ವೀಕೆಂಡ್‌ ಕರ್ಫ್ಯೂಗೆ ಕೋಟೆ ನಾಡಿನ ಸಾರ್ವಜನಿಕರಿಂದ ಉತ್ತಮ ಸ್ಪಂದನೆ


Team Udayavani, Apr 25, 2021, 5:40 PM IST

25-13

ಚಿತ್ರದುರ್ಗ: ಕೋವಿಡ್‌ 19 ಎರಡನೇ ಅಲೆ ನಿಯಂತ್ರಿಸುವ ಸಲುವಾಗಿ ಸರ್ಕಾರ ಜಾರಿ ಮಾಡಿರುವ ವೀಕೆಂಡ್‌ ಕರ್ಫ್ಯೂಗೆ ಕೋಟೆನಾಡು ಚಿತ್ರದುರ್ಗದ ಜನತೆ ಉತ್ತಮವಾಗಿ ಸ್ಪಂದಿಸಿದರು. ಅನಗತ್ಯವಾಗಿ ಬೀದಿಗಿಳಿಯದೆ ಮನೆಯಲ್ಲೇ ಇದ್ದು ಕೊರೊನಾ ಹರಡದಂತೆ ತಡೆಯುವ ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದರು.

ಕೆಲಸಗಳಿಗೆ ತೆರಳುವವರು, ಔಷ ಧ ಮತ್ತಿತರೆ ಅಗತ್ಯ ಕೆಲಸಗಳಿಗೆ ಮಾತ್ರ ಬೆರಳೆಣಿಕೆಯಷ್ಟು ಜನ ಅಲ್ಲಲ್ಲಿ ಓಡಾಡುವುದು ಕಂಡುಬಂತು. ಉಳಿದಂತೆ ಇಡೀ ನಗರ ಕಳೆದ ವರ್ಷದ ಲಾಕ್‌ಡೌನ್‌ ನೆನಪಿಸುತ್ತಿತ್ತು. ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀಗೆ ಇದ್ದ ವಿನಾಯಿತಿ ಅವ ಧಿಯಲ್ಲಿ ಜನ ರಸ್ತೆಯಲ್ಲಿ ಕಾಣಿಸುತ್ತಿದ್ದರು.

ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಆದರೆ 10 ಗಂಟೆಯ ನಂತರ ಪೊಲೀಸರು ಇಡೀ ನಗರದಲ್ಲಿ ಸುತ್ತಾಡಿ ಅಂಗಡಿಗಳನ್ನು ಮುಚ್ಚಿಸಿದರು. ಇಡೀ ದಿನ ನಗರ ಅಕ್ಷರಶಃ ಮೌನಕ್ಕೆ ಜಾರಿತ್ತು. ಗಾಂಧಿ  ವೃತ್ತ, ಬಿ.ಡಿ. ರಸ್ತೆ, ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆ, ಲಕ್ಷ್ಮೀ ಬಜಾರ್‌ ಸೇರಿದಂತೆ ವ್ಯಾಪಾರ ವಹಿವಾಟುಗಳು ಜೋರಾಗಿ ನಡೆಯುವ ಪ್ರದೇಶಗಳಲ್ಲಿ ಕೂಡಾ ನೀರವ ಮೌನ ಕಾಣಿಸುತ್ತಿತ್ತು.

