ಇಂದಿರಾ ಆಪ್ತ ಸಿದ್ನಾಳ ಟಾಪ್ ಲೀಡರ್
80-90ರ ದಶಕದ ಉತ್ತರ ಕರ್ನಾಟಕದ ಪ್ರಮುಖ ನಾಯಕಕೃಷಿ, ವಕೀಲಿಕಿಯಿಂದ ರಾಜಕೀಯದತ್ತ ಸಿದ್ನಾಳ ಹೆಜ್ಜೆ
Team Udayavani, Apr 28, 2021, 4:28 PM IST
ವರದಿ: ಭೈರೋಬಾ ಕಾಂಬಳೆ
ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ನಾಲ್ಕು ಬಾರಿ ಸಂಸದರಾಗಿದ್ದ ಎಸ್.ಬಿ. ಸಿದ್ನಾಳ ಅವರು ಉತ್ತರ ಕರ್ನಾಟಕದಲ್ಲಿ ಜಾತ್ಯಾತೀತ ರಾಜಕಾರಣಿ ಎಂದೇ ಹೆಸರುವಾಸಿಯಾಗಿದ್ದರು.
ಇಂದಿರಾ ಗಾಂಧಿ ಯ ಅಪ್ಪಟ ಭಕ್ತರಾಗಿದ್ದ ಸಿದ್ನಾಳ ಸುಮಾರು ಒಂದೂವರೆ ದಶಕಗಳ ಕಾಲ ಬೆಳಗಾವಿಯನ್ನು ಆಳಿದ್ದರು. ಎಸ್.ಬಿ. ಸಿದ್ನಾಳ ಅವರು ನಾಲ್ಕು ಬಾರಿ ಸಂಸದರಾಗಿ ಬೆಳಗಾವಿಯ ಕೋಟೆಯಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದರು. ಸಿದ್ನಾಳ ತಮ್ಮ 44ನೇ ವಯಸ್ಸಿನಲ್ಲಿ ಸಂಸದರಾಗಿದ್ದು, ಇಂದಿರಾ ಗಾಂಧಿಯ ಅಪ್ಪಟ ಭಕ್ತರಾಗಿದ್ದು, ಇಂದಿರಾರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ರಾಜಕೀಯದಲ್ಲಿ ಸಿದ್ನಾಳ ಹಿಡಿತ: 80 ಹಾಗೂ 90ರ ದಶಕದಲ್ಲಿ ಸಿದ್ನಾಳ ಎಂದರೆ ಈ ಭಾಗದ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಹೊರ ಹೊಮ್ಮಿದ್ದರು. ಜಾತಿಗೆ ಲಿಂಗಾಯತ ಎಂಬ ಹಣೆಪಟ್ಟಿ ಇದ್ದರೂ ಇದನ್ನು ತಮ್ಮ ಲಾಭಕ್ಕಾಗಿ ಎಂದಿಗೂ ಬಳಸಿಕೊಂಡಿರಲಿಲ್ಲ. ಜಾತ್ಯಾತೀತ ನಾಯಕರೆಂದೇ ರಾಜಕೀಯದಲ್ಲಿ ಹಿಡಿತ ಸಾಧಿಸಿದ್ದರು.
ಮೂಲತಃ ಕೃಷಿಕರು ಹಾಗೂ ವಕೀಲರಾಗಿದ್ದ ಎಸ್.ಬಿ. ಸಿದ್ನಾಳ 1978ರಲ್ಲಿ ಬೆಳಗಾವಿಗೆ ಬಂದು 1979ರಲ್ಲಿ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು. ಬೆಳಗಾವಿಯಲ್ಲಿ ಕೆಲ ವರ್ಷಗಳ ಕಾಲ ವಕೀಲ ವೃತ್ತಿ ನಡೆಸಿದ್ದರು. ದೆಹಲಿ ನಾಯಕರೊಂದಿಗೆ ಒಡನಾಟ: ಬೈಲಹೊಂಗಲ ತಾಲೂಕಿನ ಚನ್ನಮ್ಮನ ಕಿತ್ತೂರು ವಿಧಾನಸಭಾ ಮತಕ್ಷೇತ್ರದಿಂದ 1972ರಲ್ಲಿ ಬಿ.ಡಿ. ಇನಾಮದಾರ ವಿರುದ್ಧ ಸ್ಪ ರ್ಧಿಸಿ ಎಸ್.ಬಿ. ಸಿದ್ನಾಳ ಸೋಲನುಭವಿಸಿದ್ದರು. ಇಲ್ಲಿಂದಲೇ ತಮ್ಮ ರಾಜಕೀಯ ಜೀವನ ರೂಪಿಸಿಕೊಳ್ಳುವತ್ತ ಹೆಜ್ಜೆ ಹಾಕಿದ್ದ ಸಿದ್ನಾಳ ವಕೀಲ ವೃತ್ತಿಯ ಜೊತೆಗೆ ರಾಜಕೀಯ ನಾಯಕರೊಂದಿಗೆ ನಿಕಟ ಸಂಪರ್ಕ ಆರಂಭಿಸಿದರು.
