ನೋಕಿಯಾ 1100 ಮತ್ತು ಭಾವನಾತ್ಮಕ ನಂಟು: ಸಾರ್ವಕಾಲಿಕ ದಾಖಲೆ ಬರೆದಿದೆ ಈ ಪುಟಾಣಿ ಮೊಬೈಲ್ !


Team Udayavani, Apr 28, 2021, 9:00 AM IST

nokia-1

ಒಮ್ಮೆ15-20 ವರುಷದ  ಹಿಂದೆ ಹೋಗಿ ಬರೋಣ. ಥೇಟ್ ಸೂರ್ಯ, ಸಮಂತಾ ಅಭಿನಯದ ‘24’ ಸಿನಿಮಾದ ಹಾಗೆ. ಆಗ ಬೆರಳುಗಳಲ್ಲಿ ಮಾತನಾಡದೆ, ಬಾಯಲ್ಲೇ ಮಾತನಾಡುತ್ತಿದ್ದೇವು..! ಅಪೂರ್ವ ಕ್ಷಣಗಳನ್ನು ಮೊಬೈಲ್ ನಲ್ಲಿ  ಸೆರೆಹಿಡಿಯದೆ, ಮನದಲ್ಲೇ ಚಿತ್ರಿಸುತ್ತಿದ್ದೇವು..! ಸದಾ ಫೋನ್ ನಲ್ಲಿ ಮುಳುಗದೆ, ಮೈದಾನದಲ್ಲಿ ಬೆವರಿಳಿಯುವಂತೆ ಆಟವಾಡುತ್ತಿದ್ದೆವು.. ! ವಾಟ್ಸಪ್ ನಲ್ಲಿ ಹರಟದೆ, ಪ್ರತಿ ಸಂಜೆ ಸ್ನೇಹಿತರೊಡಗೂಡಿ ಮನಬಿಚ್ಚಿ ಮಾತನಾಡುತ್ತಿದ್ದೆವು..! ಈಗ ಕಾಲ ಎಷ್ಟು ಬದಲಾಗಿದೆ ! ಓಡುತ್ತಿರುವ ಬದುಕಿನಲ್ಲಿ ಇಷ್ಟೊಂದು ಬದಲಾವಣೆ ಆಗಬಹುದೆಂದು ಕನಸಿನಲ್ಲೂ ಊಹಿಸಿರಲಿಲ್ಲ !

ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್  ಹೇಳುವಂತೆ “ಪುಸ್ತಕ ಹೇಳುವುದು, ತಲೆತಗ್ಗಿಸಿ ನನ್ನ ನೋಡು, ನಿನ್ನನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ..” ಜೊತೆಗೆ ಇದ್ದ ಫೋನ್ ಗಳು ಹೇಳುತ್ತವೆ ತಲೆತಗ್ಗಿಸಿ ನನ್ನನ್ನು ನೋಡು, ನಿನ್ನನ್ನು ತಲೆ ಎತ್ತದಂತೆ ಮಾಡುತ್ತೇನೆ !! ಈ ಮಾತು ಇಂದಿಗೆ ಪ್ರಸ್ತುತ.

