ಎರಡನೇ ದಿನವೂ ಮೈಸೂರು ಸ್ತಬ್ಧ
Team Udayavani, Apr 26, 2021, 4:41 PM IST
ಮೈಸೂರು: ವಾರಾಂತ್ಯ ಕರ್ಫ್ಯೂ ಎರಡನೇ ದಿನವಾದ ಭಾನುವಾರ ಮೈಸೂರು ಸಂಪೂರ್ಣ ಸ್ತಬ್ಧವಾಗಿತ್ತು. ನಾಗರಿಕರು ಮನೆಯಿಂದ ಹೊರಬರದೆಸಹಕರಿಸಿದರು.
ಕರ್ಫ್ಯೂ ನಡುವೆಯೂ ಶೇ.05ರಷ್ಟು ವಾಹನಗಳು ಸಂಚಾರ ನಡೆಸಿದವು.ಶನಿವಾರ ವಾಹಗಳ ಸಂಚಾರಕ್ಕೆ ಪೊಲೀಸರುನಿರ್ಬಂಧಿಸಿದ್ದರು. ಅನಗತ್ಯವಾಗಿ ಓಡಾಡುವವರಿಗೆತಪಾಸಣೆ ನಡೆಸಿ ಬಿಸಿ ಮುಟ್ಟಿಸಿದ್ದರು. ಆದರೆ,ಫುಡ್ ಡೆಲವರಿ ಸೇರಿದಂತೆ ತುರ್ತು ಕೆಲಸಗಳಿಗಾಗಿ ದ್ವಿಚಕ್ರ ವಾಹನ ಸೇರಿದಂತೆ ಇತರೆ ವಾಹನಗಳು ಸಂಚರಿಸಿದರು.
ಬ್ಯಾರಿಕೇಡ್ ಅಳವಡಿಸಿದ್ದರೂಸಂಚಾರಕ್ಕೆ ಅಡ್ಡಿಯಿರಲಿಲ್ಲ. ಪೊಲೀಸರು ಯಾರನ್ನೂತಡೆಯಲಿಲ್ಲ. ಕೆಲವರು ಅನಗತ್ಯವಾಗಿ ನಗರಪ್ರದೇಶದಲ್ಲಿ ಸಂಚರಿಸುವುದು ಕಂಡು ಬಂದಿತು.
ತರಕಾರಿ ಖರೀದಿಗೆ ಅಡ್ಡಿಯಿಲ್ಲ: ಬೆಳಗ್ಗೆ 10ಗಂಟೆಯವರೆಗೆ ಹಣ್ಣು, ತರಕಾರಿ, ದಿನಸಿ, ಹೂವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜನರು ಇತ್ತಕಡೆ ಸುಳಿಯಲಿಲ್ಲ. ಆದರೆ ಬೋಟಿ ಬಂಜಾರ್‌ನಲ್ಲಿಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಮಾಂಸ ಖರೀದಿಸಿದರು. ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಮಾಂಸಮಾರಾಟಕ್ಕೆ ನಗರ ಪಾಲಿಕೆ ನಿಷೇಧ ಹೇರಿತ್ತು.
ಚಿಕ್ಕಗಡಿಯಾರ ವೃತ್ತದಲ್ಲಿ ಭಾನುವಾರವೂಸಾರ್ವಜನಿಕರು ಕೋವಿಡ್ ಪರೀಕ್ಷೆಗೆ ಒಳಗಾದರು.ಹಳೇ ಅಗ್ರಹಾರದಲ್ಲಿರುವ ನಗರ ಪ್ರಾಥಮಿಕಆರೋಗ್ಯ ಕೇಂದ್ರದಲ್ಲಿ 45 ವರ್ಷ ಮೇಲ್ಪಟ್ಟಹಿರಿಯ ನಾಗರಿಕರು ಕೋವಿಡ್ ಲಸಿಕೆ ಪಡೆದರು.
ಶನಿವಾರ ಗ್ರಾಮಾಂತರ ಮತ್ತು ನಗರ ಬಸ್‌ನಿಲ್ದಾಣದಿಂದ ವಿವಿಧೆಡೆಗೆ ಬಸ್‌ಗಳುಪಯಣಿಸಿದ್ದವು. ಆದರೆ, ಭಾನುವಾರ ನಗರ ಸಾರಿಗೆಬಸ್ ನಿಲ್ದಾಣದಲ್ಲಿ ಒಂದೂ ಬಸ್ ಇರಲಿಲ್ಲ.ನಿಲ್ದಾಣ ಪೂರ್ಣ ಸ್ತಬ್ಧವಾಗಿತ್ತು. ಗ್ರಾಮಾಂತರ ಬಸ್‌ನಿಲ್ದಾಣವೂ ಖಾಲಿಯಾಗಿತ್ತು. ನಗರದ ಕೆಲವುಹೋಟೆಲ್‌ಗಳು ತಿಂಡಿ, ಆಹಾರವನ್ನು ಪಾರ್ಸೆಲ್‌ನೀಡಿದವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.