ದಿಗಿಲುಗೊಳಿಸುವ ದ್ವಂದ್ವಗಳು…

Team Udayavani, Apr 24, 2021, 1:20 AM IST

ದಿಗಿಲುಗೊಳಿಸುವ ದ್ವಂದ್ವಗಳು…

ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಜಡ, ಚೇತನ ಎನ್ನುವ ಎರಡು ರೀತಿಯ ವಸ್ತುಗಳನ್ನು ಕಾಣುತ್ತೇವೆ. ವಿಮರ್ಶಿಸಿ ನೋಡಿದರೆ ಸಮಸ್ತ ಪ್ರಕೃತಿ ದ್ವಂದ್ವಗಳಿಂದ ಕೂಡಿದೆ. ನಮ್ಮ ಪ್ರಪಂಚ ಪರಸ್ಪರ ವಿರುದ್ಧ ವಾದ ಎರಡು ಭಾವಗಳು ಅಥವಾ ಎರಡು ವಸ್ತುಗಳ ಸಮ್ಮಿಶ್ರಣವಾಗಿದೆ.

ಪ್ರಕೃತಿಯಲ್ಲಿ ಕತ್ತಲು-ಬೆಳಕಿದೆ. ಕಾಲದ ಪ್ರಕಾರ ನೋಡಿದರೆ ಬೇಸಗೆ- ಮಳೆ- ಚಳಿಗಾಲವಿದೆ. ಆಧ್ಯಾತ್ಮಿಕ ರೀತಿಯಿಂದ ಪರಿಶೀಲಿಸಿದರೆ ಶಾಶ್ವತವಾದ ಆತ್ಮ, ನಶ್ವರ ವಾದ ಶರೀರ, ಧರ್ಮ- ಅಧರ್ಮ ವಿದೆ. ಹೋರಾಟದಲ್ಲಿ ಜಯ- ಅಪ ಜಯವಿದೆ.

ಪರೀಕ್ಷೆಗಳಲ್ಲಿ ಉತ್ತೀರ್ಣ- ಅನುತ್ತೀರ್ಣವಿದೆ. ಒಟ್ಟಾರೆಯಾಗಿ ಪ್ರಕೃತಿಯಲ್ಲಿ ದ್ವಂದ್ವಗಳ ಮಿಳಿತ ಸಹ ಜವಾಗಿದೆ. ಧರ್ಮ ಎಂಬುದರ ಅರ್ಥ ವ್ಯಾಪ್ತಿ ವಿಸ್ತಾರವಾದುದ್ದು. ಆಚರ ಣೆಗೆ ಯೋಗ್ಯವಾದದ್ದು ಧರ್ಮ, ಮೌಲ್ಯಯು ತವಾದ ಬದುಕಿಗೆ ಬುನಾದಿ ಧರ್ಮ, ಪರರ ಪರಮಾಣು ಗುಣವನ್ನು ಪರ್ವತ ವೆಂದು ಪರಿಗ್ರಹಿಸುವ ಮನೋ ಭಾವವೇ ಧರ್ಮ. ವ್ಯಕ್ತಿ, ವ್ಯಕ್ತಿತ್ವ, ಬೌದ್ಧಿಕ ವಿಕಾಸಕ್ಕೆ ಮೂರ್ತ ರೂಪವನ್ನು ಧರ್ಮ ನೀಡುತ್ತದೆ. ಕಗ್ಗತ್ತಲಲ್ಲಿ ನಡೆಯುವ ವನಿಗೆ ದಾರಿದೀಪ ಧರ್ಮ. ಧರ್ಮ ಸಮಾಜದಲ್ಲಿ ಶಾಂತಿ ಸಮೃದ್ಧತೆ ನೆಲೆಸಲು ಸಹಕರಿಸಿದರೆ, ಅಧರ್ಮ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿ, ಮಾನವೀಯ ಮೌಲ್ಯಗಳ ಅಧಃಪತನಕ್ಕೆ ನಾಂದಿ ಹಾಡುತ್ತದೆ. ಇದರಿಂದ ಮನಸ್ಸು ಒಮ್ಮೊಮ್ಮೆ ವಿಚಲಿತಗೊಳ್ಳುತ್ತದೆ. ಯಾವುದು ಧರ್ಮ, ಯಾವುದು ಅಧರ್ಮವೆಂದು ತಿಳಿದುಕೊಳ್ಳುವಲ್ಲಿ ನಾವು ಎಡವುತ್ತೇವೆ.

