ಕೋವಿಡ್ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿ
Team Udayavani, Apr 24, 2021, 2:32 PM IST
ದೊಡ್ಡಬಳ್ಳಾಪುರ: ತಾಲೂಕಿನ ವಸತಿ ನಿಲಯಗಳಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಖಾಸಗಿ ಆಸ್ಪತ್ರೆ ಗಳನ್ನು ಗುರುತಿಸಿ ಅಗತ್ಯ ಚಿಕಿತ್ಸೆ ದೊರಕಿಸಿಕೊಡಲುಆರೋಗ್ಯ ಇಲಾಖೆ ಗಮನ ಹರಿಸಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರೊಂದಿಗೆ ತಾಲೂಕಿನ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಹಾಗೂ ತೀವ್ರವಾಗಿರುವ ಕೊರೊನಾ ಸೋಂಕುತಡೆಗಟ್ಟುವ ಕುರಿತಂತೆ ಆರೋಗ್ಯ ಇಲಾಖೆ ಹಾಗೂತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳ ಬಳಸಿಕೊಳ್ಳಿ: ಪಿಡಿಒಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಸಂಪರ್ಕದಲ್ಲಿರಬೇಕು. ತಾಲೂಕಿನ ಕೋವಿಡ್ ಸೆಂಟರ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕಿದೆ. ಸೋಂಕಿತರಿಗೆಸಲಹೆ ಸೂಚನೆ, ಮೇಲ್ವಿಚಾರಣೆ ನಡೆಸಲು ವಿವಿಧಇಲಾಖೆಯ ಅಧಿಕಾರಿಗಳ ಬಳಸಿಕೊಳ್ಳಬಹುದಾಗಿದೆ.ಡಿ.ಗ್ರೂಪ್ ನೌಕರರನ್ನು ಅವಶ್ಯಕತೆಯನ್ವಯ ನೇಮಿಸಿಕೊಳ್ಳಿ ಎಂದು ವಿವರಿಸಿದರು.
ಹೆಚ್ಚಿನ ಹಾಸಿಗೆ ನೀಡಿ: ಜಿಲ್ಲೆಯ ಇತರೆ ತಾಲೂಕು ಗಳಿರುವಂತೆ ವೈದ್ಯಕೀಯ ಕಾಲೇಜು ಇಲ್ಲದೆ ತೀವ್ರ ಸಮಸ್ಯೆಯಾಗಿದೆ. ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿಕೆಯ ಪ್ರಸ್ತಾವನೆ ಇನ್ನೂ ಕಾರ್ಯಗತವಾಗಿಲ್ಲ. ಅಲ್ಲದೇ ಸೌಲಭ್ಯಗಳ ಕೊರತೆಯಿದೆ. ಕೂಡಲೇ ಖಾಸಗಿ ಆಸ್ಪತ್ರೆಗಳಲ್ಲಿಹೆಚ್ಚಿನ ಹಾಸಿಗೆ ನೀಡಲು ವ್ಯವಸ್ಥೆ ಮಾಡಲು ಸೂಚಿಸಿದರು.
ಜನರಲ್ಲಿ ಅರಿವು ಮೂಡಿಸಿ: ಕೋವಿಡ್ ಪರೀಕ್ಷೆ ತೀವ್ರವಾಗಿಸಬೇಕಿದೆ. ಹೆಚ್ಚುವರಿ ಸಿಬ್ಬಂದಿ ನೇಮಿಸಿ,ಗ್ರಾಮೀಣ ಮಟ್ಟದಲ್ಲಿಯೇ ತಪಾಸಣೆ ನಡೆಸಬೇಕಿದೆ.ಶಿಕ್ಷಕರು ಗ್ರಾಮಗಳಲ್ಲಿ ಕೊರೊನಾ ಮುಂಜಾಗ್ರತೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ ಎಂದು ಹೇಳಿದರು.
ಕೇವಲ 2ರಲ್ಲಿ ಬೆಡ್ ಮೀಸಲು: ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಮಾತನಾಡಿ, ತಾಲೂಕಿ ನಲ್ಲಿ ಕೇವಲ ಎರಡು ಖಾಸಗಿ ಆಸ್ಪತ್ರೆಗಳು ಮಾತ್ರ ಸರ್ಕಾರದ ಆದೇಶದಂತೆ ಸೋಂಕಿತರಿಗೆ ಹಾಸಿಗೆಮೀಸಲಿರಿಸಿವೆ. ಉಳಿದ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಸಿಬ್ಬಂದಿ ನೇಮಿಸಿ: ಕೋವಿಡ್-19 ನಿರ್ವಹಣೆಗೆ ಗ್ರೂಪ್ ಡಿ ಚಾಲಕರ ಕೊರತೆ ತೀವ್ರವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು. ಶ್ರದ್ಧಾಂಜಲಿ ಆ್ಯಂಬುಲೆನ್ಸ್, ಅಂತ್ಯ ಸಂಸ್ಕಾರ ನಡೆಸಲು ಸಿಬ್ಬಂದಿನೇಮಕ, ನಗರದ ಹೊರವಲಯದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಒಂದು ಅಥವಾ ಎರಡು ಎಕರೆ ಜಾಗ ನಿಗದಿ ಪಡಿಸುವಂತೆ ಮನವಿ ಮಾಡಿದರು.
