ಐಸಿಯುನಲ್ಲಿದ್ದು ಸೋಂಕು ಗೆದ್ದವರು ಹೆಚ್ಚಳ
Team Udayavani, Apr 22, 2021, 1:15 PM IST
ಬೆಂಗಳೂರು: ಈ ಬಾರಿ ಪರಿಸ್ಥಿತಿ ಗಂಭೀರಗೊಂಡು ತುರ್ತುನಿಗಾ ಘಟಕದಲ್ಲಿ (ಐಸಿಯು) ಸೇರಿ ಚಿಕಿತ್ಸೆಪಡೆದು ಗುಣಮುಖರಾಗುತ್ತಿರುವ ಕೊರೊನಾ ಸೋಂಕಿತರ ಪ್ರಮಾಣ ಶೇ.95ಕ್ಕೆ ಹೆಚ್ಚಳವಾಗಿದೆ. ಕೊರೊನಾ ಲಸಿಕೆ ಮತ್ತು ಟೆಲಿ ಐಸಿಯು ನಿಗಾವ್ಯವಸ್ಥೆಗಳ ಪರಿಣಾಮಕಾರಿಯಾಗಿ ಜಾರಿಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ದೇಶಾದ್ಯಂತ ವೆಂಟಿಲೇಟರ್ ಐಸಿಯು ಚಿಕಿತ್ಸೆ ಹಂತಕ್ಕೆ ತಲುಪಿದ ಸೋಂಕಿತರ ಗುಣಮುಖ ಪ್ರಮಾಣ ಶೇ.75ರಷ್ಟಿದೆ. ರಾಜ್ಯದ ಕೊರೊನಾಮೊದಲ ಅಲೆಯಲ್ಲಿ ವೆಂಟಿಲೇಟರ್ ಹಂತಕ್ಕೆ ತಲುಪಿದ್ದ ಸೋಂಕಿತರಲ್ಲಿ ಶೇ.80ರಷ್ಟು ಮಾತ್ರ ಗುಣಮುಖರಾಗುತ್ತಿದ್ದರು. ಅಂದರೆ, 100 ಮಂದಿ ಐಸಿಯು ಸೇರಿದರೆ 80 ಮಂದಿ ಗುಣಮುಖರಾಗಿ,20 ಸೋಂಕಿತರು ಸಾವಿಗೀಡಾಗುತ್ತಿದ್ದರು. ಆದರೆ,ಎರಡನೇ ಅಲೆಯಲ್ಲಿ 95 ಮಂದಿ ಗುಣಮುಖರಾಗಿ ಐದು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗುತ್ತಿದ್ದಾರೆ.
ಅಲ್ಲದೆ, ಐಸಿಯು ಚಿಕಿತ್ಸೆಪಡೆಯುತ್ತಿರುವವರ ಸೋಂಕಿತರ ಪ್ರಮಾಣ ಕೂಡಾ ಅರ್ಧಕ್ಕರ್ಧ ಇಳಿಕೆಯಾಗಿದೆ.ಸೋಂಕು ತೀವ್ರತೆ ಹೆಚ್ಚಳವಾಗಿರುವವರಿಗೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತದೆ.ಇದರಲ್ಲಿ ಆಕ್ಸಿಜನ್ ಐಸಿಯು, ವೆಂಟಿಲೇಟರ್ ಐಸಿಯು ಎಂಬ ಎರಡು ಘಟಕಗಳಿರುತ್ತವೆ.
ಈ ಪೈಕಿ ಸೋಂಕಿ ತರ ಸ್ಥಿತಿ ತೀರಾ ಗಂಭೀರವಾಗಿದ್ದರೆ ವೆಂಟಿಲೇಟರ್ ಐಸಿಯುಗೆ ವರ್ಗಾಹಿಸಲಾಗುತ್ತದೆ. ಆಗಸೋಂಕಿ ತರು ವೆಂಟಿಲೇಟರ್ ಸಹಾಯದಿಂದ ಮಾತ್ರಜೀವಂತವಾಗಿದ್ದು, ಅದನ್ನು ತೆಗೆದರೆ ಜೀವ ಕಳೆದುಕೊಳ್ಳುವ ಸ್ಥಿತಿಗೆ ತಲುಪಿರುತ್ತಾರೆ. ಈ ಸಂದರ್ಭದಲ್ಲಿ ಕ್ಷಣ ಕ್ಷಣಕ್ಕೂ ನಿಗಾವಹಿಸಲಾಗುತ್ತದೆ. ಬುಧ ವಾರದ ಅಂತ್ಯಕ್ಕೆ ರಾಜ್ಯದಲ್ಲಿಯೂ 904 ಸೋಂಕಿ ತರುಇದೇ ಸ್ಥಿತಿಯಲ್ಲಿದ್ದಾರೆ.
