ಪಾಲಿಕೆ ಚುನಾವಣೆ: ಶೇ. 57ರಷ್ಟು ಮತದಾನ
Team Udayavani, Apr 28, 2021, 9:18 PM IST
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್‌ಗಳಿಗೆ ಮಂಗಳವಾರ ಮತದಾನ ನಡೆದಿದ್ದು, ಕಣದಲ್ಲಿರುವ 187 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಮತಯಂತ್ರಗಳಲ್ಲಿ ಭದ್ರಪಡಿಸಿದರು.
ಬೆಳಗ್ಗೆಯಿಂದ ನಡೆದ ಮತದಾನ ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಿಯುತವಾಗಿ ನಡೆದಿದ್ದು ಶೇ. 57.67ರಷ್ಟು ಮತದಾನವಾಗಿದೆ. ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್‌ಗಳಿಗೆ ಮಂಗಳವಾರ ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ನಗರದ ಬಾಪೂಜಿ ನಗರದ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗಳು, ಬಂಡಿಮೋಟ್ ಉಜ್ಜಯಿನಿ ಪ್ರೌಢಶಾಲೆ, ಇಂದಿರಾನಗರದ ಅಂಬೇಡ್ಕರ್ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗಳು ಬೆಳಗ್ಗೆಯೇ ಮತದಾರರಿಂದ ತುಂಬಿ ತುಳುಕುತ್ತಿದ್ದವು. ರಂಜಾನ್ ದಿನಗಳು ಮತ್ತು ಬೇಸಿಗೆಯೂ ಆಗಿದ್ದರಿಂದ ಬಹುತೇಕ ವಾರ್ಡ್‌ಗಳಲ್ಲಿ ಅಲ್ಪಸಂಖ್ಯಾತರು ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸಿದರು.
ಇಂದಿರಾನಗರದ ಅಂಬೇಡ್ಕರ್ ಪ್ರೌಢ, ಪ್ರಾಥಮಿಕ ಶಾಲೆಗಳಲ್ಲಿನ ಮತಗಟ್ಟೆಗಳಲ್ಲಿ ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಲ್ಲಿ ನಿಂತು ಮತದಾರರು ಹಕ್ಕು ಚಲಾಯಿಸಿದರು. ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಮುಖಕ್ಕೆ ಮಾಸ್ಕ್ ಹಾಕಿದ್ದ ಜನರು ಸಾಮಾಜಿಕ ಅಂತರವನ್ನು ಮಾತ್ರ ಗಾಳಿಗೆ ತೂರಿದ್ದರು.
ಇನ್ನು 32ನೇ ವಾರ್ಡ್ ಗೌತಮ ನಗರದಲ್ಲಿನ ಮತಗಟ್ಟೆ ಮತ್ತು 21ನೇ ವಾರ್ಡ್‌ನ ಬಾಲಭಾರತಿ ಶಾಲೆಯಲ್ಲಿನ ಮತಗಟ್ಟೆಗಳಲ್ಲಿ ಮತದಾನ ನೀರಸವಾಗಿತ್ತು. ಮಧ್ಯಾಹ್ನ 1 ಗಂಟೆಯಾದರೂ ಇಲ್ಲಿನ ಮತಟ್ಟೆಗಳಲ್ಲಿ ಕನಿಷ್ಠ 300ರ ಗಡಿದಾಟಿರಲಿಲ್ಲ. ಯಾವುದೇ ಮತಗಟ್ಟೆಗಳ ಮುಂದೆ ಸರತಿ ಸಾಲು ಇರಲಿಲ್ಲ. ಸೋಂಕಿತರಿಂದ ಮತದಾನ: ಪಾಲಿಕೆ ಚುನಾವಣೆ ಬೆಳಗ್ಗೆಯೇ ಬಿರುಸು ಪಡೆದುಕೊಂಡ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯೊಳಗೆ ಶೇ. 22.11ರಷ್ಟು ಮತದಾನವಾಯಿತು. ನಂತರ ಬಿಸಲಿನ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲವೊಂದು ಪ್ರತಿಷ್ಠಿತ ಬಡಾವಣೆಗಳಲ್ಲಿನ ಜನರು ಮನೆಯಿಂದ ಹೊರಬಾರದೆ ಮತದಾನ ಪ್ರಮಾಣ ಕುಸಿದಿದ್ದು, ಮಧ್ಯಾಹ್ನ 1 ಗಂಟೆವರೆಗೆ ಶೇ. 35.73ರಷ್ಟು ಜನರು ಮತದಾನ ಮಾಡಿದ್ದರು.