ಊಟಕ್ಕೆ ಪರದಾಡಿದ ಬ್ಯಾಚುಲರ್‌ಗಳು: ಅನೇಕ ಬ್ಯಾಚುಲರ್‌ ಹುಡುಗರು ಮಧ್ಯಾಹ್ನದ ಊಟಕ್ಕೆ ಪರದಾಡಿದರು. ಪ್ರಮುಖ ರಸ್ತೆಗಳಲ್ಲಿ ತೆರೆದಿರುತ್ತಿದ್ದ ಯಾವ ಹೋಟೆಲ್‌ ಕೂಡ ತೆರೆದಿರಲಿಲ್ಲ. ಖಾನಾವಳಿ, ಮೆಸ್‌ಗಳಲ್ಲಿ ಪಾರ್ಸೆಲ್‌ ವ್ಯವಸ್ಥೆ ಕೂಡ ಇಲ್ಲದೆ ಎಲ್ಲಿ ಹೋಟೆಲ್‌ ತೆರೆದಿದೆ ಎಂದು ಅವರಿವರನ್ನು ವಿಚಾರಿಸುತ್ತಿದ್ದರು. 12 ಗಂಟೆ ವೇಳೆಗೆ ತೆರೆದ ಪ್ರವಾಸಿಮಂದಿರ ಹಾಗೂ ಯೂನಿಯನ್‌ ಪಾರ್ಕ್‌ ಆವರಣದ ಇಂದಿರಾ ಕ್ಯಾಂಟೀನ್‌ ಕೆಲವರಿಗೆ ಆಸರೆಯಾಯಿತು.

ಪೊಲೀಸರಿಗೆ ಹೆಚ್ಚು ತೊಂದರೆ ನೀಡದ ಕರ್ಫ್ಯೂ: ಕಳೆದ ವರ್ಷದ ಲಾಕ್‌ಡೌನ್‌ ಹೋಲಿಸಿಕೊಂಡರೆ ಈಗಿನ ಕರ್ಫ್ಯೂ ಪೊಲೀಸರಿಗೆ ಹೆಚ್ಚು ತ್ರಾಸು ನೀಡಲಿಲ್ಲ. ಅನಗತ್ಯವಾಗಿ ಓಡಾಡಿದ ಒಂದಿಷ್ಟು ಪ್ರಕರಣ ಬಿಟ್ಟರೆ ಪೊಲೀಸರು ಜನರನ್ನು ಬೆನ್ನತ್ತಿ ಹೋಗುವುದು, ಕದ್ದು ಮುಚ್ಚಿ ವ್ಯಾಪಾರ ನಡೆಸುವವರನ್ನು ಹುಡುಕುವುದು ಇರಲಿಲ್ಲ. ಅಂಗಡಿ, ಹೋಟೆಲ್‌ ಮಾಲೀಕರುಗಳು ಸ್ವಯಂಪ್ರೇರಣೆಯಿಂದಲೇ ಬಂದ್‌ ಮಾಡಿಕೊಂಡು ಮನೆಯಲ್ಲಿ ಇದ್ದಿದ್ದರಿಂದ ಪೊಲೀಸರು ಎಲ್ಲಾ ರಸ್ತೆಗಳಲ್ಲಿ ಓಡಾಟ ನಡೆಸಿ ನಾವು ರಸ್ತೆಯಲ್ಲಿ ಇದ್ದೇವೆ ಎನ್ನುವ ಎಚ್ಚರಿಕೆ ನೀಡುತ್ತಿದ್ದರು. ಆಟೋ, ಬಸ್‌ಗಳು ಸಂಚಾರ ನಡೆಸಿದವು. ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಎಪಿಎಂಸಿ ವಹಿವಾಟುಗಳು ಬಂದ್‌ ಆಗಿದ್ದವು. ಬೆಳಗ್ಗೆ ಮಟನ್‌ ಮಾರುಕಟ್ಟೆಯಲ್ಲಿ ಚಿಕನ್‌, ಮಟನ್‌ ಬೆಲೆ ತುಸು ಹೆಚ್ಚಾಗಿತ್ತು. ಆದರೂ ವೀಕೆಂಡ್‌ ಲಾಕ್‌ ಡೌನ್‌ ಎಂಜಾಯ್‌ ಮಾಡಲು ಜನ ಮುಗಿಬಿದ್ದು ಖರೀದಿ  ಮಾಡಿದರು.

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

accident

Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

156

Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.