ಸಟನ್‌: ಇಂಗ್ಲೆಂಡ್‌ನಲ್ಲಿದೆ ಪುರಾತನ ಪ್ಯಾರಿಷ್‌


Team Udayavani, Apr 25, 2021, 11:46 AM IST

The oldest parish in England

ಇಂಗ್ಲೆಂಡ್‌ನ‌ ದಕ್ಷಿಣ ಲಂಡನ್‌ನಲ್ಲಿರುವ ಪ್ರಮುಖ ಪಟ್ಟಣ ಸಟನ್‌ (Sutton). ಗೂಗಲ್‌ ಸರ್ಚ್‌ ಮಾಡಿದರೆ ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಹಲವಾರು ಸಟನ್‌ ಹೆಸರಿನ ಪ್ರದೇಶಗಳಿವೆ. ಆದರೆ ನಾನಿಲ್ಲಿ ಉಲ್ಲೇಖೀಸುತ್ತಿರುವುದು ಲಂಡನ್‌ ಹೊರಭಾಗದಲ್ಲಿರುವ ಸಟನ್‌.

ಸುತ್ತಮುತ್ತಲಿನ ಪ್ರದೇಶಗಳನ್ನು ಸೇರಿಸಿ ಲಂಡನ್‌ ಬರೋ ಆಫ್ ಸಟನ್‌ ಎಂದು ಕರೆಯಲಾಗುತ್ತದೆ. ಇದು North Downsನ ಕೆಳ ಇಳಿಜಾರು ಪ್ರದೇಶಗಳಲ್ಲಿದೆ ಮತ್ತು

ಲಂಡನ್‌ನ ಹೊರ ಪ್ರಾಂತ್ಯದ ಆಡಳಿತ ಕೇಂದ್ರವಾಗಿದೆ. ಇದು ಚಾರಿಂಗ್‌ ಕ್ರಾಸ್‌ನ ನೈಋತ್ಯ ದಿಕ್ಕಿನಲ್ಲಿ 10 ಮೈಲಿ  ಅಂದರೆ 16 ಕಿ.ಮೀ. ದೂರದಲ್ಲಿದೆ ಮತ್ತು ಲಂಡನ್‌ ಯೋಜನೆಯಲ್ಲಿ ಹದಿಮೂರು ಮಹಾನಗರ ಕೇಂದ್ರಗಳಲ್ಲಿ ಒಂದಾಗಿದೆ. 2011ರ ಜನಗಣತಿಯ ಪ್ರಕಾರ ಈ ಪಟ್ಟಣದ ಜನಸಂಖ್ಯೆ 41,483, ಲಂಡನ್‌ ಬರೋ ಆಫ್ ಸಟನ್‌ ಜನಸಂಖ್ಯೆ ಒಟ್ಟಾರೆ 2,04,525 ಎಂದು ಪರಿಗಣಿಸಲಾಗಿದೆ.

ಪುರಾತನ ಪ್ಯಾರಿಷ್‌ (a small administrative district typically having its own church) ಎಂದೇ ಖ್ಯಾತಿಯಾದ ಈ ಪ್ರದೇಶ ಮೂಲತಃ ಸರ್ರೆ ಕೌಂಟಿಯಲ್ಲಿ ಇದ್ದಿತ್ತು. 1086ರ ಡೋಮ್ಸ್ ಡೇ ಪುಸ್ತಕದಲ್ಲಿ ಎರಡು ಚರ್ಚ್‌ಗಳು ಮತ್ತು ಸುಮಾರು 30 ಮನೆಗಳನ್ನು ಹೊಂದಿದೆ ಎಂದು ದಾಖಲಿಸಲಾಗಿದೆ. ಸಟನ್‌ ಪ್ರಾಂತ್ಯ ಅತೀದೊಡ್ಡ ಗ್ರಂಥಾಲಯಕ್ಕೆ ಪ್ರಖ್ಯಾತವಾಗಿದ್ದು, ಸಾರ್ವಜನಿಕ ಕಲೆಯ ಹಲವಾರು ಕೃತಿಗಳನ್ನು ಹಾಗೂ ನಾಲ್ಕು ಸಂರಕ್ಷಣ ಪ್ರದೇಶಗಳನ್ನು ಹೊಂದಿರುವ ಪಟ್ಟಣವಾಗಿದೆ. 1965ರಲ್ಲಿ ಸಟನ್‌ ಅಧಿಕೃತವಾಗಿ ಗ್ರೇಟರ್‌ ಲಂಡನ್‌ನ ಒಂದು ಭಾಗವಾಗಿ ಘೋಷಿತವಾಯಿತು.

