ಹಾವೇರಿಯಲ್ಲಿ ಬಸ್ ಸಂಚಾರ ಪುನಾರಂಭ
15 ದಿನಗಳ ನಂತರ ಸಹಜ ಸ್ಥಿತಿಕೊರೊನಾ ಭೀತಿ; ಪ್ರಯಾಣಿಕರ ಕೊರತೆ
Team Udayavani, Apr 22, 2021, 8:40 PM IST
ಹಾವೇರಿ: ಸಾರಿಗೆ ನೌಕರರ ಮುಷ್ಕರದಿಂದ ಕಳೆದ 15 ದಿನಗಳ ಕಾಲ ಬಸ್ ಇಲ್ಲದೇ ಪ್ರಯಾಣಿಕರು ತೊಂದರೆ ಎದುರಿಸಿದ್ದರು. ಆದರೆ, ಬುಧವಾರ ಜಿಲ್ಲೆಯಲ್ಲಿ ಶೇ.80ರಷ್ಟು ಬಸ್‌ಗಳ ಕಾರ್ಯಾಚರಣೆ ನಡೆಸಿದ್ದರೂ, ಪ್ರಯಾಣಿಕರ ಕೊರತೆಯಿಂದ ನೀರಿಕ್ಷಿತ ಮಟ್ಟದಲ್ಲಿ ಬಸ್ ಸಂಚಾರ ಸಾಧ್ಯವಾಗಲಿಲ್ಲ.
6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 15 ದಿನ ಪೂರೈಸಿದ್ದು, ಇಷ್ಟು ದಿನಗಳ ತರುವಾಯ ಬಸ್ ಕಾರ್ಯಾಚರಣೆ ಸಹಜ ಸ್ಥಿತಿಗೆ ಬಂದಂತಾಗಿದೆ. ಜಿಲ್ಲೆಯ 6 ಡಿಪೋಗಳಿಂದ ಬುಧವಾರ 264 ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಆದರೆ, ಪ್ರಯಾಣಿಕರ ಕೊರತೆಯಿಂದ ಹಲವು ಬಸ್‌ಗಳು ಡಿಪೋದಿಂದ ನಿಲ್ದಾಣಕ್ಕೆ ಬಂದು ನಿಲ್ಲುವಂತಾಯಿತು. ಬಸ್ ಓಡಾಟ ಯಥಾ ಸ್ಥಿತಿಗೆ ಬರುವ ಸಂದರ್ಭದಲ್ಲಿಯೇ ಕೊರೊನಾ ಭಯದಿಂದ ಜನರ ಓಡಾಟ ಕಡಿಮೆಯಾಗಿದ್ದು, ಬಸ್ ಇದ್ದರೂ ಪ್ರಯಾಣಿಕರಿಲ್ಲದ ಪರಿಸ್ಥಿತಿ ಎದುರಿಸುವಂತಾಗಿದೆ.
ಶೇ.80 ಬಸ್ ಸಂಚಾರ: ಜಿಲ್ಲೆಯಲ್ಲಿ ಹಾವೇರಿಯಿಂದ 55, ಹಿರೇಕೆರೂರಿನಿಂದ 59, ಬ್ಯಾಡಗಿಯಿಂದ 33, ರಾಣಿಬೆನ್ನೂರಿನಿಂದ 66, ಹಾನಗಲ್ಲನಿಂದ 26 ಹಾಗೂ ಸವಣೂರು ಡಿಪೋದಿಂದ 25 ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಜಿಲ್ಲೆಯಿಂದ ಒಟ್ಟು 332 ಮಾರ್ಗಗಳಲ್ಲಿ ಬಸ್ ಓಡಿಸಬೇಕಿತ್ತು. ಆದರೆ, ಪ್ರಯಾಣಿಕರ ಕೊರತೆಯಿಂದ ಇನ್ನೂ 70 ಬಸ್‌ಗಳನ್ನು ಓಡಿಸಲು ಸಾಧ್ಯವಾಗಲಿಲ್ಲ. ಮುಷ್ಕರದ ನಡುವೆಯೂ ಕೆಲಸಕ್ಕೆ ಹಾಜರಾಗುವ ಸಿಬ್ಬಂದಿ ಸಂಖ್ಯೆ ಏರುತ್ತಿದೆ. ಹಾನಗಲ್ಲ ಮತ್ತು ಸವಣೂರು ಡಿಪೋದಲ್ಲಿ ಮಾತ್ರ ಕೆಲವು ಸಿಬ್ಬಂದಿ ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಉಳಿದೆಲ್ಲ ಕಡೆ ಶೆಡ್ನೂಲ್ ಪ್ರಕಾರ ಬಸ್ ಓಡಿಸುವಷ್ಟು ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ನೌಕರರ ಮೇಲೆ ಶಿಸ್ತು ಕ್ರಮ: ಕರ್ತವ್ಯಕ್ಕೆ ಹಾಜರಾಗದ ನೂರಾರು ಸಾರಿಗೆ ಸಿಬ್ಬಂದಿ ಮೇಲೆ ಸಂಸ್ಥೆ ಶಿಸ್ತು ಕ್ರಮ ಕೈಗೊಂಡಿದೆ. ಮಂಗಳವಾರ 28 ಸಿಬ್ಬಂದಿಯನ್ನು ವರ್ಗಾಯಿಸಲಾಗಿದೆ. ಈವರೆಗೆ ಹಾವೇರಿ ವಿಭಾಗದಿಂದ 101 ನೌಕರರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಬರೋಬ್ಬರಿ 100 ನೌಕರರನ್ನು ಕೆಲಸದಿಂದಲೇ ವಜಾಗೊಳಿಸಲಾಗಿದೆ. ಜತೆಗೆ 8 ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಪ್ರಯಾಣಿಕರ ಕೊರತೆ: ಕಳೆದ 15 ದಿನಗಳಿಂದ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿತ್ತು. ಆದರೆ, ಬುಧವಾರ ಬಸ್‌ಗಳ ಸಂಖ್ಯೆ ಸಾಕಷ್ಟಿದ್ದರೂ ಪ್ರಯಾಣಿಕರ ಕೊರತೆ ಕಂಡುಬಂತು. ಇದರಿಂದ ನಿಲ್ದಾಣದಲ್ಲಿ ಬಸ್‌ಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಕೋವಿಡ್ ಮಾರ್ಗಸೂಚಿ ಬೇರೆ ಪ್ರಕಟವಾಗಿದ್ದು, ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಕರೆದೊಯ್ಯಬೇಕಿದೆ. ಆದರೆ, ಅಷ್ಟು ಸಂಖ್ಯೆಯ ಪ್ರಯಾಣಿಕರೂ ಬಸ್ ಏರಲಿಲ್ಲ.
ಅಲ್ಲದೇ, ಕೊರೊನಾ ಸೋಂಕು ಹೆಚ್ಚಿರುವ ಮುಂಬೈ, ಪುಣೆ, ಶಿರಡಿ, ಇಚಲಕರಂಜಿ ಸೇರಿದಂತೆ ಮಹಾರಾಷ್ಟ್ರಕ್ಕೆ ಯಾವ ಬಸ್‌ಗಳನ್ನೂ ಬಿಡಲಿಲ್ಲ. ಕೊರೊನಾ ಎರಡನೇ ಅಲೆ ತೀವ್ರಗೊಳ್ಳುವ ಆತಂಕದಲ್ಲಿ ಸಾರ್ವಜನಿಕರು ಬಸ್‌ನಲ್ಲಿ ಓಡಾಡುವುದನ್ನು ಕಡಿಮೆ ಮಾಡಿರುವ ಸಾಧ್ಯತೆಯೂ ಇದೆ. ಅಲ್ಲದೇ, ನಿಲ್ದಾಣದಲ್ಲಿ ಬಸ್ ಇರುವುದಿಲ್ಲ ಎಂಬ ಕಾರಣಕ್ಕೆ ಅನೇಕರು ಖಾಸಗಿ ವಾಹನದಲ್ಲೇ ಸಂಚರಿಸಿದ್ದರಿಂದ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Pushpa 2: ಕಿಸಿಕ್ ಎಂದು ಕುಣಿದ ಶ್ರೀಲೀಲಾ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.