕೆಎಸ್
Team Udayavani, Apr 22, 2021, 12:12 PM IST
ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು… ಎಂಬ ಕಗ್ಗದ ಸಾಲಿನಂತೆ ತಮ್ಮ ಬದುಕಿನ ಬಂಡಿಯ ಬೆನ್ನತ್ತಿ ಹೊರಟವರು ತಾಯ್ನೆಲವನ್ನು ಬಿಟ್ಟು ಯಾವುದೋ ದೇಶದ ಮೂಲೆಯಲ್ಲಿ ನೆಲೆಸುವುದು, ಅಲ್ಲಿ ತನ್ನ ಸಹ ಭಾಷಿಕರನ್ನು ಹುಡುಕಿಕೊಳ್ಳುವುದು, ಸಾವಿರಾರು ಮೈಲಿಗಳಾಚೆಗೂ ಕನ್ನಡಿಗರಾಗಿ ಉಳಿದುಕೊಂಡು ತಮ್ಮ ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಪ್ರವಹಿಸಬೇಕು ಎಂಬ ತುಡಿತ ದೇಶ ಬಿಟ್ಟು ಬಂದ ಪ್ರತಿಯೊಬ್ಬ ಕನ್ನಡಿಗರಲ್ಲೂ ಹುಟ್ಟುವುದು. ಹೀಗೆ ನೂರಾರು ಕನ್ನಡ ಮನಸ್ಸುಗಳ ತುಡಿತದ ಸ್ಪಂದನೆಯೇ ರೈನ್ ಮೈನ್ ಕನ್ನಡ ಸಂಘ.
ಜರ್ಮನಿ ಕನ್ನಡಿಗರಿಗೆ
Lock ಆದ Potlock
ಕರ್ನಾಟಕದಿಂದ ದೂರ ಬಂದು ಕೆಲವು ವರ್ಷಗಳಿಂದ ಜರ್ಮನಿಯಲ್ಲಿದ್ದ ಕನ್ನಡಿಗರಿಗೆ ಮತ್ತಷ್ಟು ಕನ್ನಡಿಗರೊಂದಿಗೆ ಒಗ್ಗೂಡಬೇಕೆಂಬ ಹಂಬಲ ಕಾಡಿದ್ದರೂ ಅದಕ್ಕೆ ಸೂಕ್ತ ಸಂದರ್ಭ ಒದಗಿರಲಿಲ್ಲ.
2015ರ ಮಧ್ಯೆ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿದ್ದು ಅದಕ್ಕಾಗಿ ಎಲ್ಲ ಪ್ರಾದೇಶಿಕ ಸಂಘಗಳಿಗೆ ಕರೆ ಕಳುಹಿಸಿತು. ಆದರೆ ಅದರಲ್ಲಿ ಕರ್ನಾಟಕವನ್ನು ಯಾರೂ ಪ್ರತಿನಿಧಿಸದಿದ್ದದ್ದು ಕನ್ನಡಿಗರ ಹೃದಯದಲ್ಲಿ ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಕಿಚ್ಚು ಹೆಚ್ಚಿಸಿತು.
ಕನ್ನಡ ಮಾತನಾಡುವ 8 – 9 ಕುಟುಂಬಗಳು Potluck ನೆಪದಲ್ಲಿ ಒಂದೆಡೆ ಸೇರಿ ಕನ್ನಡಿಗರನ್ನು ಒಂದು ಗೂಡಿಸುವ ದಾರಿಯ ಬಗ್ಗೆ ಆಲೋಚಿಸಿದರು. ಇದೇ ಸಂದರ್ಭದಲ್ಲಿ ಫ್ರಾಂಕ್‌ಫರ್ಟ್‌ನಲ್ಲಿ ಕನ್ನಡ ಸಿನೆಮಾ ಒಂದು ಪ್ರದರ್ಶನಗೊಂಡಿದ್ದು ಅದನ್ನು ನೋಡಲು ಹಲವಾರು ಕನ್ನಡಿಗರು ಒಟ್ಟಾಗಿದ್ದರು. ಇಷ್ಟೆಲ್ಲ ಕನ್ನಡಿಗರಿರುವಾಗ ನಾವೇಕೆ ಸಂಘಟಿತರಾಗಿ ನಮ್ಮ ಕನ್ನಡ ಭಾಷೆಯ ಪರಂಪರೆಯನ್ನು ಬೆಳೆಸಬಾರದು ಎಂಬ ಯೋಚನೆ ಬಂದದ್ದೇ ಮುಂದೆ ಅದು ಯೋಜನೆಯಾಗಿ ಕನ್ನಡ ಸಂಘವಾಗಲು ಮುನ್ನುಡಿಯಾಯಿತು.