ಸಂಸದರ ಆಗುವ ಮುನ್ನವೇ ದೆಹಲಿಯ ಪ್ರಮುಖ ಘಟನಾಘಟಿ ನಾಯಕರು ಸಿದ್ನಾಳ ಅವರಿಗೆ ಪರಿಚಯವಿದ್ದರು. ಒಳ್ಳೆಯ ವಾಗ್ಮಿ ಆಗಿದ್ದ ಎಸ್.ಬಿ.ಸಿದ್ನಾಳ ಅವರು ರಾಜಕೀಯದಲ್ಲಿ ಅನೇಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಸಿದ್ನಾಳ ಅವರು ಲಿಂಗಾಯತರಾಗಿದ್ದರೂ ಜಾತಿ ರಾಜಕಾರಣ ಎಂದಿಗೂ ಮಾಡಿರಲಿಲ್ಲ. ಲಿಂಗಾಯತ ಇದ್ದರೂ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ವರ್ಗದವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ ಜಾತ್ಯಾತೀತ ನಾಯಕರಾಗಿದ್ದರು. ಇದು ಇಂದಿರಾ ಗಾಂಧಿ ಅವರಿಗೆ ಬಹಳ ಇಷ್ಟವಾಗಿತ್ತು. ಇದೇ ವೇಳೆ ಚಿಕ್ಕೋಡಿ ಸಂಸದರಾಗಿದ್ದ ಬಿ. ಶಂಕರಾನಂದ ಅವರೊಂದಿಗೆ ಸಿದ್ನಾಳಗೆ ಭಿನ್ನಾಭಿಪ್ರಾಯವಿತ್ತು. ಈ ಭಿನ್ನಾಭಿಪ್ರಾಯ ಹೆಚ್ಚು ತೋರಿಸಿಕೊಡುತ್ತಿರಲಿಲ್ಲ. ಪಕ್ಷದಲ್ಲಿ ನಾವೆಲ್ಲರೂ ಒಂದು ಎಂದೇ ಜನರ ಬಳಿ ಹೇಳಿಕೊಳ್ಳುತ್ತಿದ್ದರು.
ಸಿದ್ನಾಳ ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ವಕೀಲಿಕಿ ನಡೆಸುತ್ತಿದ್ದರೂ ಕೃಷಿಯನ್ನು ಎಂದಿಗೂ ಬಿಟ್ಟು ಕೊಟ್ಟಿರಲಿಲ್ಲ. ಬೆಳಗಾವಿಯಲ್ಲಿ ಭೂಸ್ವಾ ಧೀನ ವಕೀಲರೆಂದೇ ಖ್ಯಾತರಾಗಿದ್ದರು. ವಕೀಲಿಕಿ ಬಿಟ್ಟು ನಂತರದಲ್ಲಿ ರಾಜಕೀಯವನ್ನು ಅಪ್ಪಿಕೊಂಡಿದ್ದರು. ವಕೀಲರಾಗಿದ್ದಾಗ ಬೆಳಗಾವಿಯಲ್ಲಿ ಸಮಾರಂಭವೊಂದಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದ ವೈ.ವಿ. ಚಂದ್ರಚೂಡ ಅವರನ್ನು ಕರೆಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Madikeri: ರಾಜ್ಯದಲ್ಲೇ ಮೊಟ್ಟಮೊದಲ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.