ಬ್ಯಾಂಕಾಕ್ ನಿಂದ ಜಮ್ ನಗರ್ ಗೆ 3 ಆಮ್ಲಜನಕ ಟ್ಯಾಂಕರ್ ಗಳನ್ನು ತಲುಪಿಸಿದ ಐಎಎಫ್
Team Udayavani, Apr 28, 2021, 4:52 PM IST
ನವ ದೆಹಲಿ : ಕೋವಿಡ್ ನಿಂದ ತತ್ತರಿಸಿ ಹೋಗಿರುವ ಭಾರತಕ್ಕೆ ವಿದೇಶಗಳು ನೆರವಿನ ಹಸ್ತ ಚಾಚುತ್ತಿವೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ, ಭಾರತೀಯ ವಾಯುಪಡೆ (ಐ ಎ ಎಫ್) ಮೂರು ಆಮ್ಲಜನಕ ಟ್ಯಾಂಕರ್ ಗಳನ್ನು ಥೈಲ್ಯಾಂಡ್ ನ ಬ್ಯಾಂಕಾಕ್ ನಿಂದ ಗುಜರಾತ್ ನ ಜಮ್ ನಗರ್ ಗೆ ಬುಧವಾರ(ಏ. 28) ತಲುಪಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಸಿಂಗಾಪುರ್ ವಾಯುಪಡೆಯ ಎರಡು ಸಿ -130 ವಿಮಾನಗಳು ಒಟ್ಟು 256 ಆಮ್ಲಜನಕ ಸಿಲಿಂಡರ್ ಗಳನ್ನು ಪಶ್ಚಿಮ ಬಂಗಾಳದ ಪನಗರ್ ವಾಯುನೆಲೆಗೆ ತಲುಪಿಸಿವೆ ಎಂದು ಅವರು ಹೇಳಿದ್ದಾರೆ.
ಓದಿ : ಕೋವಿಡ್ 19 ವಿರುದ್ಧ ಹೋರಾಟ; ಭಾರತಕ್ಕೆ 10 ಮಿಲಿಯನ್ ಡಾಲರ್ ನೆರವು ಘೋಷಿಸಿದ ಕೆನಡಾ
ಮೆಡಿಕಲ್ ಆಕ್ಸಿಜನ್ ಮತ್ತು ಹಾಸಿಗೆಗಳ ಕೊರತೆಯಿಂದಾಗಿ ದೇಶದ ಹಲವಾರು ರಾಜ್ಯಗಳ ಆಸ್ಪತ್ರೆಗಳು ತತ್ತರಿಸುತ್ತಿರುವುದರಿಂದ ಭಾರತವು ಕೋವಿಡ್ ಸೋಂಕಿನ ಎರಡನೇ ಅಲೆಯೊಂದಿಗೆ ಹೋರಾಡುತ್ತಿದೆ.
ಮಂಗಳವಾರ, ಐಎಎಫ್ ದುಬೈ ಮತ್ತು ಸಿಂಗಾಪುರದಿಂದ ಒಂಬತ್ತು ಕ್ರಯೋಜೆನಿಕ್ ಆಮ್ಲಜನಕ ಟ್ಯಾಂಕರ್ ಗಳನ್ನು ವಿಮಾನದಲ್ಲಿ ಪನಗರ್ ಗೆ ತಲುಪಿತ್ತು.