ಸ್ನೇಹ ಹಸ್ತ ಚಾಚಿದ ಆರ್‌ಎಂಕೆಎಸ್
ರೈನ್ ಮೈನ್ ಪ್ರದೇಶದ ಸುತ್ತ ಮುತ್ತಲಿನ ಕನ್ನಡಿಗರನ್ನೆಲ್ಲ ಒಂದು ಸೂರಿನಡಿ ಒಂದುಗೂಡಿಸಲು 2015ರಲ್ಲಿ ಸ್ನೇಹ ಕೂಟ ಹಮ್ಮಿಕೊಳ್ಳಲಾಯಿತು. ಇದರಲ್ಲಿ ಕನ್ನಡ ಸಂಘ ಕಟ್ಟುವ ಉದ್ದೇಶ, ಗುರಿ ಹಾಗೂ ಅದನ್ನು ಹೇಗೆ ಬೆಳಸಿಕೊಂಡು ಹೋಗಬಹುದು ಎಂಬ ಸಲಹೆ ಸೂಚನೆಗಳಿಗಾಗಿ ಮುಕ್ತವಾಗಿ ಚರ್ಚಿಸುವುದಾಗಿತ್ತು. ಸ್ನೇಹ ಕೂಟದಲ್ಲಿ ಸಿಕ್ಕ ಅಗಾಧ, ಅಮೂಲ್ಯ ಪ್ರತಿಕ್ರಿಯೆ ರೈನ್ ಮೈನ್ ಕನ್ನಡಿಗರ ಸಂಘವಾಗಿ ರೂಪ ತಳೆದು 2016ರ ಮಾರ್ಚ್‌ನಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಂಡಿತು. ಪ್ರಸ್ತುತ 150 ಕ್ಕೂ ಹೆಚ್ಚು ಕುಟುಂಬಗಳು ಆರ್‌ಎಂಕೆಎಸ್‌ನ ಸದಸ್ಯರಾಗಿದ್ದು ಕನ್ನಡ ಭಾಷಾ ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಹೋಗುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಲು ತಮ್ಮದೇ ರೀತಿಯಲ್ಲಿ ಸಹಕರಿಸುತ್ತಿದ್ದಾರೆ.
ಚಿಗುರೊಡೆದ ಆರ್‌ಎಂಕೆಎಸ್
ಸ್ನೇಹ ಕೂಟವಾಗಿ ಹಲವಾರು ಸಹೃದಯಿ ಕನ್ನಡಿಗರು ಬಿತ್ತಿದ ಬೀಜ ಚೈತ್ರ ಮಾಸದಲ್ಲಿ ಯುಗಾದಿ ಹಬ್ಬದ ಉತ್ಸವವಾಗಿ ಚಿಗುರೊಡೆದು ಹೊಸ ವರುಷದ ಹೊಸ ಹರುಷವನ್ನು 2016ರಲ್ಲಿ ಆಚರಿಸಿತು. 2018ರಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ಹಾಗೂ ಅವರ ಪುತ್ರ ಸಾಗರ್ ಗುರುರಾಜ್ ಅವರಿಂದ ಸಂಗೀತ ಸಂಜೆಯನ್ನು ಏರ್ಪಡಿಸಿ ಮತ್ತೂಂದು ಯುಗಾದಿಯನ್ನು ಸಂಭ್ರಮಿಸಲಾಯಿತು. ಇಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ, ರಂಗೋಲಿ, ಜನಪ್ರಿಯ ಗಾದೆಗಳ ಸ್ಪರ್ಧೆಗಳ ಜತೆ ಹಲವು ಆಟಗಳು ಮೆಹಂದಿ ಬೂತ್ ಅದರೊಟ್ಟಿಗೆ ರುಚಿಯಾದ ಹಬ್ಬದ ಊಟ ಎಲ್ಲರನ್ನು ಒಂದಷ್ಟು ಗಂಟೆಗಳ ಕಾಲ ಭಾರತಕ್ಕೆ ಕರೆದೊಯ್ದಿತ್ತು.
ಆರ್‌ಎಂಕೆಎಸ್‌ನ ವೆಬ್‌ಸೈಟ್ ಪ್ರಾರಂಭ
2016 ಜೂನ್ 26ರಂದು ಆರ್‌ಎಂಕೆಎಸ್ ಅಂತರ್ಜಾಲ ತಾಣಗಳ ಪಟ್ಟಿಗೆ ತನ್ನ ಸ್ವಂತ ವೆಬ್‌ಸೈಟ್ ಒಂದನ್ನು ರಚಿಸಿತ್ತು. ಇದನ್ನು ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದ್ದರು.
