ರಾಜಸ್ತಾನಕ್ಕೆ ಲಸಿಕೆ ಅಮೆರಿಕಾದಿಂದ ತೆಗೆದುಕೊಂಡು ಬಂದರಾ?
Team Udayavani, Apr 23, 2021, 3:22 PM IST
ಮೈಸೂರು: ಕೇಂದ್ರ ಸರ್ಕಾರ ಲಸಿಕೆ ವಿಚಾರದಲ್ಲಿತಾರತಮ್ಯ ಮಾಡುತ್ತಿಲ್ಲ. ಪ್ರತಿಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ ಆರೋಗ್ಯ ಸಚಿವಡಾ.ಕೆ.ಸುಧಾಕರ್ ಹೇಳಿದರು.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ರಾಜಸ್ತಾನಕ್ಕೆ ಲಸಿಕೆಅಮೆರಿಕಾದಿಂದ ತೆಗೆದುಕೊಂಡು ಬಂದರಾ?ಎಲುಬಿಲ್ಲದ ನಾಲಿಗೆ ಅಂತಾ ಏನೇನೋ ಮಾತನಾಡಬಾರದು. ಆಡಳಿತ ಪಕ್ಷದವರಾಗಲಿ,ವಿರೋಧ ಪಕ್ಷದವರಾಗಲಿ ಕೊರೊನಾ ಬಗ್ಗೆಆರೋಪ ಮಾಡಿದರೆ ಸಣ್ಣವರಾಗುತ್ತಾರೆ ಎಂದುತಿಳಿಸಿದರು.
ಸ್ಟೆರಾಯಿಡ್ ಪರಿಣಾಮಕಾರಿ: ಕೊರೊನಾಸೋಂಕಿತರ ಚಿಕಿತ್ಸೆಗೆ ರೆಮಿಡಿಸಿವರ್‌ಗಿಂತ ಸ್ಟೆರಾಯಿಡ್ ಪರಿಣಾಮಕಾರಿ ಎಂದು ಕೊರೊನಾಸಂಜೀವಿನಿ ಎಂದು ಬಿಂಬಿತವಾಗಿರುವ ರೆಮಿಡಿಸಿವರ್ ವೈಜ್ಞಾನಿಕವಾಗಿ ಲೈಫ್ ಸೇವಿಂಗ್ ಡ್ರಗ್(ಜೀವ ಉಳಿಸುವ ಔಷಧ) ಅಲ್ಲ.
ಜನಸಾಮಾನ್ಯರಲ್ಲಿ ಈ ರೀತಿಯ ಅಭಿಪ್ರಾಯ ಮೂಡಿದೆ ಅಷ್ಟೇ.ವಿಶ್ವ ಆರೋಗ್ಯ ಸಂಸ್ಥೆಯ ಪಟ್ಟಿಯಲ್ಲೂ ರೆಮಿಡಿಸಿವರ್ ಇಲ್ಲ. ನಾನು ವೈದ್ಯನಾಗಿ ಹೇಳಬೇಕೆಂದರೆ, ಅದರ ಬದಲು ಸ್ಟೆರಾಯಿಡ್ ಪರಿಣಾಮಕಾರಿಯಾಗಿದೆ. ಅದಕ್ಕಿಂತ ಕಡಿಮೆ ದರದಪರ್ಯಾಯ ಔಷಧಿಗಳಿವೆ ಎಂದು ತಿಳಿಸಿದರು.
ರೆಮಿಡಿಸಿವರ್ ಉತ್ಪಾದನೆ ಹೆಚ್ಚಳ: ಕೊರೊನಾಕಡಿಮೆಯಾದ ಹಿನ್ನೆಲೆ ರೆಮಿಡಿಸಿವರ್ ಉತ್ಪಾದನೆನಿಲ್ಲಿಸಲಾಗಿತ್ತು. ಈಗ ಮತ್ತೆ ಕೊರೊನಾಜಾಸ್ತಿಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಸ್ವಲ್ಪದಿನದಲ್ಲಿ ಪೂರೈಕೆ ಸರಿಯಾಗುತ್ತದೆ. ದೇಶದಲ್ಲಿ 8ರಿಂದ 9 ಕಂಪನಿಗಳು ಮಾತ್ರ ರೆಮಿಡಿಸಿವರ್‌ಉತ್ಪಾದಿಸುತ್ತಿವೆ ಎಂದು ಹೇಳಿದರು.