ಮೊಬೈಲ್ ಫೋನ್ ಎಂದ ತಕ್ಷಣ ನಮ್ಮ ಗಮನ ಹೋಗುವುದು ಸ್ಮಾರ್ಟ್ ಪೋನ್ ಗಳ ಕಡೆಗೆ. ಪ್ರತಿವಾರವೂ ಮಾರುಕಟ್ಟೆಗೆ ಬರುವ ಹೊಸ ಸ್ಮಾರ್ಟ್ ಫೋನ್ ಗಳನ್ನೂ ಅವುಗಳಲ್ಲಿರುವ ನೂರೆಂಟು ವೈಶಿಷ್ಟ್ಯಗಳನ್ನೂ ನೋಡಿದವರಲ್ಲಿ ಫೋನ್ ಅಂದರೆ ಸ್ಮಾರ್ಟ್ ಪೋನ್ ಎನ್ನುವ ಅಭಿಪ್ರಾಯ ಮೂಡುವುದು ಸಹಜವೇ. 6 ತಿಂಗಳಿಗೊಮ್ಮೆ ಫೋನ್ ಬದಲಾಯಿಸುವವರು ಇದ್ದಾರೆ. ಅದರೆ ಹತ್ತಿಪ್ಪತ್ತು ವರುಷಗಳ ಹಿಂದೆ ಇದ್ದದ್ದು ನೋಕಿಯಾ ಮತ್ತು ಮೋಟೋರೋಲಾ ಮಾತ್ರ. ನೋಕಿಯಾ ಸ್ವಲ್ಪ ಅಗ್ಗದ ಸೆಟ್, ಮೋಟೋರೋಲಾ ಸ್ವಲ್ಪ ಮದ್ಯಮವರ್ಗದ ಸೆಟ್.  ಅದೇ ಮಾಡೆಲ್ ಅನ್ನು ಇಂದಿನ ಮಾರುಕಟ್ಟೆಯಲ್ಲಿ ಕೇಳುವವರಿಲ್ಲ. ಏಕೆಂದರೆ ಈಗ ಸ್ಮಾರ್ಟ್ ಪೋನ್ ಕಾಲ.

ಆ ಕಾಲದಲ್ಲಿ ನೋಕಿಯಾ 1100 ಮಾಡಿದ ಮೋಡಿ ಮರೆಯಲು ಸಾಧ್ಯವೇ ?

ಬ್ಲ್ಯಾಕ್ ಅಂಡ್ ವೈಟ್ ಪರದೆ, ದೊಡ್ಡ ದೊಡ್ಡ ಬಟನ್, ಸ್ನೇಕ್ ಗೇಮ್, ಕ್ಲಾಸಿಕ್ ನೋಕಿಯಾ ಟೋನ್. ನೆನಪಾಗುತ್ತಿದೆಯಾ ನೋಕಿಯಾ 1100 ! ಹೇಗೆ ತಾನೇ ಮರೆಯಲು ಸಾಧ್ಯ. ರಿಂಗ್ ಟೋನ್ ಗಳನ್ನೇ ಹಾಡಿನಂತೆ  ಪದೇ ಪದೇ ಕೇಳುತ್ತಾ ಸಂತೋಷಪಡುತ್ತಿದ್ದ ದಿನಗಳು ಅವು. ಹಲವು ಜನರು ಮೊಬೈಲ್ ಗೆ  ಸಣ್ಣ ದಾರ ಕಟ್ಟಿ ಜೇಬಿನಿಂದ ಹೊರಗೆ ನೇತಾಡುವಂತೆ ಇಟ್ಟುಕೊಳ್ಳುತ್ತಿದ್ದರು. ಆಗ ಮೊಬೈಲ್‌ಗೆ ಇದ್ದದ್ದು ಎರಡೂವರೆ  ಸಾವಿರ ರೂಪಾಯಿ.

ಕಾಲೇಜಿನ ಮೆಟ್ಟಿಲು ಏರಿದ್ದ ವಿದ್ಯಾರ್ಥಿಗಳ ಬಳಿ ನೋಕಿಯಾ ಕಂಪನಿಯ 1100, 1600 ಹಾಗು 6600 ಸರಣಿಯ ಮೊಬೈಲ್ ಫೋನ್ ಗಳು ಹೆಚ್ಚಾಗಿ  ರಾರಾಜಿಸುತ್ತಿದ್ದವು. ಪ್ರೇಮಿಗಳಿಗೆ  ಮೊಬೈಲ್ ಬಂದ ನಂತರವಂತೂ ಸ್ವರ್ಗಕ್ಕೆ ಮೂರೇ ಗೇಣು ಸಿಕ್ಕಂಗಾಗಿತ್ತು. ಟೆಕ್ಸ್ಟ್ ಮೆಸೇಜ್ ಗಾಗಿ ಕಾಯುವುದು, ಫಾರ್ವರ್ಡ್ ಮೆಸೇಜ್ ಕಳುಹಿಸುವುದು ಇವೆಲ್ಲಾ ನಿರಂತರವಾಗಿತ್ತು. ಆಗಿನ ಸ್ನೇಕ್ ಗೇಮ್ ಜಗತ್ಪ್ರಸಿದ್ಧವಾಗಿತ್ತು.

