ವಿಚಾರ ಭಾವದಾಚೆಯ ಸಾಮಾನ್ಯತೆ ಪರಿಚಯಿಸಿದವರು ತೇಜಸ್ವಿ
Team Udayavani, Apr 26, 2021, 6:59 PM IST
ಕೊಟ್ಟಿಗೆಹಾರ: ವಿಚಾರ ಭಾವದಾಚೆಯ ಸಾಮಾನ್ಯತೆಯನ್ನು ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಜನಸಾಮಾನ್ಯರ ಅಂತರ್ಗತವಾಗಿರುವಂತಹ ಮೌಲ್ಯಕ್ಕೆ ಸಾಹಿತ್ಯದ ಮೂಲಕ ಮನ್ನಣೆಯನ್ನು ತಂದುಕೊಟ್ಟವರು ತೇಜಸ್ವಿಯವರು ಎಂದು ಕಳಸಾಪುರ ಕಾಲೇಜಿನ ಪ್ರಾಂಶುಪಾಲ ಎಚ್.ಎಂ. ನಾಗರಾಜ ರಾವ್ ಕಲ್ಕಟ್ಟೆ ಹೇಳಿದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ “ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು’ ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಬಚೂರಿನ ಪೋಸ್ಟಾಪೀಸು ಕೃತಿಯ ಬಗ್ಗೆ ಅವರು ಮಾತನಾಡಿದರು. ತೇಜಸ್ವಿಯವರು ಅನುಭಾವದ ನೆಲೆಯಲ್ಲಿ ಬದುಕನ್ನು ಗ್ರಹಿಸುವಂತಹ ಪ್ರಯತ್ನವನ್ನು ಮಾಡಿದವರು. ಬದುಕಿನ ಕ್ಷುದ್ರ ಅನುಭವಗಳನ್ನು ಚಿಮ್ಮು ಹಲಗೆಯನ್ನಾಗಿ ಮಾಡಿಕೊಂಡು ಅನಂತ ಸಾಧ್ಯತೆಯಿಂದ ಓದುಗರನ್ನು ಚಿಂತನೆಗೆ ಹಚ್ಚಿದವರು.
ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ಮತ್ತು ಸರಿಪಡಿಸುವ ಪ್ರಜ್ಞೆಯಿಂದ ಬರಹವನ್ನು ಬರೆಯುವುದು ತೇಜಸ್ವಿಯವರ ವಿಶಿಷ್ಟತೆ ಎಂದರು. ಅಬಚೂರಿನ ಪೋಸ್ಟಾಪೀಸು ಕೃತಿಯ ಮುನ್ನುಡಿಯಲ್ಲಿ ತೇಜಸ್ವಿಯವರು ಸಾಹಿತ್ಯದ ಮಟ್ಟಿಗೆ ಸೀಮಿತಗೊಂಡಿರುವ ನವ್ಯ ಸಾಹಿತ್ಯದ ಕ್ರಾಂತಿಕಾರಿತನವನ್ನು ಚೇಡಿಸಿದ್ದಾರೆ. ಬರಹದ ರೂಪದಲ್ಲಿ ಸಾಹಿತ್ಯದ ಮಟ್ಟಿಗೆ ಮಾತ್ರ ಸೀಮಿತವಾಗುತ್ತಿದೆ. ಅದರಿಂದ ಸಮಾಜಕ್ಕೆ ಯಾವುದೇ ರೀತಿ ಪ್ರಭಾವ ಆಗ್ತಾ ಇಲ್ಲ ಎನ್ನುವುದನ್ನು ತೇಜಸ್ವಿಯವರು ಈ ಕೃತಿಯ ಮುನ್ನುಡಿಯಲ್ಲಿ ಚೇಡಿಸಿದ್ದಾರೆ.
70 ರ ದಶಕದಲ್ಲಿ ಭಾರತದಲ್ಲಿ ಜನಶಕ್ತಿ ಜಾಗೃತವಾಯ್ತು. ಸರ್ವಾಧಿ ಕಾರಿ ಶಕ್ತಿಯನ್ನು ತಿರಸ್ಕರಿಸುವಂತಹ ಪ್ರಜ್ಞೆ ಮೂಡಿತು. ಸಮಾಜದಲ್ಲಿ ಹೊಸ ಪಲ್ಲಟವಾಯ್ತು. ಹೊಸ ಚಲನೆ ಮೂಡಿತು. ಹೀಗಾಗಿ ತೇಜಸ್ವಿ ಹಿಂದಿನಂತೆ ಆಗದೇ ಒಂದು ಹೊಸ ಹೆದ್ದಾರಿಯನ್ನು ಬರಹಕ್ಕೆ ತಂದುಕೊಡಬೇಕು ಎಂಬ ಪ್ರಯತ್ನಕ್ಕೆ ಹೊರಳಿದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಎಲೆಕ್ಟ್ರಿಯೇಷನ್ ಹಾಗೂ ಸೌಂಡ್ ಸೂಪರ್ ವೈಸರ್ ಶ್ರೀನಿವಾಸ್, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್ ಹ್ಯಾರಿಸ್, ಪ್ರಜ್ವಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.