ಇದು ಹಲವಾರು ದೊಡ್ಡ ಅಂತಾರಾಷ್ಟ್ರೀಯ ಕಂಪೆನಿಗಳಿಗೆ ನೆಲೆಯಾಗಿದೆ ಮತ್ತು ಲಂಡನ್‌ನ ಆರನೇ ಪ್ರಮುಖ ಶಾಪಿಂಗ್‌ ಪ್ರದೇಶವಾಗಿದೆ. ಮಧ್ಯ ಲಂಡನ್‌ ಮತ್ತು ಹಾರ್ಷಮ್‌ ಸೇರಿದಂತೆ ಇತರ ಸ್ಥಳಗಳಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಸಟನ್‌, ದಕ್ಷಿಣ ಲಂಡನ್‌ನ ಒಂದು ಮುಖ್ಯ ಚಿತ್ರೀಕರಣದ ಕೇಂದ್ರವಾಗಿದೆ. ಈ ಪಟ್ಟಣ ರಾಯಲ್‌ ಮಾಸೆxìನ್‌ ಆಸ್ಪತ್ರೆ ಮತ್ತು ಕ್ಯಾನ್ಸರ್‌ ಸಂಶೋಧನ ಸಂಸ್ಥೆಯ ನೆಲೆಯಾಗಿದೆ. ಇಲ್ಲಿ ವಿಶ್ವದ ಎರಡನೇ ಅತೀದೊಡ್ಡ ಕ್ಯಾನ್ಸರ್‌ ಸಂಶೋಧನ ಕ್ಯಾಂಪಸ್‌ ಅನ್ನು ರಚಿಸುವ ಯೋಜನೆಗಳಿವೆ.

ಸಟನ್‌ ಎಂಬ ಹೆಸರು ಹೇಗೆ ಬಂತು

ಈ ಕುರಿತು ಹುಡುಕಿದಾಗ ವಿಕಿಪೀಡಿಯಾದಲ್ಲಿ ಸಿಕ್ಕ ಒಂದಷ್ಟು ಮಾಹಿತಿ. 1086 ಡೋಮ್ಸ್ ಡೇ ಪುಸ್ತಕದಲ್ಲಿ ಸಟನ್‌ ಎಂದು ಸ್ಥಳದ ಹೆಸರನ್ನು ದಾಖಲಿಸಲಾಗಿದೆ. ಇದು ಹಳೆಯ ಇಂಗ್ಲಿಷ್‌ ‘South’

ಮತ್ತು ‘Tun’  ನಿಂದ ರೂಪುಗೊಂಡಿದೆ. ಇದರರ್ಥ South Farm’ ಎಂದು ತಿಳಿದು ಬರುತ್ತದೆ. ಈ ಪ್ರದೇಶದಲ್ಲಿ ಪುರಾತತ್ತÌ ಶಾಸ್ತ್ರದ ಸಂಶೋಧನೆಗಳು ಸಾವಿರಾರು ವರ್ಷಗಳ ಹಿಂದಿನವು. ರೋಮನ್‌ ಮಾದರಿಯ ಮನೆಗಳು ಬೆಡ್ಡಿಂಗ್ಟನ್‌ನಲ್ಲಿ ಕಾಣಿಸುತ್ತವೆ.

1901ರ ಹೊತ್ತಿಗೆ ಪಟ್ಟಣದ ಜನಸಂಖ್ಯೆಯು 17,223 ಕ್ಕೆ ತಲುಪಿದ್ದು, ಹೆಚ್ಚಿನ ವಸತಿಗಳನ್ನು ನಿರ್ಮಿಸಿ ಪಟ್ಟಣದ High Street (Town Centre) ಅಭಿವೃದ್ಧಿಪಡಿಸಲಾಯಿತು. ಸಟನ್‌ 1840ರಲ್ಲಿ ಮೆಟ್ರೋಪಾಲಿಟನ್‌ ಪೊಲೀಸ್‌ ಜಿಲ್ಲೆಯ ವ್ಯಾಪ್ತಿಯಲ್ಲಿ ಬಂದಿತು. ಹೌಸ್‌ ಓಫ್ ಕಾಮ ಚುನಾವಣೆಗಳಿಗಾಗಿ 1945ರಲ್ಲಿ ಸಟನ್‌ ಮತ್ತು ಚೀಮ್‌ ಕ್ಷೇತ್ರವೆಂದು ಪರಿಗಣಿಸಲಾಯಿತು. 2015ರಿಂದ ಇಲ್ಲಿ ಕನ್ಸರ್ವೇಟಿವ್‌ ಪಕ್ಷದ ಅಭ್ಯರ್ಥಿ ಸಂಸತ್ತಿನ ಸದಸ್ಯರಾಗಿದ್ದಾರೆ. ಇಲ್ಲಿಯ ಸ್ಥಳೀಯ ಕೌನ್ಸಿಲ್‌ ಅನ್ನು 1990ರಿಂದ ಲಿಬರಲ್‌ ಡೆಮಾಕ್ರಾಟ್‌ ಬಹುಮತದಿಂದ ನಡೆಸಲಾಗುತ್ತಿದೆ.

