ವೇಗ ಪಡೆದ ಕೋವಿಡ್ 2ನೇ ಅಲೆ
Team Udayavani, Apr 27, 2021, 1:32 PM IST
ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯು ವೇಗ ಪಡೆಯುತ್ತಿದ್ದು, ಪ್ರತಿದಿನ ಸೋಂಕಿನ ಪ್ರಕರಣ ಸಾವಿರ ಗಡಿಯತ್ತ ಸಾಗುತ್ತಿದೆ. ಇದರಿಂದಸಾರ್ವಜನಿಕರ ಆತಂಕ ಹೆಚ್ಚುವಂತೆ ಮಾಡಿದೆ.
ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಎಷ್ಟೇಪ್ರಯತ್ನಪಟ್ಟರೂ ಸೋಂಕಿನ ಪ್ರಮಾಣ ತಗ್ಗಿಸಲುಸಾಧ್ಯವಾಗುತ್ತಿಲ್ಲ. ಮೊದಲ ಅಲೆಗಿಂತ ಎರಡನೇಅಲೆಯ ನಿಯಂತ್ರಣ ಕಷ್ಟ ಎನಿಸುತ್ತಿದೆ. ಇದರಜತೆಗೆ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, 200ರ ಗಡಿಯತ್ತ ಸಾವಿನ ಸಂಖ್ಯೆ ಸಾಗಿದೆ.
ಪ್ರಕರಣ ಹೆಚ್ಚಳ: ಪ್ರತಿದಿನ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆಯೂಹೆಚ್ಚಾಗಿದ್ದು, ಸಮುದಾಯದ ಹರಡುವಿಕೆಯಿಂದ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ನಗರದಿಂದ ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಟ್ಟಿರುವ ಕೋವಿಡ್ ಕೊಂಡಿಯನ್ನು ಕತ್ತರಿಸಲು ಸಾಧ್ಯವಾಗದಿರುವುದು ಪ್ರಕರಣಗಳು ಹೆಚ್ಚಳಕ್ಕೆ ಕಾರಣವಾಗಿದೆ.
ಈಗಾಗಲೇ ಗ್ರಾಮೀಣ ಪ್ರದೇಶಕ್ಕೂ ಹರಡಿರುವ ಸೋಂಕಿನಿಂದ ಕಂಗೆಟ್ಟಿರುವ ಗ್ರಾಮೀಣ ಜನರು ಪ್ರತಿದಿನ ಕೋವಿಡ್ ಪರೀಕ್ಷಾ ಕೇಂದ್ರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಭಯದ ವಾತಾವರಣ ನಿರ್ಮಾಣಗೊಂಡಿದ್ದು, ಪರೀಕ್ಷೆ ಮಾಡಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ.
ಪರೀಕ್ಷೆ ಸಂಖ್ಯೆ ಹೆಚ್ಚಿದಂತೆ ಸೋಂಕಿನ ಪ್ರಕರಣ ಹೆಚ್ಚುತ್ತಿವೆ. ಕಳೆದ ಐದಾರು ದಿನಗಳಿಂದ ಏರುಗತಿಯಲ್ಲಿ ಸೋಂಕಿನ ಪ್ರಕರಣ ದಾಖಲಾಗುತ್ತಿವೆ. ಕಳೆದ ಮೂರು ದಿನಗಳಿಂದ 500ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು,ಜಿಲ್ಲೆಯ ಜನರನ್ನು ದಿಗಿಲು ಹುಟ್ಟಿಸುವಂತೆ ಮಾಡಿದೆ.
ನಿಯಂತ್ರಣಕ್ಕೆ ಸಿಗದಂತಾಗಿದೆ: ಮೊದಲ ಅಲೆಯ ಸೋಂಕು ಹರಡುತ್ತಿದ್ದಂತೆ ಜಿಲ್ಲಾಡಳಿತಕೈಗೊಂಡ ಕ್ರಮಗಳಿಂದ ಸೋಂಕು ನಿಯಂತ್ರಣಕ್ಕೆಬಂದಿತ್ತು. ಅಲ್ಲದೆ, ರಾಜ್ಯದಲ್ಲಿಯೇ ಜಿಲ್ಲೆ ಮಾದರಿಜಿಲ್ಲೆಯಾಗಿ ಗುರುತಿಸಿಕೊಂಡಿತ್ತು. ಸೋಂಕು ಹಾಗೂ ಸಾವಿನ ಪ್ರಮಾಣ ರಾಜ್ಯದಲ್ಲಿಯೇ ಕಡಿಮೆಇತ್ತು. ಆದರೆ ಎರಡನೇ ಅಲೆಯ ಸೋಂಕು ನಿಯಂತ್ರಣಕ್ಕೆ ಬಾರದಂತಾಗಿದೆ.
ವಾರಾಂತ್ಯ ಲಾಕ್‌ಡೌನ್‌ಗೂ ಕಡಿಮೆಯಾಗದ ಸೋಂಕು: ಜಿಲ್ಲೆಯಲ್ಲಿ ವಾರಾಂತ್ಯ ಲಾಕ್‌ಡೌನ್‌ಗೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದರು.ಆದರೂ ಸೋಂಕಿನ ಕೊಂಡಿ ಕತ್ತರಿಸಲು ಸಾಧ್ಯವಾಗಿಲ್ಲ.ಕಳೆದ ಎರಡು ದಿನಗಳಿಂದ ಸೋಮವಾರ ಹೆಚ್ಚಿನ ಸೋಂಕಿನ ಪ್ರಕರಣ ದಾಖಲಾಗಿವೆ.
929 ಮಂದಿಗೆ ಪಾಸಿಟಿವ್: ದಿನದಿಂದ ದಿನಕ್ಕೇ ಏರಿಕೆಯಾಗುತ್ತಿರುವ ಸೋಂಕಿನ ಪ್ರಕರಣಗಳುಸೋಮವಾರ ಸಾವಿರ ಗಡಿಯತ್ತ ಸಾಗಿದ್ದು, ಒಂದೇದಿನ 929 ಮಂದಿಗೆ ದೃಢಪಟ್ಟಿದೆ. ಮಂಡ್ಯ 398, ಮದ್ದೂರು 123, ಮಳವಳ್ಳಿ 83, ಪಾಂಡವಪುರ 67,ಶ್ರೀರಂಗಪಟ್ಟಣ 72, ಕೆ.ಆರ್.ಪೇಟೆ 72, ನಾಗ ಮಂಗಲ 99 ಹಾಗೂ ಹೊರ ಜಿಲ್ಲೆಯ 15 ಮಂದಿಗೆಸೋಂಕು ದೃಢಪಟ್ಟಿದೆ. ಇದುವರೆಗೂ ಜಿಲ್ಲೆಯಾದ್ಯಂತ 26,503 ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.