1,505 ರಲ್ಲಿ1,385 ಸೋಂಕಿತರು ಗುಣಮುಖ:ಪ್ರಸ್ತಕ ವರ್ಷ ಏ.1ರಿಂದ 20 ರವರೆಗೂರಾಜ್ಯದಲ್ಲಿ ವೆಂಟಿಲೆಟರ್ ಮತ್ತು ಆಕ್ಸಿಜನ್ ಎರಡು ವಿಧದ ಐಸಿಯು ವಾಡ್ìನಲ್ಲಿ ಒಟ್ಟು 1505 ಸೋಂಕಿತರು ಚಿಕಿತ್ಸೆಪಡೆದಿದ್ದಾರೆ. ಈ ಪೈಕಿ 1385 ಮಂದಿಗುಣ ಮುಖರಾಗಿದ್ದು, 120 ಸೋಂಕಿತರು ಮೃತಪಟ್ಟಿದ್ದಾರೆ. ಗುಣಮುಖದರ ಶೇ.93ರಷ್ಟು ಮತ್ತು ಮರಣ ದರಶೇ.7ರಷ್ಟಿದೆ. ಮೊದಲ ಅಲೆಯಲ್ಲಿ ಈ ಪ್ರಮಾಣ ಶೇ.18ರಿಂದ 20ರಷ್ಟಿತ್ತು ಎಂದು ಆರೋಗ್ಯ ಇಲಾಖೆ ಅಂಕಿ ಅಂಶಗಳು ಹೇಳುತ್ತಿವೆ.
ಅರ್ಧಕ್ಕರ್ಧ ಇಳಿಕೆ: ಕಳೆದ ವರ್ಷ ರಾಜ್ಯದಲ್ಲಿ ಸೊಂಕು ಪ್ರಕರಣಗಳು ಅತ್ಯುನ್ನತಮಟ್ಟ (ಪೀಕ್) 10,800ಕ್ಕೆ ತಲುಪಿದಾಗಲೂ ವೆಂಟಿಲೇಟರ್‌ನಲ್ಲಿರುವ ಸೋಂಕಿತರ ಸಂಖ್ಯೆ 750 ರಿಂದ 800 ಇತ್ತು. ಆದರೆ. ಈ ಬಾರಿ ದಿನದ ಪ್ರಕರಣಗಳು 20 ಸಾವಿರ ಗಡಿದಾಟಿದ್ದು, 904 ಮಂದಿಮಾತ್ರ ವೆಂಟಿಲೇಟರ್‌ನಲ್ಲಿದ್ದಾರೆ.
ಈಬಾರಿ ಗಂಭೀರ ಸೋಂಕಿತರ ಪ್ರಮಾಣಕಡಿಮೆ ಇದೆ ಎನ್ನು ತ್ತಾರೆ ಟೆಲಿ ಐಸಿಯುವಿಭಾಗದ ಸಹಾಯಕ ಉಪ ನಿರ್ದೇಶಕಡಾ. ವಸಂತ್‌ಕುಮಾರ್.ಕಾರಣಗಳಿವು1. ಟೆಲಿ ಐಸಿಯು ಪರಿಣಾಮಕಾರಿ ಜಾರಿರಾಜ್ಯದ ಆಸ್ಪತ್ರೆಗಳ ಐಸಿಯುಗಳೊಂದಿಗೆ ಈ ಘಟಕಸಂಪರ್ಕಹೊಂದಿರುತ್ತದೆ.
ಘಟಕದಲ್ಲಿ ನಾಲ್ಕು ಪಾಳಿಯಲ್ಲಿಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳವಿವಿಧ ಆರೋಗ್ಯ ವಿಭಾಗದ ತಜ್ಞ ವೈದ್ಯರುಕಾರ್ಯನಿರ್ವಹಿಸುತ್ತಾರೆ. ಇಲ್ಲಿನ ವೈದ್ಯರುಗಳು ಕೊರೊನಾಚಿಕಿತ್ಸೆ, ವಿವಿಧ ಕೇಸ್ ಸ್ಟಡಿಗಳ ಮೂಲಕ ಅನುಭವಪಡೆದುಕೊಂಡಿದ್ದಾರೆ. ಖಾಸಗಿ ಆಸ್ಪತ್ರೆ ಪರಿಣತ ವೈದ್ಯರಿಂದಉನ್ನತ ಮಟ್ಟದ ತರಬೇತಿನೀಡಲಾಗಿದೆ. ಹೀಗಾಗಿ, ಐಸಿಯುಸೋಂಕಿತರ ನಿಗಾ, ಚಿಕಿತ್ಸೆ ಉತ್ತಮಗೊಂಡಿದೆ.2.ಕೊರೊನಾ ಲಸಿಕೆ ಪರಿಣಾಮಸೋಂಕಿತರ ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಲಸಿಕೆಸಹಕಾರಿಯಾಗಿದೆ.
ಐಸಿಯು ಹಂತಕ್ಕೆ ತಲುಪುವಬಹುತೇಕರು 50 ವರ್ಷ ಮೇಲ್ಪಟ್ಟವರೇ ಇರುತ್ತಾರೆ. ಈಬಾರಿ ಐಸಿಯುಗೆ ಬಂದವರ ಪೈಕಿ ಅನೇಕರು ಲಸಿಕೆಪಡೆದಿದ್ದಾರೆ. ಅವರ ಶ್ವಾಸಶೋಶದಲ್ಲಿ ಸೋಂಕಿನ ತೀವ್ರತೆಕಡಿಮೆ ಇತ್ತು. ಹೀಗಾಗಿ, ಚಿಕಿತ್ಸೆಯ ಅಂತಿಮ ಹಂತಕ್ಕೆತಲುಪಿಯೂ ಗುಣಮುಖರಾಗಿದ್ದಾರೆ.
ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.