ಪ್ರಕೃತಿಯ ಭಾಗವಾದ ಮಾನವನ ಜೀವನದಲ್ಲಿ ವಿರುದ್ಧವಾದ ಭಾವಗಳು ಕಂಡುಬರುತ್ತವೆ. ಮಾನವರಲ್ಲಿ ಸಜ್ಜನರು – ದುರ್ಜನರು, ಬಲ ಶಾಲಿಗಳು – ಬಲಹೀನರು, ಬುದ್ದಿ ವಂತರು- ಮೂರ್ಖರು ಇ¨ªಾರೆ. ಸುಖ – ದುಃಖಗ ಳಂತಹ ಅನೇಕ ದ್ವಂದ್ವಗಳನ್ನು ಗಮನಿಸಿದ ಮಾನವ ಅದನ್ನು ಅನುಭವಿಸಿದನೇ ವಿನಾ ಅದುಮಿಡಲಿಲ್ಲ. ಬದುಕಲ್ಲಿ ಅನಿವಾರ್ಯವಾದ ಈ ದ್ವಂದ್ವಗಳು ಆತನನ್ನು ಉತ್ತೇಜಿಸುತ್ತಾ ಜೀವನದಲ್ಲಿ ಮುಂದೆ ಸಾಗಲು ಪ್ರೇರಕವಾಗಿವೆ. ತಾನು ಅನುಭವಿಸುತ್ತಿರುವ ಕಷ್ಟಗಳಿಂದ ಹೊರಬಂದಾಗ ಮಾತ್ರ ಮನುಷ್ಯ ಸುಖವನ್ನು ಹೊಂದಬಲ್ಲ. ಆ ಸುಖ ಆತನಿಗೆ ಬಹಳಷ್ಟು ಆನಂದ ನೀಡುತ್ತದೆ. ಕಷ್ಟಗಳು ಎದುರಾದರೂ ಸಹನೆಯಿಂದ ಸೈರಿಸಿಕೊಂಡು ಸುಖಕ್ಕಾಗಿ ಮನುಷ್ಯ ಎದುರು ನೋಡಬೇಕು. ಕಹಿ ರುಚಿ ನೋಡಿದ ಬಳಿಕ ಸಿಹಿಯನ್ನು ಅನುಭವಿಸಬಲ್ಲ. ರಾತ್ರಿ ಕಳೆದ ಅನಂತರ ಹಗಲನ್ನು ನೋಡಬಹುದಾಗಿದೆ. ಕತ್ತಲಾಯಿತೆಂದು ಭಯಪಟ್ಟು ಒಳಗೆ ಕುಳಿತರೆ ಬೆಳದಿಂಗಳ ರಾತ್ರಿಯ ಚಂದ್ರಮ, ಚುಕ್ಕೆ ತಾರೆಗಳ ಚಿತ್ತಾಕರ್ಷಕ ಆಟವನ್ನು ನೋಡುವ ಭಾಗ್ಯ ಕಳೆದುಕೊಳ್ಳುತ್ತೇವೆ.
ಪರಸ್ಪರ ವಿರುದ್ಧವಾದ ಭಾವಗಳು ನಿತ್ಯ ಬದುಕಲ್ಲಿ ಬಂದಾಗ ಕಂಗಾಲಾಗಬಾರದು. ಹೃದಯ ಗಟ್ಟಿ ಮಾಡಿಕೊಂಡು ಕಷ್ಟಗ ಳನ್ನು ಎದುರಿಸಬೇಕು. ಭವಿಷ್ಯವು ಉಜ್ವ ಲವಾಗಿರುತ್ತದೆ ಎಂಬ ದೃಢವಾದ ನಂಬಿಕೆಯಿಂದ ಎದುರು ನೋಡಬೇಕು. ಸುಖ ಬಂದಾಗ ತನ್ನಂತಹ ವಿಶಿಷ್ಟ ವ್ಯಕ್ತಿ ಇಲ್ಲವೆಂದು ಹೆಮ್ಮೆಪಡದೆ ಸುಖ-ದುಃಖಗಳೆರಡನ್ನು ಸಮಭಾವದಿಂದ ಸ್ವೀಕರಿ ಸುವುದು ಉತ್ತಮ. ದ್ವಂದ್ವ ಭಾವಗಳಿಗೆ ಅತೀತನಾದಾಗ ಮಾತ್ರ ಮನುಷ್ಯ ಸ್ಥಿತಪ್ರಜ್ಞನೆನಿಸಿಕೊಳ್ಳುತ್ತಾನೆ.