ಈ ಪುಟಾಣಿ ಫೋನುಗಳನ್ನು ಫೀಚರ್ ಫೋನ್ ಗಳೆಂದು ಗುರುತಿಸಲಾಗುತ್ತದೆ. ನೋಕಿಯಾ 1100 ಜಗತ್ತು ಅಭಿವೃದ್ಧಿಯಾಗಲು ಸಹಾಯವಾಗಿತ್ತು. ಇದರ ಫೀಚರ್ ಗಳು ಹಿಂದಿನ 5110, 3210, 3310 ಮಾದರಿಗೆ ಹೋಲುತ್ತದೆ.. 2003ರ ಆಗಸ್ಟ್ 27 ರಲ್ಲಿ ಪ್ರಾರಂಭವಾದಾಗಿನಿಂದ ಈವರೆಗೆ ಪ್ರಪಂಚದಲ್ಲಿ  ಅತ್ಯುತ್ತಮವಾಗಿ ಮಾರಾಟವಾದ ಫೋನ್ ಹ್ಯಾಂಡ್ಸೆಟ್  ಎಂಬ ಹೆಗ್ಗಳಿಕೆಯನ್ನು ಹೊಂದಿದೆ.  ಇದು ಸಾರ್ವಕಾಲಿಕ ದಾಖಲೆ. 250 ಮಿಲಿಯನ್‌ಗಿಂತ ಹೆಚ್ಚು ಜನರು ಇದನ್ನು ಖರೀದಿಸಿದ್ದರು. ನೋಕಿಯಾ ಮೊಬೈಲ್ ಸರಣಿಯಲ್ಲಿ  ಹೆಚ್ಚು ಬಳಕೆದಾರರನ್ನು ಹೊಂದಿದ್ದ ಖ್ಯಾತಿ ಈ ಮೊಬೈಲ್ ನದ್ದು. 2011 ರಲ್ಲಿ ಜಗತ್ತಿನಾದ್ಯಂತ ಈ ಮೊಬೈಲ್ ಅನ್ನು 25 ಕೋಟಿ ಮಂದಿ ಬಳಸಿದ್ದರು.

ಹೆಚ್ಚು ಆಧುನಿಕ ಮತ್ತು ಸುಧಾರಿತ ತಂತ್ರಜ್ಞಾನ ಮಾರುಟ್ಟೆಯಲ್ಲಿ ಲಭ್ಯವಿರುವ ಸಮಯದಲ್ಲೇ ನೋಕಿಯಾ 1100 ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿತು. ಆ್ಯಪಲ್‌ನ  ಬೆಸ್ಟ್ ಸೆಲ್ಲಿಂಗ್ ಮಾಡೆಲ್ ಐಫೋನ್ 5 ಎಸ್ (70 ಮಿಲಿಯನ್) ಸಹ ಈ ಮಟ್ಟಿಗೆ ಮಾರಾಟವಾಗಿರಲಿಲ್ಲ.