ಕ್ರಿಕೆಟ್ ತಂಡದ ರಚನೆ
ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಷ್ಟೇ ಅಲ್ಲದೇ ಕ್ರೀಡಾಸಕ್ತರಿಗಾಗಿ ಅವಕಾಶವನ್ನು ಒದಗಿಸುವ ಉದ್ದೇಶದಿಂದ ಕ್ರಿಕೆಟ್ ತಂಡವನ್ನು ಕಟ್ಟಿ, ಏಇಅ ನಡೆಸಿದ ಐnಛಛಿಟಛಿnಛಛಿnಛಿ ಈಚy ಇrಜಿckಛಿಠಿ ಇuಟ 2016 ರಲ್ಲಿ ನಮ್ಮ ಆರ್‌ಎಂಕೆ ಚಾಲೆಂಜರ್ಸ್ ತಂಡ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿತು. ಸೋಲು ಗೆಲುವಿನ ಲೆಕ್ಕಾಚಾರ ಪಕ್ಕಕ್ಕಿರಿಸಿ ಆಟದ ಮೈದಾನದಲ್ಲಿ ಒಂದಷ್ಟು ಕನ್ನಡಿಗರು ಒಟ್ಟು ಸೇರುವುದೇ ಇದರ ಉದ್ದೇಶವಾಗಿತ್ತು.
ಗ್ರಿಲ್ ಆ್ಯಂಡ್ ಪಿಕ್‌ನಿಕ್
ಕುಟುಂಬದೊಂದಿಗೆ ಕೂಡಿ ಸಣ್ಣ ಪ್ರವಾಸಕ್ಕೆ ಹೋಗುವುದು, ಪ್ರಕೃತಿಯ ಮಡಿಲಲ್ಲಿ ಕೂತು ಕಾಡುಹರಟೆ ಹೊಡೆಯುತ್ತಾ ಮನೆಯಿಂದ ತಂದ ಬುತ್ತಿ ಸವಿಯುವುದು ನಮ್ಮೆಲ್ಲರ ಬದುಕಿನಿಂದ ಕಳೆದು ಹೋದ ಪುಟ ಎಂದುಕೊಂಡಿದ್ದ ಮನಸಿಗೆ ಎrಜಿll ಹಾಗೂ ಕಜಿcnಜಿc ನಂತಹ ವಿಚಾರದ ಮೂಲಕ ಹೊಸದೊಂದು ಕುಟುಂಬವನ್ನು ತಮ್ಮದಾಗಿಸಿಕೊಳ್ಳುವ ಸುಸಂದರ್ಭವನ್ನು ಕಲ್ಪಿಸಿ ಆರ್‌ಎಂಕೆಎಸ್‌ಎಲ್ಲರ ಸಂತೋಷವನ್ನು ಇಮ್ಮಡಿಗೊಳಿಸಿದೆ.
ಕನ್ನಡ ರಾಜ್ಯೋತ್ಸವ
ಕನ್ನಡಿಗರನ್ನು ಕಲೆ ಹಾಕಿ ಕನ್ನಡೇತರ ನೆಲದಲ್ಲಿ ಕನ್ನಡವನ್ನು ಜೀವಂತವಾಗಿರಿಸುವಲ್ಲಿ ಆರ್‌ಎಂಕೆಎಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. 2016ರಿಂದ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದೆ. ಪ್ರಸಿದ್ಧ ಗಾಯಕರಾದ ರತ್ನಮಾಲಾ ಪ್ರಕಾಶ್ ಹಾಗೂ ಎಚ್.ಎಸ್. ಶ್ರೀನಿವಾಸ ಮೂರ್ತಿ ಅವರಿಂದ ರಸಸಂಜೆ ಏರ್ಪಡಿಸಿದ್ದಲ್ಲದೆ, ಸ್ಥಳೀಯರಿಂದ ಕಂಸಾಳೆ, ಕೋಲಾಟ, ಜಾನಪದ ನೃತ್ಯ ಹಾಗೂ ಹಾಡುಗಳು, ನಾಟಕಗಳು ಹೀಗೆ ನಾನಾ ಕಾರ್ಯಕ್ರಮಗಳ ಮೂಲಕ ಹಲವರಲ್ಲಿರುವ ಪ್ರತಿಭೆಗೆ ಕನ್ನಡಿ ಹಿಡಿದು ಅನಾವರಣಗೊಳಿಸುತ್ತಿದೆ.
ಬಹು ಮುಖ್ಯವಾಗಿ ಕರ್ನಾಟಕದ ಸಾಂಪ್ರ ದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖ ವಾದ ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ
ಕಲೆಯಾದ ಯಕ್ಷಗಾನವನ್ನು ಪ್ರೋತ್ಸಾಹಿಸುತ್ತಿರುವುದು ವಿಶೇಷವೇ ಸರಿ.
