ಲಾಕ್‌ಡೌನ್ ನಡುವೆಯೂ ವಾಹನಗಳ ಓಡಾಟ ಹೆಚ್ಚಳ !
Team Udayavani, Apr 30, 2021, 3:20 AM IST
ಸಾಂದರ್ಭಿಕ ಚಿತ್ರ
ಮಹಾನಗರ: ನಗರದಲ್ಲಿ ಲಾಕ್‌ಡೌನ್ ಮಾದರಿಯ ಕರ್ಫ್ಯೂ ಜಾರಿಗೊಂಡ ಎರಡನೇ ದಿನವಾದ ಗುರುವಾರ ಬೆಳಗ್ಗೆ 10 ಗಂಟೆಯವರೆಗೆ ವಾಹನ ದಟ್ಟಣೆ ಅತಿಯಾಗಿತ್ತು. ಮಾತ್ರವಲ್ಲದೆ ಅನಂತರವೂ ಹೆಚ್ಚಿನ ಸಂಖ್ಯೆಯ ವಾಹನಗಳ ಓಡಾಟ ಕಂಡುಬಂದಿದೆ.
ಬುಧವಾರ 10 ಗಂಟೆಯ ಅನಂತರ ನಗರ ಬಹುತೇಕ ಸ್ತಬ್ಧವಾಗಿತ್ತು. ತುರ್ತುಸೇವೆಯ ವಾಹನಗಳ ಓಡಾಟ ಮಾತ್ರ ಕಂಡುಬಂದಿತ್ತು. ಆದರೆ ಬುಧ ವಾರಕ್ಕೆ ಹೋಲಿಸಿದರೆ ಗುರುವಾರ ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿತ್ತು. ಈ ಹಿಂದೆ ಲಾಕ್‌ಡೌನ್ ಘೋಷಣೆ ಮಾಡಿದ್ದಾಗ ಇದ್ದಂತೆ ವಾಹನಗಳ ಓಡಾಟದ ಮೇಲೆ ಅತಿಯಾದ ನಿರ್ಬಂಧ ಗುರುವಾರ ಕಂಡುಬರಲಿಲ್ಲ. ಕೆಲವೆಡೆ ವಾಹನಗಳನ್ನು ತಪಾಸಣೆ ನಡೆಸದೆ ಕಳುಹಿಸಿಕೊಡುತ್ತಿರುವುದು ಕಂಡುಬಂದಿದೆ. ತುರ್ತುಸೇವೆಗಳು, ಕೆಲವು ಕೈಗಾರಿಕೆಗಳ ಉದ್ಯೋಗಿಗಳು, ಬ್ಯಾಂಕ್ ಸಹಿತ ಸರಕಾರಿ ಸಂಸ್ಥೆಗಳ ಉದ್ಯೋಗಿಗಳು ಮಾತ್ರವಲ್ಲದೆ ಕೆಲವು ಸಾರ್ವಜನಿಕರು ಕೂಡ ಓಡಾಟ ನಡೆಸಿರುವುದು ಕಂಡು ಬಂದಿದೆ.
ಕೂಳೂರು, ನಂತೂರು ಚೆಕ್‌ಪೋಸ್ಟ್ ಗಳನ್ನು ಹೊರತುಪಡಿಸಿದರೆ ಉಳಿದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಯಾಗಿರಲಿಲ್ಲ. ಹಾಗಾಗಿ ನಗರದೊಳಗಿನ ರಸ್ತೆಗಳಲ್ಲಿ ಕೆಲವರು ಅನಗತ್ಯ ಸಂಚಾರ ನಡೆಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಿರ್ದಾಕ್ಷಿಣ್ಯ ಕ್ರಮ :
ತುರ್ತುಸೇವೆ, ಕೆಲವು ಉದ್ಯಮಗಳ ಉದ್ಯೋಗಿಗಳು ಹೊರತುಪಡಿಸಿದರೆ ಇತರ ಅನಗತ್ಯ ಓಡಾಟದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಯಾವುದೇ ರೀತಿಯ ಸಡಿಲಿಕೆ ಮಾಡಿಲ್ಲ. ಅನಗತ್ಯ ಸಂಚಾರ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
28 ವಾಹನಗಳು ವಶಕ್ಕೆ :
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಗುರುವಾರ 4 ಪ್ರಕರಣ, ಮಾಸ್ಕ್ ಧರಿಸದೇ ಇದ್ದ 154 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 28 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ ಅಂಗಡಿ, ಬಾರ್, ರೆಸ್ಟೋರೆಂಟ್ ಸಹಿತ ವಾಣಿಜ್ಯ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.