ಕಾಲುವೆಗೆ ಸತ್ತ ಕೋಳಿ ಎಸೆದಿರುವುದಕ್ಕೆ ಜನರ ಆಕ್ರೋಶ
Team Udayavani, Apr 29, 2021, 6:43 PM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ಸಿಗೇನಹಳ್ಳಿ-3ಗ್ರಾಮದ ಬಳಿ ಇರುವ ತಂಬ್ರಹಳ್ಳಿ ಏತನೀರಾವರಿಯ ಬೃಹತ್ ಕಾಲುವೆಗೆ, ಕೋಳಿಫಾರಂನವರು ಸತ್ತುಹೋದ ಕೋಳಿಗಳನ್ನುಕಾಲುವೆಗೆ ಎಸೆದ ಪರಿಣಾಮ ದುರ್ವಾಸನೆಹೆಚ್ಚಾಗಿದ್ದು ಸುತ್ತಮುತ್ತಲಿನ ಹೊಲಗದ್ದೆಯವರುಮೂಗುಮುಚ್ಚಿಕೊಂಡು ಅಡ್ಡಾಡುವಂತಾಗಿದೆ.
ಈಗಾಗಲೇ ಕೋಳಿ ಎಸೆದು ನಾಲ್ಕುದಿನಗಳಾದರೂ ಈವರೆಗೂ ಸಂಬಂಧಪಟ್ಟಬನ್ನಿಗೋಳ ಗ್ರಾಪಂನವರು, ಆರೋಗ್ಯಇಲಾಖೆಯವರು ಕೋಳಿಫಾರಂನವರಿಗೆಎಚ್ಚರಿಕೆ ನೀಡದೆ ನಿರ್ಲಕ್ಷÂ ವಹಿಸಿದ್ದಾರೆ. ಕಾಲುವೆಪಕ್ಕದಲ್ಲಿರುವ ಹೊಲದವರು ಜೆಸಿಬಿಯಿಂದಮಣ್ಣು ತೆಗೆದು ಕೋಳಿಗಳನ್ನು ಮುಚ್ಚಿ ಎಂದುಹೇಳಿದರೂ ಕೋಳಿಫಾರಂನವರು ರೈತರಮಾತುಗಳಿಗೆ ಮನ್ನಣೆ ನೀಡದೆ ನೇರವಾಗಿಕಾಲುವೆಗೆ ಎಸೆದು ಹೋಗಿದ್ದಾರೆ.
ತುಂಗಾಭದ್ರಾ ಹಿನ್ನೀರು ಬರುವಕಾಲುವೆಗೆ ಕೋಳಿಗಳನ್ನು ಎಸೆದಿರುವುದರಿಂದದನಕರುಗಳಿಗೆ ನೀರು ಕುಡಿಸೋದು ಹೇಗೆಎಂದು ಸಿಗೇನಹಳ್ಳಿ ಗ್ರಾಮದ ಸಾರ್ವಜನಿಕರುಆಕ್ರೋಷ ವ್ಯಕ್ತಪಡಿಸಿದರು. ಸತ್ತಕೋಳಿಗಳನ್ನುಸಿಗೇನಹಳ್ಳಿ, ಬನ್ನಿಗೋಳ ಗ್ರಾಮದ ನಾಯಿಗಳುಊರಲ್ಲೇ ಎಳೆದುಕೊಂಡು ಹೋಗಿ ತಿನ್ನಲುಆರಂಭಿಸಿವೆ.
ಈ ಕೋಳಿಗಳನ್ನು ತಿಂದು ಮೂರು ನಾಯಿಗಳುಅನಾರೋಗ್ಯದಿಂದ ಸಾವಿಗೀಡಾಗಿದ್ದಾವೆ ಎಂದುಗ್ರಾಮದ ಭೀಮರೆಡ್ಡಿ ಬೇಸರದಿಂದ ತಿಳಿಸಿದರು.ಕೊರೊನಾ ವೈರಸ್‌ನಂತಹ ಮಹಾಮಾರಿಯನ್ನುಬಾರಿ ಆತಂಕದಿಂದ ಎದುರಿಸುತ್ತಿರುವಸಾರ್ವಜನಿಕರಿಗೆ ಸತ್ತಕೋಳಿಗಳ ದುರ್ವಾಸನೆನಲುಗುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.