ಸಟನ್‌, ಸರ್ರೆ ಕೌಂಟಿಯ ಪ್ರಮುಖ ಸ್ಥಳವಾಗಿದ್ದು, ಮಧ್ಯ ಲಂಡನ್‌ನಿಂದ ತುಂಬಾ ಹತ್ತಿರವಿದ್ದು ಇಂಗ್ಲೆಂಡ್‌ನ‌ ಬಹು ಮುಖ್ಯವಾದ ಪಟ್ಟಣವಾಗಿದೆ. ಅತ್ಯುತ್ತಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿಗೆ ಪ್ರಸಿದ್ಧಿಯಾಗಿರುವುದರಿಂದ ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರಿಗೆ ಪ್ರಮುಖ ವಾಸಸ್ಥಳವಾಗಿದೆ.

ಸಟನ್‌ನಲ್ಲಿ ಭಾರತೀಯ ಸಮುದಾಯ

ಸಟನ್‌ ಕೌನ್ಸಿಲ್‌ನ ಯೋಜಿತ ದತ್ತಾಂಶದ ಪ್ರಕಾರ ಸಟನ್‌ನಲ್ಲಿ ಭಾರತೀಯರ ಅಥವಾ ಭಾರತೀಯ ಮೂಲದವರ ಜನಸಂಖ್ಯೆ ಕೇವಲ 9,349 ಆಗಿದ್ದು. ಇದು ಶೇ. 4.4ರಷ್ಟಿದೆ. ಇವರಲ್ಲಿ 8,038 ಜನ (ಶೇ.4.1) ಹಿಂದೂಗಳು. ಸಟನ್‌ನಲ್ಲಿ ಯಾವುದೇ ಹಿಂದೂ ಮಂದಿರದ ಸ್ಥಾಪನೆಯಾಗಿಲ್ಲ. ಆದರೆ ಇದರ ಪಕ್ಕದಲ್ಲೇ ಇರುವ ಎಪ್ಸಮ್‌ ಎಂಬ ಪ್ರದೇಶದಲ್ಲಿ  ಶ್ರೀರಾಜರಾಜೇಶ್ವರಿ ಅಮ್ಮನವರ ದೇಗುಲವಿದೆ. ಹಾಗೆಯೇ 5 ಮೈಲು ದೂರದಲ್ಲಿರುವ ವಿಂಬಲ್ಡನ್‌ನಲ್ಲೂ  ಗಣಪತಿ ದೇವಸ್ಥಾನವಿದೆ. ಗಣಪತಿ ದೇವಸ್ಥಾನದಲ್ಲಿ ಕನ್ನಡಿಗ ಅರ್ಚಕರಿರುವುದರಿಂದ ನಮ್ಮ ಸುತ್ತಮುತ್ತಲಿನ ಕನ್ನಡಿಗರು ಭೇಟಿ ನೀಡುವುದು ಸಾಮಾನ್ಯವಾಗಿದೆ. ಸಟನ್‌ ನಲ್ಲಿ ಹಿಂದೂ ಸ್ವಯಂ ಸೇವಾ ಸಂಸ್ಥೆಯು ಇತ್ತೀಚಿಗೆ ಸಕ್ರಿಯವಾಗಿದ್ದು, ಬಾಲಗೋಕುಲಂ ಹಾಗೂ ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಸಟನ್‌ನಲ್ಲಿರುವ ಕನ್ನಡಿಗರು

ಸಟನ್‌ನಲ್ಲಿ ಅತ್ಯುತ್ತಮವಾದ ಗ್ರಾಮರ್‌ ಸ್ಕೂಲ್‌ಗ‌ಳು ಇರುವುದರಿಂದ ಸುಮಾರು 150 ಕ್ಕೂ ಹೆಚ್ಚು ಕನ್ನಡ ಪರಿವಾರ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿವೆ. ಕನ್ನಡ ಬಳಗ ಸಟನ್‌ ಎಂಬ  ವಾಟ್ಸ್‌ಆ್ಯಪ್‌ ಗುಂಪು ಬಹುತೇಕವಾಗಿ ಇಲ್ಲಿನ ಎಲ್ಲ ಕನ್ನಡಿಗರನ್ನು ಒಟ್ಟು ಹಾಕಿ ವಿವಿಧ ಮಾಹಿತಿಗಳ ಸಹಾಯ ಹಸ್ತವನ್ನು ಸ್ನೇಹಪರ ಕನ್ನಡಿಗರಿಗೆ ನೀಡುತ್ತಿದೆ.

