ಅಗ್ಗ ವಸ್ತುಗಳ ಖರೀದಿಗಾಗಿ ಮುಗಿಬಿದ್ದ ಗ್ರಾಹಕರು
Team Udayavani, Apr 26, 2021, 4:00 PM IST
ಭಾರತೀನಗರ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಭಾರತೀನಗರ ಪಟ್ಟಣ ಭಾನುವಾರ ಸಂಪೂರ್ಣಸ್ತಬ್ಧಗೊಂಡಿತ್ತು. ಮಂಡ್ಯ ರಸ್ತೆ, ಹಲಗೂರು ರಸ್ತೆ,ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿಯಾವಾಗಲೂ ರಸ್ತೆಯಲ್ಲಿ ಜನಜಂಗುಳಿಯಿಂದ ಕೂಡಿರುತ್ತಿತ್ತು. ಅಂಗಡಿ ಮುಂಗಟ್ಟುಗಳೆಲ್ಲವೂಬಂದ್ ಆಗಿದ್ದರಿಂದ ಈ ಎಲ್ಲಾ ರಸ್ತೆಗಳು ಜನರಿಲ್ಲದೆಬಿಕೋ ಎನ್ನುತ್ತಿದ್ದವು.
ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬಿದ್ದ ಗ್ರಾಹಕರು: ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳಖರೀದಿಗಾಗಿ ಅವಕಾಶ ಮಾಡಿಕೊಡಲಾ ಗಿತ್ತು. ಈಸಮಯದಲ್ಲಿ ಭಾರತೀನಗರ ಪಟ್ಟಣದ ಸುತ್ತಮುತ್ತಲಗ್ರಾಮಗಳ ಜನರೆಲ್ಲರೂ ಮುಂಜಾನೆ ಯಿಂ ದಲೇಮನೆಯಿಂದ ಹೊರಬಂದು ದಿನಸಿ ಪದಾರ್ಥಗಳುಸೇರಿದಂತೆ ಹೂ-ಹಣ್ಣು ತರಕಾರಿ, ಸೊಪ್ಪು ಸೇರಿದಂತೆಅವಶ್ಯ ಇರುವ ವಸ್ತುಗಳನ್ನು ಖರೀದಿ ಮಾಡಲುಪಟ್ಟಣದಲ್ಲಿ ಮುಗಿಬಿದ್ದಿದ್ದು ಕಂಡಿಬಂದಿತು.
ಮುಗಿಬಿದ್ದ ಮಾಂಸ ಪ್ರಿಯರು: ಭಾನುವಾರಬಂತು ಎಂದರೆ ಮಾಂಸ ಪ್ರಿಯರು ಮಾಂಸ ತಿನ್ನುವುದು ಸರ್ವೆ ಸಾಮಾನ್ಯ. ಅದರಂತೆ ಪಟ್ಟಣದಲ್ಲಿಎಲ್ಲಾ ಮಟನ್, ಚಿಕನ್, ಮೀನು ಅಂಗಡಿಗಳಲ್ಲಿಮಾಂಸ ಖರೀದಿಗೆ ಮುಗಿಬಿದ್ದಿದ್ದರು. ಬೆಳಗ್ಗೆ 6ರಿಂದ 10ರವರೆಗೆ ಸಮಯ ನಿಗದಿ ಮಾಡಿದ್ದರಿಂದಯಾವುದೇ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ಧರಿಸದೆ ಖರೀದಿಗೆ ಮುಂದಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.