ಕೋವಿಡ್ ವಿರುದ್ಧದ ಸಮರಕ್ಕೆ ಲಾಕ್ಡೌನ್ ಒಂದೆ ಪರಿಹಾರವೇ..? ತಜ್ಞರು ಏನನ್ನುತ್ತಾರೆ..?
Team Udayavani, Apr 27, 2021, 12:26 PM IST
ಸಾಂದರ್ಭಿಕ ಚಿತ್ರ
ನವದೆಹಲಿ : ರಾಜ್ಯದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ, ಕೋವಿಡ್ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ 14 ದಿನಗಳ ಕಠಿಣ ಕರ್ಫ್ಯೂ ಜಾರಿಗಿಳಿಸಿ ಆದೇಶ ಹೊರಡಿಸಿದೆ.
ಓದಿ : ಅದ್ಭುತ ಕ್ಯಾಚ್ ಹಿಡಿದರೂ ಟೀಕೆ ಎದುರಿಸಿದ ಪಂಜಾಬ್ ಕಿಂಗ್ಸ್ ನ ರವಿ ಬಿಷ್ಣೋಯ್
ಇನ್ನು, ಕೋವಿಡ್ ನ ಕಾರಣದಿಂದಾಗಿ ದೇಶದ ಬಹುತೇಕ ಎಲ್ಲಾ ಮೆಟ್ರೋ ಸಿಟಿಗಳು ಸ್ತಬ್ಧವಾಗಿವೆ. ಹಲವು ರಾಜ್ಯಗಳು ಲಾಕ್ಡೌನ್, ಹಾಫ್ ಲಾಕ್ಡೌನ್, ವೀಕೆಂಡ್ ಲಾಕ್ಡೌನ್, ನೈಟ ಕರ್ಫ್ಯೂ ಗೆ ಮೊರೆ ಹೋಗಿವೆ.
ದಿನವೊಂದಕ್ಕೆ ಸುಮಾರು 3.5 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲುತ್ತಿದ್ದು, ಮತ್ತೆ ಆತಂಕ ಸೃಷ್ಟಿಯಾಗಿದೆ. ದೇಶದಾದ್ಯಂತ ಮತ್ತೊಮ್ಮೆ ಕಠಿಣ ಲಾಕ್ಡೌನ್ ಹೇರಲಾಗುತ್ತದೆಯೇ ಎಂಬ ಪ್ರಶ್ನೆ ಜನರನ್ನು ಸಾಮಾನ್ಯವಾಗಿ ಕಾಡುತ್ತಿದೆ.
ಬೆಂಗಳೂರಿನ ಪಿ ಹೆಚ್ ಎ ಎಫ್ಐ ಲೈಫ್ ಕೇರ್ ಮತ್ತು ಎಪಿಡೊಮಲೋಜಿ ತಜ್ಞ ಡಾ. ಗಿರಿಧರ ಬಾಬು, ಕೋವಿಡ್ ಸೋಂಕನ್ನು ಹತೋಟಿಗೆ ತರಲು ಲಾಕ್ಡೌನ್ ಒಂದೇ ಅಸ್ತ್ರವಲ್ಲ. ಕೋವಿಡ್ ಸೋಂಕಿನ ರೂಪಾಂತರಿ ಅಲೆ ವಿಪರೀತ ವೇಗವಾಗಿ ಹಬ್ಬುತ್ತಿದ್ದು, ಇದಕ್ಕೆ ಏನು ಕಾರಣ, ಅದರ ಸ್ವರೂಪ ಯಾವುದು? ಎಂಬುವುದನ್ನು ಮೊದಲು ನೋಡಬೇಕಾಗಿದೆ. ವಿಪರೀತ ಪ್ರಮಾಣದಲ್ಲಿ ಕೇಸ್ ಗಳು ದಾಖಲಾಗುತ್ತಿರುವಲ್ಲಿ ಲಾಕ್ಡೌನ್ ಘೋಷಣೆ ಮಾಡುವುದು ಉತ್ತಮ ಎಂದಿದ್ದಾರೆ.