ನಂತರ ಮತ್ತಷ್ಟು ಕುಸಿದಿದ್ದು, ಮಧ್ಯಾಹ್ನ 3 ಗಂಟೆವರೆಗೆ ಶೇ. 44.94ರಷ್ಟು, ಸಂಜೆ 5 ಗಂಟೆಗೆ ಶೇ.56.19 ರಷ್ಟು ಜನರು ಮಾತ್ರ ಹಕ್ಕು ಚಲಾಯಿಸಿದ್ದಾರೆ. ಮತದಾನ ಪ್ರಕ್ರಿಯ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದ್ದು, ಸಂಜೆ 5ರಿಂದ 6 ಗಂಟೆವರೆಗೆ ಕೋವಿಡ್ ಸೋಂಕಿತರಿಗೆ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು, ಇಬ್ಬರು ಸೋಂಕಿತರು ಹಕ್ಕು ಚಲಾಯಿಸಿದರು.
ಗಣ್ಯರ ಮತದಾನ: ಪಾಲಿಕೆ ಚುನಾವಣೆ ನಿಮಿತ್ತ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಮಹ್ಮದ್ ರμàಕ್, ಪಾಲಿಕೆ ಚುನಾವಣೆ ಕಾಂಗ್ರೆಸ್ ಸಂಯೋಜಕ ಜೆ.ಎಸ್.ಆಂಜನೇಯಲು, ಮಾಜಿ ಮೇಯರ್ ಇಬ್ರಾಹಿಂಬಾಬು ಸೇರಿ ಹಲವು ಗಣ್ಯವ್ಯಕ್ತಿಗಳು ಕುಟುಂಬ ಸಮೇತ ಹಕ್ಕು ಚಲಾಯಿಸಿದರು.
ಆರೋಗ್ಯ ತಪಾಸಣೆ: ಕೋವಿಡ್ ಸೋಂಕು ಎಲ್ಲೆಡೆ ಹೆಚ್ಚಿದ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿತ್ತು. ಪ್ರತಿಯೊಂದು ಮತಗಟ್ಟೆಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು. ಇವರು ಹಕ್ಕು ಚಲಾಯಿಸಲು ಮತಗಟ್ಟೆಗೆ ಆಗಮಿಸುವ ಪ್ರತಿಯೊಬ್ಬ ಮತದಾರರಿಗೂ ಥರ್ಮಲ್ ಸೀðನಿಂಗ್ ಮೂಲಕ ಉಷ್ಣಾಂಶ ಪರಿಶೀಲಿಸಿ, ಅವರ ಕೈಗಳಿಗೆ ಸ್ಯಾನಿಟೆ„ಸರ್ ಸಿಂಪಡಿಸಿ ಮತದಾನ ಮಾಡಲು ಕಳುಹಿಸುತ್ತಿದ್ದರು.
ಮೊದಲ ಬಾರಿಗೆ ಹಕ್ಕು ಚಲಾವಣೆ: ನಗರದ 38ನೇ ವಾರ್ಡ್‌ನಲ್ಲಿ ನೂರಿ ಮತ್ತು 35ನೇ ವಾರ್ಡ್‌ನ ಪಿ.ಹಿಮಬಿಂದು ಎಂಬುವವರು ಮೊದಲ ಬಾರಿಗೆ ಹಕ್ಕು ಚಲಾಯಿಸಿದರು. ಮೊದಲ ಬಾರಿಗೆ ಮತದಾನ ಮಾಡುತ್ತಿರುವುದು ಖುಷಿಯಾಗಿದೆ. ಮತದಾನ ಪ್ರಕ್ರಿಯೆ ಬಗ್ಗೆ ಇಷ್ಟುದಿನ ಇದ್ದ ಕುತೂಹಲಕ್ಕೆ ಈಗ ತೆರೆಬೀಳಲಿದೆ. ಜನಪ್ರತಿನಿಧಿಯೊಬ್ಬರನ್ನು ಆಯ್ಕೆ ಮಾಡಲು ಅವಕಾಶ ನೀಡಿರುವ ಮತದಾನ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.