ವಿಶ್ವ ಆ್ಯತ್ಲೆಟಿಕ್ಸ್ ರಿಲೇ : ಹಿಮಾ ದಾಸ್, ದ್ಯುತಿ ಚಂದ್ ಪ್ರಯಾಣಕ್ಕೆ ಚ್ಯುತಿ
Team Udayavani, Apr 28, 2021, 10:27 PM IST
ನವ ದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಒಲಿಂಪಿಕ್ಸ್ ಅರ್ಹತೆಯ ಹಾದಿಯಲ್ಲಿದ್ದ ಹಿಮಾ ದಾಸ್, ದ್ಯುತಿ ಚಂದ್ ಮೊದಲಾದ ಸ್ಪ್ರಿಂಟರ್‌ಗಳ ಕನಸಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.
ಪೋಲೆಂಡ್‌ನಲ್ಲಿ ಮೇ 1 ಹಾಗೂ 2ರಂದು ವಿಶ್ವ ಅಥ್ಲೆಟಿಕ್ಸ್ ರಿಲೇ ನಡೆಯಲಿದ್ದು, ಕೋವಿಡ್-19 ಹೆಚ್ಚುತ್ತಿರುವ ಕಾರಣ ಭಾರತದಿಂದ ಆಮ್‌ಸ್ಟರ್‌ಡಮ್‌ಗೆ ವಿಮಾನ ಸಂಪರ್ಕ ಸ್ಥಗಿತಗೊಂಡಿದೆ. ಇದರಿಂದ ಸ್ಟಾರ್ ಅಥ್ಲೀಟ್‌ಗಳಾದ ಹಿಮಾ ದಾಸ್ ಮತ್ತು ದ್ಯುತಿ ಚಂದ್ ಅವರು ಒಲಿಂಪಿಕ್ಸ್ ಅರ್ಹತೆ ಕಲ್ಪಿಸುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ.
ಮಹಿಳೆಯರ 4/100 ಮೀ. ಹಾಗೂ ಪುರುಷರ ವಿಭಾಗದ 4/400 ಮೀ. ತಂಡಗಳು ಆಮ್‌ಸ್ಟರ್‌ಡಮ್‌ಗೆ ಗುರುವಾರ ಬೆಳಗಿನ ಜಾವ ತೆರಳಬೇಕಿತ್ತು. ಆದರೆ ಡಚ್ ಸರಕಾರ ಭಾರತದಿಂದ ಬರುವ ವಿಮಾನಗಳನ್ನು ಸೋಮವಾರದ ಸಂಜೆಯಿಂದಲೇ ಸ್ಥಗಿತಗೊಳಿಸಿದೆ.
ಇದನ್ನೂ ಓದಿ :ವೈದ್ಯಾಧಿಕಾರಿಗಳ ನೇಮಕಾತಿ ಕನಿಷ್ಟ ವಯೋಮಿತಿ ಹೆಚ್ಚಳ: ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್
ಪರ್ಯಾಯ ವ್ಯವಸ್ಥೆ?
ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ ಪೋಲೆಂಡ್‌ಗೆ ತೆರಳುವುದಕ್ಕೆ ಯುರೋಪ್‌ನ ಮೂಲಕ ಪರ್ಯಾಯ ವಿಮಾನ ವ್ಯವಸ್ಥೆ ಮಾಡುವುದಕ್ಕೆ ಪ್ರಯತ್ನಿಸುತ್ತಿದೆ. ಆದರೆ ನಮ್ಮ ತಂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಬಗ್ಗೆ ಅನುಮಾನಗಳಿವೆ. ಹಲವಾರು ಯುರೋಪಿಯನ್ ರಾಷ್ಟ್ರಗಳು ಭಾರತದ ವಿಮಾನಗಳನ್ನು ನಿರ್ಬಂಧಿಸಿವೆ ಎಂದು ಹಿರಿಯ ಎಎಫ್ಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.