ಆಕ್ಸಿಜನ್ ಟ್ಯಾಂಕರ್ ಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವಲ್ಲಿ ಐಎಎಫ್ ಕಾರ್ಯ ನಿರ್ವಹಿಸುತ್ತಿದೆ. ಆಗ್ರಾ, ಹಿಂಡನ್, ಭೋಪಾಲ್ ಮತ್ತು ಚಂಡೀಗಡದಿಂದ ತಲಾ ಒಂದು ಹಾಗೂ ರಾಂಚಿಗೆ ನಾಲ್ಕು ಆಮ್ಲಜನಕ ಟ್ಯಾಂಕರ್ ಗಳನ್ನು ತಲುಪಿಸಲು ಅದು ತನ್ನ ಸಿ -17 ವಿಮಾನವನ್ನು ಬಳಸಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇಂದೋರ್‌ನಿಂದ ರಾಯಪುರಕ್ಕೆ ಮತ್ತು ಭೋಪಾಲ್‌ನಿಂದ ಸೂರತ್ ಗೆ ತಲಾ ಎರಡು ಆಮ್ಲಜನಕ ಟ್ಯಾಂಕರ್ ಗಳನ್ನು ಸಾಗಿಸಲು ಮತ್ತೊಂದು ಸಿ -17 ವಿಮಾನವನ್ನು ಬಳಸಲಾಗಿದೆ. ಎರಡು ಆಮ್ಲಜನಕ ಟ್ಯಾಂಕರ್ ಗಳನ್ನು ಐ ಎ ಎಫ್ ಜೋಧಪುರದಿಂದ ಜಮ್ ನಗರಕ್ಕೆ ಸಾಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓದಿ : ಪರೀಕ್ಷೆ ನಡೆಯದೇ ಮುಂದಿನ ಪಾಠ! ರಾಣಿ ಚನ್ನಮ್ಮ ವಿವಿಯಿಂದ ಗೊಂದಲ !
ಇನ್ನು, ಮತ್ತೊಂದು ಸಿ -17 ವಿಮಾನವು ತಲಾ ನಾಲ್ಕು ಆಮ್ಲಜನಕ ಟ್ಯಾಂಕರ್ ಗಳನ್ನು ಇಂದೋರ್ ನಿಂದ ಜಮ್ ನಗರ್ ಗೆ ಮತ್ತು ಗ್ವಾಲಿಯರ್ ನಿಂದ ರಾಂಚಿಗೆ ತಲುಪಿಸಲಿದೆ.
ಮಂಗಳವಾರ, ಐ ಎ ಎಫ್ ಎಂಟು ಕ್ರಯೊಜೆನಿಕ್ ಆಮ್ಲಜನಕ ಸಿಲಿಂಡರ್ ಗಳನ್ನು ಹೈದರಾ ಬಾದ್ ನಿಂದ ಭುವನೇಶ್ವರಕ್ಕೆ, ಎರಡು ಭೋಪಾಲ್ ನಿಂದ ರಾಂಚಿಗೆ ಮತ್ತು ಎರಡು ಚಂಡೀಗಡದಿಂದ ರಾಂಚಿಗೆ ತಲುಪಿಸಲಾಗಿತ್ತು.
ದೇಶದಲ್ಲಿ ಆಕ್ಸಿಜನ್ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಸಿ – 17 ವಿಮಾನಗಳು ಕಳೆದ ಕೆಲವು ದಿನಗಳಿಂದ ದೇಶದಲ್ಲಿನ ಆಕ್ಸಿಜನ್ ತುಂಬಿಸುವ ಕೇಂದ್ರಗಳಿಂದ ಅಗತ್ಯವಿರುವಲ್ಲಿಗೆ ಪೂರೈಸುತ್ತಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಕಳೆದ ಒಂದು ದಿನದಲ್ಲಿ 3,60,960 ಹೊಸ ಕೋವಿಡ್ ಪ್ರಕರಣಗಳ ದಾಖಲೆ ಕಂಡಿದ್ದು ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,79,97,267 ಕ್ಕೆ ತಲುಪಿದೆ. ಇನ್ನು, ಕೋವಿಡ್ ಕಾರಣದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಎರಡು ಲಕ್ಷ ದಾಟಿದ್ದು, 3,293 ಸಾವುಗಳು ಕಳೆದ ಇಪ್ಪತ್ತ ನಾಲ್ಕುಗಳಲ್ಲಿ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಓದಿ : ಲಾಕ್ ಡೌನ್ ನಿಯಮ ಕಟ್ಟು ನಿಟ್ಟಾಗಿ ಜಿಲ್ಲೆಯಾದ್ಯಂತ ಜಾರಿಯಾಗಬೇಕು : ಸಚಿವ ಬಿ.ಎ.ಬಸವರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.