ಕಷ್ಟ-ಸುಖಗಳ ಕಥೆಗಳು ಪುರಾಣ ಗಳಲ್ಲಿ, ಇತಿಹಾಸದಲ್ಲಿ ಬಹಳಷ್ಟಿವೆ. ಭಾರತದ ಸ್ವಾತಂತ್ರ್ಯ ಸಮರದಲ್ಲಿ ನಮ್ಮ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರು ಅಹಿಂಸಾ ತಣ್ತೀದ ಮೂಲಕ ಆಂಗ್ಲರ ವಿರುದ್ಧ ಹೋರಾಡಿದರು. ಅವರು ಅನೇಕ ಕಷ್ಟಗಳನ್ನು ಎದುರಿಸಿದ ಅನಂತರವಷ್ಟೆ ನಾವು ಸ್ವತಂತ್ರ ಪಡೆದಿದ್ದು. ದ್ವಂದ್ವ ಭಾವಗಳು ಪ್ರಕೃತಿ ಯಲ್ಲಿ, ಸಮಾಜದಲ್ಲಿ, ಮನುಷ್ಯನ ಮನದಲ್ಲಿ ಮುಡುವುದು ಸಹಜ. ಹಿರಿಯರ ಮಾರ್ಗದರ್ಶನ, ಜ್ಞಾನ ಸಂಪಾದನೆ, ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳುವುದರಿಂದ ದ್ವಂದ್ವಗ ಳಿಂದ ದಿಗಿಲುಗೊಳ್ಳುವುದನ್ನು ಕಡಿಮೆ ಮಾಡಬಹುದು. ಕಷ್ಟ – ಸುಖಗಳು ಬದುಕೆಂಬ ನಾಣ್ಯದ ಎರಡು ಮುಖ ಗಳಿದ್ದಂತೆ. ಬಾಳೆಂಬ ಆಗಸದಲ್ಲಿ ಸಂಕಷ್ಟವೆಂಬ ಕತ್ತಲು ಕಳೆದು, ಸುಖ, ನೆಮ್ಮದಿ, ಶಾಂತಿಯೆಂಬ ಸೂರ್ಯೋದಯವಾಗುತ್ತದೆ ಎಂಬ ಅಚಲ ನಂಬಿಕೆ ಇಡೋಣ. ಇದನ್ನರಿತು ನಡೆದರೆ ಜೀವನದ ಯಾನವು ಆನಂದ ಸಾಗರದಲ್ಲಿ ಪಯಣಿಸಿದ ಅನುಭವವು ಅನುದಿನವು ದೊರಕುವುದು.

- ರಾಘವೇಂದ್ರ ದುರ್ಗ ಬಿಲ್ಲವ, ಶಿರೂರು

ಟಾಪ್ ನ್ಯೂಸ್

ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

R.Ashok

Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್‌ ರಾಜೀನಾಮೆಗೆ ಬಿಜೆಪಿ ಪಟ್ಟು

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

R.Ashok

Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್‌ ರಾಜೀನಾಮೆಗೆ ಬಿಜೆಪಿ ಪಟ್ಟು

VIjayendra

Congress Government: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮುಹೂರ್ತ ನಿಗದಿ: ವಿಜಯೇಂದ್ರ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Dina Bhavishya

Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ

ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

R.Ashok

Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್‌ ರಾಜೀನಾಮೆಗೆ ಬಿಜೆಪಿ ಪಟ್ಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.