ಕೊರೊನಾಜನಕ ಕಥೆಗಳು
Team Udayavani, Apr 23, 2021, 6:50 AM IST
ಗುಡ್‌ಮಾರ್ನಿಂಗ್ ಹೇಳಿ, ಕಣ್ಮುಚ್ಚಿದ ವೈದ್ಯೆ!
“ಬಹುಶಃ ಇದೇ ನನ್ನ ಲಾಸ್ಟ್ ಗುಡ್ ಮಾರ್ನಿಂಗ್. ಈ ವೇದಿಕೆಯಲ್ಲಿ ಮತ್ತೆ ನಾನು ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ತೀರಾ ಕಡಿಮೆ. ನನ್ನ ದೇಹ ಸಾಯುತ್ತಿದೆ; ಆದರೆ, ಆತ್ಮವಲ್ಲ. ಆತ್ಮ ಅಮರ. ಎಲ್ಲರೂ ಸುರಕ್ಷಿತರಾಗಿರಿ’!- ಮುಂಬಯಿಯ ಸೆವ್ರಿ ಟಿಬಿ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ| ಮನಿಷಾ ಜಾಧವ್ ಹೀಗೊಂದು ಕಣ್ತೇವಗೊಳಿಸುವ ಸಾಲುಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಕೊರೊನಾ ಸೋಂಕಿತೆಯಾಗಿದ್ದ ಈಕೆ, ಈ ಪೋಸ್ಟ್ ಹಾಕಿ ಕೇವಲ 36 ಗಂಟೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಮಹಾರಾಷ್ಟ್ರದಲ್ಲಿ ಇದುವರೆಗೆ ಸುಮಾರು 18 ಸಾವಿರ ವೈದ್ಯರಿಗೆ ಕೊರೊನಾ ತಗಲಿದ್ದು, ಈ ಪೈಕಿ 168 ಮಂದಿ ಸಾವನ್ನಪ್ಪಿದ್ದಾರೆ.
ಕಾಲಿಗೆ ಬೀಳ್ತೀನಿ, ಪತ್ನಿಗೆ ಬೆಡ್ ಕೊಡಿ… :
“ಕೈ ಮುಗಿದು ಕೇಳಿಕೊಳ್ತೀನಿ. ದಯವಿಟ್ಟು ನನ್ನ ಪತ್ನಿಯನ್ನು ಅಡ್ಮಿಟ್ ಮಾಡ್ಕೊàಳಿ. ಇಲ್ಲಾಂದ್ರೆ ಅವಳು ಸಾಯ್ತಾಳೆ…’! ಕೋವಿಡ್ ಜ್ವರ, ತೀವ್ರ ಉಸಿ ರಾಟದ ಸಮಸ್ಯೆಯಿಂದ ನಲುಗಿದ ಪತ್ನಿ, 30 ವರ್ಷದ ರೂಬಿ ಖಾನ್‌ಳ ಜೀವ ಉಳಿಸಲು ಪತಿ ಗೋಗರೆದ ಪರಿ ಇದು. ದಿಲ್ಲಿಯಲ್ಲಿ 3 ಆಸ್ಪತ್ರೆ ಅಲೆದರೂ ಎಲ್ಲೂ ಬೆಡ್ ಸಿಗದ ಕಾರಣ, ದೊಡ್ಡ ಆಸ್ಪತ್ರೆ ಎಲ್‌ಎನ್‌ಜೆಪಿಗೆ ಬೈಕ್‌ನಲ್ಲೇ ಆಕೆಯನ್ನು ಕರೆತಂದಿದ್ದರು. “ನಿಮ್ಮ ಕಾಲು ಹಿಡಿಯಲೂ ನಾನು ಸಿದ್ಧ’ ಅಂತ ಆತ ಎಷ್ಟೇ ಅಳುತ್ತಾ ಹೇಳಿದರೂ, ಆಸ್ಪತ್ರೆಯ ಸಿಬಂದಿ ಉತ್ತರ ಒಂದೇ, “ಇಲ್ಲಾ… ಬೆಡ್ ಇಲ್ಲ. ಬೇರೆಲ್ಲಾದ್ರೂ ಹೋಗಿ’! ಪತಿಯ ಅಂಗಲಾಚುವಿಕೆ ಆಸ್ಪತ್ರೆಯಲ್ಲಿ ಮುಂದುವರಿದೇ ಇತ್ತು.
3 ಗಂಟೆ ಮಾತ್ರ ಆಕ್ಸಿಜನ್: ಶಾಸಕನ ಅಳಲು :
ಕೋವಿಡ್ ಸೋಂಕು ದೃಢಪಟ್ಟು ಹೊಸದಿಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಪ್ ಶಾಸಕ ಸೌರಭ್ ಭಾರದ್ವಾಜ್ ತಮಗೆ ಮೆಡಿಕಲ್ ಆಕ್ಸಿಜನ್ ಕೊರತೆಯಾಗಿದೆ. ನಾನು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಕೇವಲ 3 ಗಂಟೆ ಮಾತ್ರ ಲಭ್ಯವಾಗಲಿದೆ. ಹೀಗಾಗಿ, ಕೇಂದ್ರ ಮತ್ತು ಹರಿಯಾಣ ದೊಡ್ಡ ಮನಸ್ಸು ಮಾಡಿ ಆಸ್ಪತ್ರೆಗಳಿಗೆ ವ್ಯವಸ್ಥೆ ಮಾಡಿ ಕೊಡಬೇಕು ಎಂದು ಚಿಕಿತ್ಸೆ ಪಡೆಯುತ್ತಿರುವ ವಾರ್ಡ್‌ನಿಂದಲೇ ವೀಡಿಯೋ ಮಾಡಿದ್ದಾರೆ. ಉಸಿರಾಡಲು ತೊಂದರೆ ಉಂಟಾಗು ತ್ತಿರುವಂತೆಯೇ ಅವರು ಮನವಿ ಮಾಡಿ, ಸದ್ಯದ ಪರಿಸ್ಥಿತಿಯನ್ನು ಹರಿಯಾಣ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ನಿಭಾಯಿಸಬೇಕು. ಈಜು ಬಾರದ ವ್ಯಕ್ತಿ ಯನ್ನು ಕೊಳಕ್ಕೆ ತಳ್ಳಿದರೆ ಆತ ಹೇಗೆ ತೊಂದರೆಗೆ ಒಳಗಾಗುತ್ತಾನೋ, ಅದೇ ರೀತಿ ಮಾಸ್ಕ್ ತೆಗೆದರೆ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.