ಆನ್ ಲೈನ್ ಎಂಬ ಕಿಟಕಿಯೊಳಗೆ
ಕಳೆದ ವರ್ಷದಿಂದ ಇಡೀ ಪ್ರಪಂಚಕ್ಕೆ ಕಾಡುತ್ತಿರುವ ಸಮಸ್ಯೆ ನೇರವಾಗಿ ಒಬ್ಬರಿಗೊಬ್ಬರು ಭೇಟಿಯಾಗಲೂ ಸಾಧ್ಯವಾಗದಂತೆ ತಡೆಗೋಡೆಯಾಗಿರುವಾಗ ಅದರÇÉೇ ಕಿಟಿಕಿಯೊಂದನ್ನು ನಿರ್ಮಿಸಿ ಆರ್‌ಎಂಕೆಎಸ್ ಆನ್‌ಲೈನ್ ಮೂಲಕವೇ ಎಲ್ಲರನ್ನು ಒಂದುಗೂಡಿಸುತ್ತಾ ಹಲವಾರು ಕನ್ನಡಪರ ಕಾರ್ಯಗಳನ್ನು ಹಿಂದಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಮುಂದುವರಿಸುತ್ತಿದೆ.
ದೇಹ ಮತ್ತು ಮನಸ್ಸಿನ ಸುಸ್ಥಿತಿಗೆ ಯೋಗ, ಕಲ್ಪನೆ ಹಾಗೂ ಭಾವನೆಯ ಅಭಿವ್ಯಕ್ತಿಗೆ ಕವನ ವಾಚನ, ಕಲಾತ್ಮಕತೆಗೆ ಚಿತ್ರಕಲೆ, ಕೈ ಚಳಕದಿಂದ ಬೆರಗಾಗಲು ಮ್ಯಾಜಿಕ್ ಶೋ, ಕಲೆಯನ್ನು ಹುರಿದುಂಬಿಸಲು ಯಕ್ಷಗಾನ, ಪ್ರತಿಭೆಯ ಅನಾವರಣಕ್ಕಾಗಿ ಪ್ರತಿಭಾ ಕಾರಂಜಿ, ಎಲ್ಲರ ಮನೆಯ ನಳಮಹಾರಾಜರ ಉತ್ತೇಜನಕ್ಕಾಗಿ ಅಡುಗೆ ಕಾರ್ಯಕ್ರಮ, “ಗೃಹಿಣಿ ಗೃಹಮುಚ್ಯತೆ’ ಎಂದು ಸಾರುವ ಮಹಿಳಾ ದಿನಾಚರಣೆ, ಅತಿಮುಖ್ಯವಾಗಿ ಕನ್ನಡ ಭಾಷಾ ಗಂಧವನ್ನು ಹರಡಿಸಲು “ಕನ್ನಡ ಕಲಿ’ ಹೀಗೆ ನಾನಾ ಯೋಜನೆಗಳೊಂದಿಗೆ ಸಾಗರದಾಚೆ ಕನ್ನಡದ ಕಹಳೆ ಮೊಳಗಿಸುತ್ತಿದೆ.
ಕರುನಾಡ, ಸಿರಿ ನುಡಿಯ ಒಲವಿನ ದೀಪವನ್ನು ಎಲ್ಲರೂ ಒಂದುಗೂಡಿ ಹಚ್ಚಿ, ನಡುನಾಡೆಯಿರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಎಂಬ ಡಿ.ಎಸ್. ಕರ್ಕಿ ಅವರ ಕವನದ ಸಾಲಿನಂತೆ ಕನ್ನಡಮ್ಮನ ತೇರನ್ನು ಎಳೆಯುತ್ತಾ ಸಾಗುತ್ತಿರುವ ರೈನ್ ಮೈನ್ ಕನ್ನಡ ಸಂಘದ ಜತೆ ನಿಸ್ಪೃಹತೆಯಿಂದ ಕೈ ಜೋಡಿಸಿರುವವರು ಹಲವಾರು ಮಂದಿ. ದಿನನಿತ್ಯದ ಸಂವಹನಕ್ಕೆ ಅಗತ್ಯವಾದ ಭಾಷೆಯೊಂದು ಕಾಲಾಂತರದಲ್ಲಿ ಹಲವು ಕನ್ನಡ ಮನಸ್ಸುಗಳನ್ನು ಸೀಮಾತೀತವಾಗಿ ಭಾವನಾತ್ಮಕವಾಗಿ ಒಟ್ಟುಗೂಡಿಸಿದೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎನ್ನುತ್ತಾ ಕನ್ನಡದ ಅಸ್ಮಿತೆಯನ್ನು ಹೊರನಾಡಿನಲ್ಲಿ ಉಳಿಸಿಕೊಂಡಿದೆ.
ಶೋಭಾ ಚೌಹಾನ್, ಫ್ರಾಂಕ್‌ಫರ್ಟ್, ಜರ್ಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.