ಸತತ 10 ದಿನಗಳಿಂದ ಸ್ಥಿರತೆ ಕಾಪಾಡಿಕೊಂಡಿರುವ ಪೆಟ್ರೋಲ್, ಡೀಸೆಲ್ ಬೆಲೆ ..!
Team Udayavani, Apr 25, 2021, 11:21 AM IST
ನವ ದೆಹಲಿ: ಸತತವಾಗಿ 10 ನೇ ದಿನವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿಯೂ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ.
ಕಳೆದ ವಾರಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 16 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 14 ಪೈಸೆ ಕಡಿತಗೊಳಿಸಿದ್ದವು.
ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಡಿಸೇಲ್ ಬೆಲೆ ಎಷ್ಟಿದೆ..?
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90 ರೂಪಾಯಿ 40 ಪೈಸೆ ಆಗಿದೆ. ಪ್ರತಿ ಲೀಟರ್ ಡೀಸೆಲ್ ದರ 80 ರೂಪಾಯಿ 73 ಪೈಸೆ ಆಗಿದೆ.
ಮುಂಬೈ ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96 ರೂಪಾಯಿ 83 ಪೈಸೆ ಇದ್ದರೇ, ಪ್ರತಿ ಲೀಟರ್ ಡೀಸೆಲ್ ದರ 87 ರೂಪಾಯಿ 81 ಪೈಸೆಯಷ್ಟಿದೆ.
ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 92 ರೂಪಾಯಿ 43 ಪೈಸೆ ಆಗಿದ್ದರೇ, ಪ್ರತಿ ಲೀಟರ್ ಡೀಸೆಲ್ ದರ 85 ರೂಪಾಯಿ 75 ಪೈಸೆ ಇದೆ.
ಓದಿ : ಆ್ಯಂಬುಲೆ ನ್ಸ್ ನಿರ್ವಹಣೆಗೆ ಬಿಎಂಟಿಸಿ ತನಿಖಾದಳ ಸಾಥ್
ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು ಗಮನಿಸಿದಾಗ 90 ರೂಪಾಯಿ 20 ಆಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 83 ರೂಪಾಯಿ 61 ಪೈಸೆ ಇದೆ.
ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ಅನ್ನು 93 ರೂಪಾಯಿ 43 ಪೈಸೆ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 85 ರೂಪಾಯಿ 60 ಪೈಸೆ ಇದೆ.
ಇನ್ನು, ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 88 ರೂಪಾಯಿ 72 ಪೈಸೆ ಇದ್ದರೆ. ಪ್ರತಿ ಲೀಟರ್ ಡೀಸೆಲ್ ಬೆಲೆ 81 ರೂಪಾಯಿ 13 ಪೈಸೆ ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ ಕಂಡಿರುವ ಕಾರಣದಿಂದಾಗಿ ಏಪ್ರಿಲ್ ತಿಂಗಳ ಮೊದಲು 15 ದಿನಗಳ ಕಾಲ ಪೆಟ್ರೋಲ್, ಡೀಸೆಲ್ ದರವನ್ನು ಬದಲಾವಣೆ ಮಾಡಿರಲಿಲ್ಲ. 15 ದಿನಗಳ ನಂತರ ಗುರುವಾರ ಮೊದಲಬಾರಿಗೆ ಕಡಿತ ಕಂಡಿತು. ಅದಕ್ಕೂ ಮೊದಲು ಮಾರ್ಚ್ ತಿಂಗಳ ಕೊನೆಯ 30ನೇ ತಾರೀಕಿನಂದು ಕಡಿತಗೊಳಿಸಲಾಗಿತ್ತು. ಆದರೂ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿಯೇ ಇದೆ.
ಓದಿ : ಲಾಕ್‌ಡೌನ್ ನಡುವೆ ಸರಳವಾಗಿ ನಡೆದ ರಾಜ್ ಕುಮಾರ್ ಹುಟ್ಟುಹಬ್ಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.