ಈ ಮೊಬೈಲ್ ಗಳಲ್ಲಿ ಸೀಮಿತ ಸೌಲಭ್ಯಗಳಿರುವುದರಿಂದ ಇವುಗಳ ಬ್ಯಾಟರಿ ಬಾಳಿಕೆಯೂ ಹೆಚ್ಚಾಗಿತ್ತು.  ಫೀಚರ್ ಫೋನ್ ಗಳನ್ನು ಒಮ್ಮೆ ಚಾರ್ಜ್ ಮಾಡಿದರೆ  ದಿನಗಟ್ಟಲೆ ಬಳಸುವುದು ಸಾಧ್ಯವಾಗುವುದು ಇದೇ ಕಾರಣದಿಂದ. ಇದರ ಮೊದಲ ಡಿಸೈನ್ ಆಗಿದ್ದು ಕ್ಯಾಲಿಫೋರ್ನಿಯಾದಲ್ಲಿ.

ಪ್ಲ್ಯಾಷ್ ಲೈಟ್ ಆರಂಭವಾಗಿದ್ದೆ ನೋಕಿಯಾದಲ್ಲಿ, ಸಿ ಬಟನ್ ಅನ್ನು ಒತ್ತಿ ಹಿಡಿದರೆ ಅದು ಅನ್ ಆಗುತ್ತಿತ್ತು. ಎರಡು ಬಾರಿ ಒತ್ತಿದರೆ ಕೀ ಪ್ಯಾಡ್ ಲಾಕ್  ಆಗುತ್ತಿತ್ತು. 1100 ಮತ್ತು 1101 ರಲ್ಲಿ ಮಾತ್ರ ಮೋನೋಪೋನ್ ರಿಂಗ್ ಟೋನ್ ಗಳಿದ್ದವು.  36  ರಿಂಗ್ ಟೋನ್ ಗಳು  ಮೊದಲೇ ಇನ್ಸ್ಟಾಲ್ ಆಗಿರುತ್ತಿದ್ದವು. ಅದರ ಜೊತೆಗೆ ನೋಕಿಯಾ ಟ್ಯೂನ್ 19ನೇ ಶತಮಾನದ ಗಿಟಾರ್ ಸ್ವರವಾಗಿದ್ದು ಸಂಗೀತಗಾರ ಫ್ರಾನ್ಸಿಸ್ಕೋ ಟರೆಗಾ ಅವರ ಸಂಯೋಜನೆಯಾಗಿದೆ. Grande Valse ಎಂದೇ ಟೋನ್ ಹೆಸರಿಸಲಾಗಿತ್ತು. 1998ರಲ್ಲಿ ನೋಕಿಯಾ ಟ್ಯೂನ್ ಎಂದು ಮರುನಾಮಕರಣ ಮಾಡಲಾಯಿತು

ನೋಕಿಯಾ ಕಾರ್ಪೊರೇಟ್ ಫಾಂಟ್ (typeface) AgfaMonotype Nokia Sans ಫಾಂಟ್ ಆಗಿದೆ. ಇದನ್ನು ಎರಿಕ್ ಸೈಪ್ಕರ್ ಮನ್  ವಿನ್ಯಾಸಗೊಳಿಸಿದ್ದಾರೆ. Nokianvirta ಎಂಬ ಹೆಸರಿನ ನದಿಯಿಂದ ‘ನೋಕಿಯಾ’ ಪದವನ್ನು ಮೊಬೈಲ್ ಫೋನ್ ಕಂಪನಿಗೆ ಇಡಲಾಗಿದೆ.

ಇನ್ನೊಂದು ಪ್ರಮುಖ ಅಂಶವನ್ನು ಗಮನಿಸುವುದಾದರೆ ಆಗಿನ ಮೊಬೈಲ್ ನಂಬರ್ ಗಳನ್ನು ಯಾವ ಕಂಪೆನಿಯದೆಂದು (ಮೊಬೈಲ್ ಸರ್ವಿಸ್ ಪ್ರೈವೈಡರ್) ಸುಲಭವಾಗಿ ಗುರುತಿಸಬಹುದಾಗಿತ್ತು. 9448 ಅಂದರೆ ಬಿ ಎಸ್ ಎನ್ ಎಲ್, 9845 ಅಂದರೆ ಏರ್ ಟೆಲ್ , 9886 ಅಂದರೆ ಹಚ್ ಎಂದು ಅರ್ಥವಾಗುತ್ತಿದ್ದವು. ಆದರೆ ಈಗ portability ಬಂದ ನಂತರ ಯಾವ ಕಂಪೆನಿಯ ನಂಬರ್ ಎಂದು ಸಾಮಾನ್ಯರಿಗೆ ಗುರುತಿಸಲೇ ಕಷ್ಟಸಾಧ್ಯ.