ಆಕ್ಸಿಜನ್ಗಾಗಿ ಕೇಂದ್ರಕ್ಕೆ ಪತ್ರ: ಉಸಿರಾಟದಸಮಸ್ಯೆ ಹೊಂದಿರುವ ಕೊರೊನಾ ಸೋಂಕಿತರಿಗೆಅಗತ್ಯವಿರುವ ಆಕ್ಸಿಜನ್ ಪೂರೈಸಲು ಮುಂದಿನಒಂದು ತಿಂಗಳ ಸೋಂಕಿತರ ಅಂದಾಜು ಇಟ್ಟುಕೊಂಡು 1500 ಮೆಟ್ರಿಕ್ ಟನ್ ಪೂರೈಸುವಂತೆಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಸದ್ಯಕ್ಕೆಆಕ್ಸಿಜನ್ ಕೊರತೆ ಇಲ್ಲವೆಂದು ಸುಧಾಕರ್‌ತಿಳಿಸಿದರು.ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವಕುರಿತು ಸಚಿವರಾದ ಜಗದೀಶ್ ಶೆಟ್ಟರ್,ಬಸವರಾಜ್ ಬೊಮ್ಮಾಯಿ,ಬೆಂಗಳೂರು ದಕ್ಷಿಣಕ್ಷೇತ್ರದ ಸಂಸದ ತೇಜಸc ಸೂರ್ಯ ಅವರೊಂದಿಗೆಆಕ್ಸಿಜನ್ ಉತ್ಪಾದಿಸುವ ಕಂಪನಿಗಳ ಮಾಲೀಕರು,ಸರಬರಾಜುದಾರರ ಸಭೆ ನಡೆಸಿದ್ದೇವೆ. ರಾಜ್ಯಕ್ಕೆಬೇಕಾಗುವಷ್ಟು ಜಂಬೋ ಸಿಲಿಂಡರ್, ಆಕ್ಸಿಜನ್‌ಸಿಲಿಂಡರ್ ಒದಗಿಸುವ ಭರವಸೆ ನೀಡಿದ್ದಾರೆಎಂದು ಹೇಳಿದರು.
ಎಲ್ಲಾ ವಯೋಮಾನದವರಿಗೆ ಲಸಿಕೆ: ರಾಜ್ಯದಎಲ್ಲಾ ವಯೋಮಾನದವರಿಗೂ ಲಸಿಕೆ ಹಾಕಲುಸರ್ಕಾರ ಸಿದ್ಧವಿದೆ. ಮೇ 1ರಿಂದ ಶುರುಮಾಡುತ್ತೇವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿನಡೆಯಲಿರುವ ಸಭೆಯಲ್ಲಿ ಲಸಿಕೆ ಖರೀದಿ, ಲಸಿಕೆಹಾಕುವ ಬಗ್ಗೆ ತೀರ್ಮಾನ ಮಾಡುತ್ತೇವೆ.ಉಚಿತವಾಗಿ ಕೊಡಬೇಕೋ ಅಥವಾ ದರನಿಗದಿಪಡಿಸಬೇಕೇ ಎನ್ನುವ ಚರ್ಚೆ ಆಗಿಲ್ಲ. ಸಿಎಂನೇತೃತ್ವದಲ್ಲಿ ನಡೆಯುವ ಸಭೆಯ ಬಳಿಕ ಅಂತಿಮನಿರ್ಧಾರವಾಗಲಿದೆ ಎಂದು ಸ್ಪಷ್ಟ ಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿರೋಹಿಣಿ ಸಿಂಧೂರಿ, ಜಿಪಂ ಸಿಇಒ ಎ.ಎಂ.ಯೋಗೀಶ್, ನಗರಪಾಲಿಕೆ ಆಯುಕ್ತರಾದ ಶಿಲ್ಪಾನಾಗ್, ಮೈಸೂರು ವೈದ್ಯಕೀಯ ಕಾಲೇಜು ಮತ್ತುಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಪಿ.ನಂಜರಾಜು, ಜಿÇÉಾ ಸರ್ಜನ್ ಡಾ.ಟಿ.ಶಿವಪ್ರಸಾದ್, ನೋಡಲ್ ಅಧಿಕಾರಿ ಡಾ.ಪಿ.ರವಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವಿಭಾಗೀಯ ಜಂಟಿನಿರ್ದೇಶಕ ವಿಜಯಕುಮಾರ್,ಉಪ ನಿರ್ದೇಶಕ ಡಾ.ರಾಮಚಂದ್ರ ಇನ್ನಿತರರುಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysore: ಹಾಡಹಗಲೇ ಕಾರು ಅಡ್ಡಗಟ್ಟಿ ರಾಬರಿ; ಹಣದೊಂದಿಗೆ ಕಾರು ಕೂಡಾ ದೋಚಿದರು!
Hunasur: ಪ್ರೇಯಸಿಗೆ ಚಿನ್ನ ಖರೀದಿಸಲು ಎಟಿಎಂ ಗೆ ತುಂಬಬೇಕಿದ್ದ ಹಣ ಎಗರಿಸಿದ ಯುವಕ
Mysuru ಮುಟ್ಟುಗೋಲು: 142 ನಿವೇಶನ ಮಾಹಿತಿ ಬಹಿರಂಗಕ್ಕೆ ಸ್ನೇಹಮಯಿ ಕೃಷ್ಣ ಒತ್ತಾಯ
ತ್ರಿವೇಣಿ ಸಂಗಮ ಕುಂಭಮೇಳಕ್ಕೆ 10 ಕೋಟಿ ರೂ. ಪ್ರಸ್ತಾವನೆ: ಸಚಿವ ಮಹದೇವಪ್ಪ
Mysuru: ಸಿದ್ದರಾಮಯ್ಯ ಹೆಸರು ದುರ್ಬಳಕೆಗೆ ಇ.ಡಿ. ಮೂಲಕ ಯತ್ನ; ಯತೀಂದ್ರ