ಸೋಂಕಿತರ ಶವಸಂಸ್ಕಾರಕ್ಕೆ ಆರ್‌ಎಸ್‌ಎಸ್ ಮುಂದು
Team Udayavani, Apr 25, 2021, 4:11 PM IST
ಚನ್ನರಾಯಪಟ್ಟಣ: ಕೋವಿಡ್ 2ನೇ ಅಲೆ ತೀರ್ವವಾಗಿದ್ದು ಮೊದಲ ಅಲೆಗಿಂತ ಎರಡನೇ ಅಲೆಗೆ ತಾಲೂಕಿನಲ್ಲಿ ಮೃತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿ ನಿಂದ ಮೃತರಾದವರ ಅಂತ್ಯ ಸಂಸ್ಕಾರಕ್ಕೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಟೊಂಕಕಟ್ಟಿ ನಿಂತ್ತಿದ್ದಾರೆ.
ತಾಲೂಕಿನಲ್ಲಿ ಕೋವಿಡ್ ಮೊದಲ ಅಲೆಯಿಂದ35 ಮಂದಿ ಮೃತರಾಗಿದ್ದು, ಎರಡನೇ ಅಲೆ ಪ್ರಾರಂಭದಲ್ಲಿಯೇ 30ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ.ಮೊದಲ ಅಲೆಗೆ 45 ವರ್ಷ ಮೇಲ್ಪಟ್ಟವರು ಮೃತರಾದರೆ ಎರಡನೇ ಅಲೆಗೆ 40 ವರ್ಷದ ಒಳಗಿನವರೇ ಹೆಚ್ಚು ಮೃತಪಡುತ್ತಿರುವುದು ಅತಂಕಕ್ಕೆ ಕಾರಣವಾಗಿದೆ. ಈ ವೇಳೆ ಹಿಂದೂಪರ ಸಂಘಟನೆ ಯುವಕರು ಸೋಂಕಿತ ಶವಗಳ ಸಂಸ್ಕಾರಕ ಮುಂದಾಗಿದ್ದಾರೆ.
ಕೋವಿಡ್ ದಿಂದ ಕುಟುಂಬಸ್ಥರು , ಸ್ನೇಹಿತರ ನಡು ವಿನ ಸಂಬಂಧವನ್ನು ಕಸಿಯುತ್ತಿರುವುದಲ್ಲದೆ ಮಾನವೀಯತೆಯನ್ನು ಮರೆಸುತ್ತಿದೆ. ಇಂಥ ಸಂದರ್ಭ ದಲ್ಲಿ ಹಿಂದೂಪರ ಸಂಘಟನೆ ಕಾರ್ಯ ಕರ್ತರು ಮಾನವೀಯತೆಗೆ ಮಾರುಹೋಗುತ್ತಿದ್ದಾರೆ, ಸೋಂಕಿತರ ಸಂಸ್ಕಾರ ಮಾಡಲು ಕುಟುಂಬದವರೇ ಹಿಂಜರಿ ಯುವ ಕಾಲ ನಿರ್ಮಾಣವಾಗಿದೆ. ಈ ವೇಳೆ ನೆರವು ನೀಡಲು ಹಿಂದು ಸಂಘಟನೆಗಳು ಮುಂದಾಗಿವೆ.
ಮೊದಲ ಅಲೆಯಲ್ಲಿಯೂ ಸೇವೆ: ಕೋವಿಡ್ ಮೊದಲ ಅಲೆಯಲ್ಲಿ ಆರ್‌ಎಸ್‌ಎಸ್ ಯುವ ಸಮೂಹ ತಾಲೂಕಿನ ಗಡಿಯಲ್ಲಿ ನಿರ್ಮಾಣವಾಗಿದ್ದಚಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಜೊತಗೂಡಿ ಸೇವೆ ಮಾಡಿದ್ದರು. ಇದಲ್ಲದೆ ಅಗತ್ಯವಿರುವ ಕಡೆಯಲ್ಲಿಗಣವೇಷ ತೊಟ್ಟು ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು, ಈಗಲೂ ಎರಡನೇ ಅಲೆಗೆ ತಾಲೂಕು ಆಡಳಿತದೊಂದಿಗೆ ಕೈಜೋಡಿಸುವುದಾಗಿ ಸಂಘದ ಸ್ವಯಂ ಸೇವಕ ಮನೋಹರ್ ಮಿನಿ ವಿಧಾನಸೌಧದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದ್ದಾರೆ.
ಭಯಬೇಡ ನಾವಿದ್ದೇವೆ: 2ನೇ ಅಲೆ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆಮಾಡಿದೆ. ಈ ವೇಳೆಯಲ್ಲಿಭಯಬೇಡ ನಾವು ನಿಮ್ಮ ನೆರವಿಗೆ ದಾವಿಸುತ್ತೇವೆ. ಸಂಘದ ಕಾರ್ಯವಾಹ ಗಿರಿಶ್, ಭಜರಂಗದಳ ತಾಲೂಕು ಸಂಚಲಕ ಮಧುಗೌಡ, ಬಾಗೂರು ರಸ್ತೆ ಭುವನೇಶ್ವರಿ ವೃತ್ತದಲ್ಲಿ ಜ್ಯೋತಿ ಫ್ರೆàಮ್ ವರ್ಕ್ಸ್ ಮಾಲೀಕ ಸತ್ಯನಾರಾಯಣ ಕೊರೊನಾಗೆ ಮೃತರಾಗಿದ್ದು ಅವರ ಅಂತ್ಯ ಸಂಸ್ಕಾರ ಮಾಡಿದಲ್ಲದೆ ಹಲವು ಅಂತ್ಯಸಂಸ್ಕಾರ ಮಾಡಿದ್ದಾರೆ.
ಕೋವಿಡ್ ಸೋಂಕಿನಿಂದ ಯಾವುದೆ ಜಾತಿ, ಮತದವರು ಮೃತರಾದರೂನಾವು ಅವರವರ ಸಂಪ್ರದಾಯಕ್ಕೆ ತಕ್ಕಂತೆಅಂತ್ಯಸಂಸ್ಕಾರ ಮಾಡುತ್ತಿದ್ದೇವೆಮುಂದೆಯೂ ಈ ಸೇವೆಗೆ ಸಿದ್ಧ. – ಗಿರೀಶ್ ಬೆಳವಾಡಿ, ಆರೆಸ್Õ ನಗರ ಕಾರ್ಯವಾಹ.
ಪಿಪಿಇ ಕಿಟ್ ಧರಿಸಿ ಮೃತರ ಅಂತ್ಯ ಸಂಸ್ಕಾರ ಮಾಡಲಾಗುವುದು. ನಂತರ ಪಿಪಿಐ ಕಿಟ್‌ಗೆ ಕಳಚಿ ವೈಜ್ಞಾನಿಕವಾಗಿವಿಲೇವಾರಿ ಮಾಡುತ್ತೇವೆ. ಹ್ಯಾಂಡ್ ಸ್ಯಾನಿಟೈಸ್ ಮಾಡಿ ನಂತರ ಡೆಟಾಲ್ ಬಳಸಿಬಿಸಿನೀರಿನಲ್ಲಿ ಸ್ನಾನ ಮಾಡುತ್ತೇವೆ,ತೊಟ್ಟಬಟ್ಟೆಯನ್ನು ಬಿಸಿನೀರಿನಿಂದ ತೊಳೆಯುತ್ತೇವೆ, ಹೀಗಾಗಿ ಭಯ ಬೇಡ.– ಮಧುಗೌಡ, ಭಜರಂಗದಳ ಸಂಚಾಲಕ
ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.