ಈ ಎಲ್ಲಾ ಅಂಶಗಳನ್ನು ಗಮನಿಸಿ ಜನರು ಹಿಂದೊಮ್ಮೆ ಬಳಸಿದ್ದ ಫೀಚರ್ ಫೋನ್ ಗಳೊಡನೆ ಗ್ರಾಹಕರಿಗೆ ಇರಬಹುದಾದ ಭಾವನಾತ್ಮಕ ನಂಟನ್ನು ಬಳಸಿಕೊಳ್ಳುವ ಪ್ರಯತ್ನಗಳೂ ಇತ್ತೀಚಿಗೆ ನಡೆದಿವೆ. ನೋಕಿಯಾ ಸಂಸ್ಥೆಯ ಜನಪ್ರಿಯ ಪೋನ್ ಗಳನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸುವ ಶತಪ್ರಯತ್ನಗಳು ನಡೆಯುತ್ತಿವೆ. ಏನೇ ಅದರೂ ನೋಕಿಯಾ 1100 ಮಾಡಿದ ಮೋಡಿ ಮರೆಯಲು ಸಾಧ್ಯವಿಲ್ಲ.  “ಕನೆಕ್ಟಿಂಗ್ ಪೀಪಲ್” ಎಂಬ ಟ್ಯಾಗ್ ಲೈನ್ ನಲ್ಲಿ ಜನಾನುರಾಗಿಯಾಗಿತ್ತು.

ಮಿಥುನ್ ಮೊಗೇರ

 

ಟಾಪ್ ನ್ಯೂಸ್

Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ

Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Sydney Test: ಕ್ರಿಕೆಟಿಗರನ್ನು ಭೇಟಿಯಾದ ಆಸೀಸ್‌ ಪ್ರಧಾನಿ

Sydney Test: ಕ್ರಿಕೆಟಿಗರನ್ನು ಭೇಟಿಯಾದ ಆಸೀಸ್‌ ಪ್ರಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwewqe

2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…

Year Ender: 2024ರಲ್ಲಿ ಬಣ್ಣದ ಲೋಕದಿಂದ ದೂರ ಉಳಿದ ಬಿಟೌನ್‌ ಸ್ಟಾರ್ ಗಳಿವರು

Year Ender: 2024ರಲ್ಲಿ ಬಣ್ಣದ ಲೋಕದಿಂದ ದೂರ ಉಳಿದ ಬಿಟೌನ್‌ ಸ್ಟಾರ್ ಗಳಿವರು

Karnatakaದಿಂದ ಕಕ್ಷೆಗೆ: ISRO ಸ್ಪೇಡೆಕ್ಸ್ ಜೊತೆ ನಭಕ್ಕೆ ಚಿಮ್ಮಲಿವೆ ಆದಿಚುಂಚನಗಿರಿ SJC

Explainer: Karnatakaದಿಂದ ಕಕ್ಷೆಗೆ-ಬಾಹ್ಯಾಕಾಶದಲ್ಲಿ ಡಾಕಿಂಗ್‌ ಕಸರತ್ತು…ISRO ಸಾಹಸ

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ

Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ

byndoor

Siddapura: ಬೈಕಿಗೆ ಕಾರು ಡಿಕ್ಕಿ; ಬೈಕ್‌ ಸವಾರ ಗಂಭೀರ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

POlice

Udupi: 9 ಲೀಟರ್ ಗೋವಾ ಮದ್ಯ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.