ರೈಲು ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಇಲ್ಲವೇ? ಹಿಂದೆ ಲಾಕ್‌ಡೌನ್ ವೇಳೆ ಇದ್ದ ನಿಯಮ ಈಗಿಲ್ಲ
Team Udayavani, Apr 26, 2021, 7:12 AM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕಾಡುತ್ತಿದ್ದರೂ ಸರಕಾರ ಎಚ್ಚೆತ್ತುಕೊಂಡಿಲ್ಲವೇ?
ಬೆಂಗಳೂರು ನಗರ ರೈಲ್ವೇ ನಿಲ್ದಾಣದ ಸ್ಥಿತಿ ನೋಡಿದರೆ ಹಾಗೆ ಅನ್ನಿಸದೇ ಇರದು. ಮಹಾರಾಷ್ಟ್ರ, ಕೇರಳ, ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಿಂದ ರೈಲಿನಲ್ಲಿ ಬರುತ್ತಿರುವವರು ಕೊರೊನಾ ಪರೀಕ್ಷೆ, ಕೊರೊನಾ ನೆಗೆಟಿವ್ ಪ್ರಮಾಣಪತ್ರದ ಪರಿಶೀಲನೆ ಇಲ್ಲದೆ ರೈಲ್ವೇ ನಿಲ್ದಾಣದಿಂದ ಹೊರಬರುತ್ತಿದ್ದಾರೆ!
ನೆರೆ ರಾಜ್ಯಗಳು, ದಿಲ್ಲಿ, ತ. ನಾಡು ಸೇರಿದಂತೆ 35-40 ರೈಲುಗಳು ಸಂಚರಿಸುತ್ತವೆ. ರಾಜ್ಯದ ನಾನಾ ಭಾಗಗಳಿಗೂ ಹತ್ತಾರು ರೈಲುಗಳು ಚಲಿಸುತ್ತವೆ. ಆದರೆ ಬರುವ ಪ್ರಯಾಣಿಕರ ತಪಾಸಣೆ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿಲ್ಲ. ಕೊರೊನಾ ಹೆಚ್ಚಲು ಇದೂ ಒಂದು ಕಾರಣವೇ ಎಂಬ ಗುಮಾನಿ ಕಾಡುತ್ತಿದೆ.
ಹಿಂದೆ ಹೇಗಿತ್ತು ವ್ಯವಸ್ಥೆ?
2020ರ ಲಾಕ್‌ಡೌನ್ ತೆರವಾದ ಬಳಿಕ ನಿರ್ದಿಷ್ಟ ಪ್ಲಾಟ್‌ಫಾರಂನಲ್ಲೇ ರೈಲು ನಿಲುಗಡೆಗೆ ಸೂಚನೆ ನೀಡಲಾಗುತ್ತಿತ್ತು. ನಿಲ್ದಾಣದಲ್ಲಿ 20-25 ಕೊರೊನಾ ತಪಾಸಣೆ ಡೆಸ್ಕ್ ಇರುತ್ತಿತ್ತು. ಪ್ರತೀ ಪ್ರಯಾಣಿಕನ ಗಂಟಲುದ್ರವದ ಮಾದರಿ ಸಂಗ್ರಹಿಸಿ, ಮಾಹಿತಿ ದಾಖಲಿಸಲಾಗುತ್ತಿತ್ತು. ಯಾವುದೇ ಪ್ರಯಾಣಿಕನಿಗೆ ಸೋಂಕು ದೃಢಪಟ್ಟರೆ ಕ್ವಾರಂಟೈನ್ ಮಾಡಲಾಗುತ್ತಿತ್ತು. ಈಗ ಇಂಥ ಕ್ರಮಗಳಿಲ್ಲ.
ಕರಾವಳಿಯಲ್ಲಿ ಪರೀಕ್ಷೆ , ತಪಾಸಣೆ
ಉಡುಪಿ, ಬೈಂದೂರು, ಸುರತ್ಕಲ್ ರೈಲು ನಿಲ್ದಾಣಗಳಲ್ಲಿ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರ ಥರ್ಮಲ್ ಪರೀಕ್ಷೆ ನಡೆಸಲಾಗುತ್ತದೆ. ರೈಲಿನೊಳಗೆ ಟಿಟಿಇ ಅವರು ಪ್ರಯಾಣಿಕರ ನೆಗೆಟಿವ್ ಪ್ರಮಾಣಪತ್ರ ಕೇಳುತ್ತಾರೆ. ಆರೋಗ್ಯದ ಸಮಸ್ಯೆ ಇದ್ದಲ್ಲಿ ಸ್ಥಳೀಯ ಆರೋಗ್ಯ ಇಲಾಖೆ ಗಮನಕ್ಕೆ ತರುತ್ತಾರೆ. ಇದುವರೆಗೆ ನಮ್ಮಲ್ಲಿ ಪಾಸಿಟಿವ್ ಪ್ರಕರಣದ ಪ್ರಯಾಣಿಕರು ಕಂಡುಬಂದಿಲ್ಲ. ರಾಜ್ಯ ಆರೋಗ್ಯ ಇಲಾಖೆ ಸಿಬಂದಿ ಬಂದರೆ ಮಾತ್ರ ಗಂಟಲುದ್ರವ ಪರೀಕ್ಷೆ ನಡೆಸಲು ಸಾಧ್ಯವಾಗುತ್ತದೆ ಎಂದು ಕೊಂಕಣ ರೈಲ್ವೇ ಪಿಆರ್‌ಒ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ. ಮಂಗಳೂರಿನಲ್ಲಿಯೂ ಇದೇ ರೀತಿಯ ಕ್ರಮ ಅನುಸರಿಸಲಾಗುತ್ತಿದೆ.
ನಾನು ಮಹಾರಾಷ್ಟ್ರದಿಂದ ಬಂದಿದ್ದೇನೆ. ನನ್ನ ಬಳಿ ಕೊರೊನಾ ನೆಗೆಟಿವ್ ವರದಿ ಇದೆ. ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ತಪಾಸಣೆ ಮಾಡಲಿಲ್ಲ.
-ಮನೋಜ್, ಮಹಾರಾಷ್ಟ್ರ ನಿವಾಸಿ
ಶೇ. 50ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಲು ಉದ್ದೇಶಿಸಲಾಗಿದೆ. ಈಗ ನೂರಾರು ರೈಲುಗಳು ಸಂಚರಿಸುತ್ತಿರುವುದರಿಂದ ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆ ಕಷ್ಟ.
-ಎ.ಕೆ. ವರ್ಮಾ, ವಿಭಾಗೀಯ ರೈಲ್ವೇ ವ್ಯವಸ್ಥಾಪಕರು, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.