ಕೋವಿಡ್ ಕೇರ್ ಸೆಂಟರ್: ಉಪವಿಭಾಗಾಧಿಕಾರಿ ಅರುಳ್‌ಕುಮಾರ್ ಮಾತನಾಡಿ, ಗ್ರಾ.ಪಂ ವ್ಯಾಪ್ತಿಯಗ್ರಾಮವಾರು ಲಸಿಕೆ ಪಡೆಯದವರ ಮಾಹಿತಿ ಪಡೆದು, ನಿಗದಿತ ಬಸ್‌ಗಳನ್ನು ಬಳಸಿಕೊಂಡು ಲಸಿಕೆ
ಹಾಕಿಸಲು ಪಿಡಿಒಗಳಿಗೆ ಸೂಚನೆ ನೀಡಿದರು. ಅನಿಬೆ ಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗುತ್ತಿದೆ ಎಂದು ಹೇಳಿದರು.
104 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. 22 ಕೊಳವೆ ಬಾವಿಗಳನ್ನು ಕೊರೆಸಿದ್ದು, ಇದರಲ್ಲಿ 2 ವಿಫಲವಾಗಿವೆ ಎಂದು ಕುಡಿಯುವ ನೀರು ನೈರ್ಮಲ್ಯ ಇಲಾಖೆ ಯೋಗೇಶ್ ಸಭೆಗೆ ಮಾಹಿತಿ ನೀಡಿದರು.
ಸರ್ಕಾರ ಅಗತ್ಯ ಅನುದಾನ ನೀಡದೇ ಕೊಳವೆ ಬಾವಿ ಕೊರೆಸುವುದು ಕಷ್ಟವಾಗಿ. ಕುಡಿಯುವ ನೀರಿಗೆ ಆದ್ಯತೆ ಮೇರೆಗೆ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ನಾರಾಯಣಗೌಡ,ಉಪವಿಭಾಗಾಧಿಕಾರಿ ಅರುಳ್‌ಕುಮಾರ್, ತಹಶೀಲ್ದಾರ್ ಟಿ.ಎಸ್.ಶಿವರಾಜ್, ಜಿಲ್ಲಾ ಆರೋಗ್ಯಾಧಿಕಾರಿಡಾ.ಮಂಜುಳಾ ದೇವಿ, ತಾಪಂ ಇಒ ಮುರುಡಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ,ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್‌ಉಪಸ್ಥಿತರಿದ್ದರು.
ವಾರಾಂತ್ಯ ಕರ್ಫ್ಯೂ ಜಾರಿ :
ಜಿಲ್ಲಾದ್ಯಂತ ಕಲಂ 144ರಡಿ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಶನಿವಾರ ಮತ್ತು ಭಾನುವಾರ ವಾರಾಂತ್ಯ ಕರ್ಫ್ಯೂ ಜಾರಿಗೆ ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಕೆ.ಶ್ರೀನಿವಾಸ್ ತಿಳಿಸಿದರು. ಕೋವಿಡ್-19 ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಸಂತೆ, ಜಾತ್ರೆ, ಮೆರವಣಿಗೆ, ಸಮಾವೇಶ, ಸಮ್ಮೇಳನ, ಕ್ರೀಡಾಕೂಟ, ಇತರೆ ಯಾವುದೇ ಧಾರ್ಮಿಕ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಜಿಲ್ಲಾದ್ಯಂತ ತುರ್ತು ಸೇವೆ ಹೊರತುಪಡಿಸಿ, ಆದೇಶದಲ್ಲಿ ಸೂಚಿಸಿರುವ ಎಲ್ಲಾ ನಿಯಮಕಟ್ಟುನಿಟ್ಟಾಗಿ ಸಾರ್ವಜನಿಕರು ಪಾಲಿಸಬೇಕಿದೆ. ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರಶಿಸ್ತು ಕ್ರಮ ಜರುಗಿಸಲಾಗುವುದು ಎಂದು ವಿವರಿಸಿದರು.
ಪ್ರತ್ಯೇಕ ಸ್ಥಳಗಳಲ್ಲಿ ತಪಾಸಣೆ, ಲಸಿಕೆ ನೀಡಲು ವ್ಯವಸ್ಥೆ: ಡೀಸಿ :
ಕೋವಿಡ್-19 ತಪಾಸಣೆ, ಲಸಿಕೆಯನ್ನು ಪ್ರತ್ಯೇಕ ಸ್ಥಳದಲ್ಲಿ ನೀಡಬೇಕಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಬೇಕಿರುವುದರಿಂದ ಜನದಟ್ಟಣೆ ಉಂಟಾಗಲಿದೆ. ಈ ಕುರಿತು ತ್ವರಿತವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.
ಶಾಲೆಗಳಿಗೆ ರಜೆ ಇರುವುದರಿಂದ ಎರಡು ಕಟ್ಟಡ ಪಡೆದು ಅದರಲ್ಲಿ ಲಸಿಕೆ ಹಾಗೂ ಕೋವಿಡ್-19ತಪಾಸಣೆಗೆ ಬಳಸಿಕೊಳ್ಳಬೇಕಿದೆ. ಆ್ಯಂಬುಲೆನ್ಸ್‌ಸುಸ್ಥಿತಿಯಲ್ಲಿರಿಸಿಕೊಂಡು ಅಗತ್ಯ ಸಿಬ್ಬಂದಿಯನ್ನುಸಜ್ಜಾಗಿಸಿರಿಸಿಕೊಳ್ಳಬೇಕಿದೆ. ಸೋಮವಾರದಿಂದಕಾರ್ಖಾನೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಸಿಗಲಿದ್ದು, ಕೋವಿಡ್-19 ಲಸಿಕೆಗೆ ಬಳಸಿಕೊಳ್ಳಬೇಕಿದೆ. ಪಿಡಿಒ ಮಾರ್ಗಗಳನ್ನು ಸಿದ್ಧಪಡಿಸಿಕೊಂಡು ತಯಾರಾಗಬೇಕಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೆರವನ್ನು ಪಡೆಯಬೇಕಿದೆ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.