ಹಲವು ಕನ್ನಡಿಗರನ್ನು ಒಳಗೊಂಡಿರುವ ಸಟನ್‌ ಕನ್ನಡ ಬಳಗ ಕಳೆದ ಏಳೆಂಟು ವರ್ಷಗಳಿಂದ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಸ್ವಯಂ ಪ್ರೇರಣೆಯಿಂದ ಶುರುವಾದ ಈ ಗುಂಪು ಅಧಿಕೃತವಾಗಿ ನೋಂದಣಿಯಾಗಿಲ್ಲವಾಗಿದ್ದರೂ ಮಕರ ಸಂಕ್ರಾಂತಿ, ಯುಗಾದಿ, ದೀಪಾವಳಿ, ರಾಜ್ಯೋತ್ಸವ ಹೀಗೆ ಹಲವಾರು ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವುದರ ಮೂಲಕ ಕನ್ನಡ ಸಮುದಾಯವನ್ನು ಒಟ್ಟುಗೂಡಿಸುವ ಕಾರ್ಯ ಮಾಡುತ್ತಿದೆ.

ಇನ್ನೊಂದು ಗಮನಾರ್ಹ ವಿಷಯವೇನೆಂದರೆ ಇಲ್ಲಿ ನಡೆಯುತ್ತಿರುವ ಕನ್ನಡ ಕಲಿ ಅಭಿಯಾನ. ಸಟನ್‌ ಕನ್ನಡ ಕಲಿ ಕೇಂದ್ರವು 2017 ಫೆಬ್ರವರಿ 25ರಂದು ಕನ್ನಡಿಗರು ಯುಕೆ ಆಶ್ರಯದಲ್ಲಿ ಆರಂಭವಾಯಿತು. ಆಗ ಸುಮಾರು 28 ಮಕ್ಕಳು ನೋಂದಾಯಿಸಿದ್ದರು. 30 ಪೋಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಇಲ್ಲಿಯ ಸ್ಥಳೀಯ ರಾಜಕೀಯದಲ್ಲೂ ಕೂಡ ಸಟನ್‌ ಕನ್ನಡಿಗರು ಭಾಗವಹಿಸುತ್ತಿರುವುದು ಗಮನಾರ್ಹ. ಸಟನ್‌ ಕನ್ನಡಿಗನಾದ ಮುಕೇಶ್‌  ರಾವ್‌ 2018 ರಲ್ಲಿ ಇಲ್ಲಿಯ ಕೌನ್ಸಿಲ್‌ ಚುನಾವಣೆಗೆ ನಿಂತಿದ್ದು 2022ನೇ ಸಾಲಿಗೆ ಮತ್ತೆ ದಕ್ಷಿಣ ಸಟನ್‌ ವಾರ್ಡ್‌ನಿಂದ ಚುನಾವಣೆಗೆ ನಿಂತಿ¨ªಾರೆ.

ಒಟ್ಟಿನಲ್ಲಿ ಸಟನ್‌ ಪಟ್ಟಣ ಸಮಕಾಲೀನ ಕಲೆ, ಪರಂಪರೆ ಮತ್ತು ಇತಿಹಾಸದ ಪ್ರತೀಕವಾಗಿದ್ದು, ಲಂಡನ್‌ ಹೊರಪ್ರದೇಶದ ನಿವಾಸಿಗಳಿಗೆ ಉನ್ನತ ಜೀವನ ಮಟ್ಟವನ್ನು ಒದಗಿಸುತ್ತದೆ. ಕಡಿಮೆ ಅಪರಾಧದಿಂದ ಗುರುತಿಸಲಾದ ಹನ್ನೊಂದು ಪ್ರಮುಖ ಮಹಾನಗರ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಹೀಗಾಗಿ ಲಂಡನ್‌ ಪ್ರವಾಸದ ಯೋಜನೆ ಇದ್ದರೆ ಖಂಡಿತ ಸಟನ್‌ಗೆ ಭೇಟಿ ನೀಡಬಹುದು.

ಗಣಪತಿ ಭಟ್‌, ಸಟನ್‌

 

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.