ಇನ್ನು, ಕರ್ನಾಟಕ ಕೊವಿಡ್ ಟಾಸ್ಕ್ ಫೋರ್ಸ್ ವಿಶೇಷ ಸಮಿತಿ ಸದಸ್ಯ ಡಾ. ವಿಶಾಲ್ ರಾವ್, ಲಾಕ್ಡೌನ್ ನಿಂದಾಗಿ ಲಸಿಕೆ ಅಭಿಯಾನದ ಮೇಲೆ ಪರಿಣಾಮ ಬೀರುತ್ತದೆ. ಹೀಗಿರುವಾಗ ಕೋವಿಡ್ ವಿರುದ್ಧದ ಸಮರಕ್ಕೆ ಲಾಕ್ಡೌನ್ ನ ಪರ್ಯಾಯವಾಗಿ ಬೇರೆ ಯೋಜನೆ ರೂಪಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಓದಿ : ಲಾಕ್ ಡೌನ್ ಇದ್ದರೂ ಲಸಿಕೆ ಕೊಡುವುದನ್ನು ಮುಂದುವರೆಸುತ್ತೇವೆ: ಕೆ ಸುಧಾಕರ್
ನವ ದೆಹಲಿಯ ವೈರಾಲಜಿ ವಿಶೇಷ ತಜ್ಞ ಡಾ. ಶಹೀದ್ ಜಮೀಲ್, ಫುಲ್ ಲಾಕ್ಡೌನ್ ಸಮಂಜಸವಾದದ್ದಲ್ಲ. ಎಲ್ಲಿ ಕೋವಿಡ್ ಸೋಂಕು ನಿಯಂತ್ರಣ ಮೀರಿ ಹರಡುತ್ತಿದೆಯೋ ಅಲ್ಲಿ ಕಠಿಣ ಕ್ರಮ ಜಾರಿಗೆ ತರುವುದು ಉತ್ತಮ. ದೇಶದಾದ್ಯಂತ ಲಾಕ್ಡೌನ್ ಮಾಡಿದರೇ, ಜನ ಜೀವನ ಮತ್ತೆ ಗಂಭೀರ ಪರಿಸ್ಥಿತಿಗ ತಲುಪುತ್ತದೆ ಎನ್ನುವುದರಲ್ಲಿ ಸಂಶಯ ಬೇಕಾಗಿಲ್ಲ ಎಂದು ಅವರು ಹೇಳಿರುವುದನ್ನ ಸುದ್ದಿ ಸಂಸ್ಥೆ ಜಿ ನ್ಯೂಸ್ ವರದಿ ಮಾಡಿದೆ.
ಕಳೆದೊಂದು ವಾರದಿಂದ ಕೋವಿಡ್ ಸೊಂಕು ದೇಶದಲ್ಲಿ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಮೆಡಿಕಲ್ ತುರ್ತು ಪರಿಸ‍್ಥಿತಿ ಎದುರಾಗಿದೆ. ಆಕ್ಸಿಜನ್ ಕೊರತೆಯಿಂದಾಗಿ ಸಾವಿನ ಸಂಖ್ಯೆಯೂ ಕೂಡ ಏರಿಕೆಯಾಗುತ್ತಿದೆ ಎಂಬ ವರದಿಗಳನ್ನು ಸುದ್ದಿ ಸಂಸ್ಥೆಗಳು ವರದಿ ಮಾಡುತ್ತಿವೆ.
ಒಟ್ಟಿನಲ್ಲಿ ಕೋವಿಡ್ ಸೋಂಕಿನ ರೂಪಾಂತರಿ ಅಲೆ ದೇಶವನ್ನು ಮತ್ತಷ್ಟು ಬೆಚ್ಚಿ ಬೀಳಿಸಿದ್ದು, ಲಾಕ್ಡೌನ್ ಮತ್ತೆ ದೇಶದಲ್ಲಿ ಹೇರಿಕೆಯಾದರೇ ಮುಂದೇನು..? ಎಂಬ ಚಿಂತೆ ಜನರಲ್ಲಿ ಕಾಡಿದೆ.
ಓದಿ : ಕೊರೊನಾಜನಕ ಕಥೆಗಳು: ಸೋಂಕಿಗೆ ಬಲಿಯಾದ ಇಬ್ಬರ ಅಂತ್ಯಕ್ರಿಯೆ ನಡೆದಿದ್ದು ಹೀಗೆ.. :
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.