ಕೊರೊನಾ ಕರ್ಫ್ಯೂಗೆ ಬೀದರ ಜಿಲ್ಲೆ ಸ್ತಬ್ದ


Team Udayavani, Apr 29, 2021, 10:28 PM IST

29-12

ಬೀದರ: ಎರಡನೇ ಅಲೆ ರೂಪದಲ್ಲಿ ಅಪ್ಪಳಿಸಿರುವ ಹೆಮ್ಮಾರಿ ಕೋವಿಡ್‌ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಘೋಷಿಸಿರುವ “ಕೊರೊನಾ ಕರ್ಫ್ಯೂ’ ಜಾರಿಯಾದ ಮೊದಲ ದಿನವೇ ಗಡಿ ನಾಡು ಬೀದರ ಸಂಪೂರ್ಣ ಸ್ತಬ್ಧಗೊಂಡಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಕಠಿಣ ನಿಯಮ ಪಾಲನೆಯಿಂದಾಗಿ ಜನ-ವಾಹನ ಸಂಚಾರ ತೀವ್ರ ಕಡಿಮೆಯಾಗಿದ್ದು, ಕರ್ಫ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಕೋವಿಡ್‌ ಸಾವಿನ ರಣಕೇಕೆ ಜತೆಗೆ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಬೀದರನಲ್ಲಿ ಈ ಮೊದಲೇ ನೈಟ್‌ ಕರ್ಫ್ಯೂ ಜಾರಿಯಲ್ಲಿತ್ತು. ನಂತರ ಸೋಂಕಿನ ಆರ್ಭಟ ಅಧಿಕವಾಗುತ್ತಿದ್ದಂತೆ ರಾಜ್ಯಾದ್ಯಂತ ಏ.21ರಿಂದ ನೈಟ್‌ ಕಫೂ ಮತ್ತು ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಿದ್ದ ಸರ್ಕಾರ ಈಗ ಬುಧವಾರದಿಂದ ಕೊರೊನಾ ಕರ್ಫ್ಯೂ ಜಾರಿಗೊಳಿಸಿದ್ದು, ಬೀದರ ನಗರ ಸೇರಿ ಇಡೀ ಜಿಲ್ಲೆ ನಿಶಬ್ಧವಾಗಿದೆ. ಬುಧವಾರ ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಬೆಳಗ್ಗೆಯೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿದರು.

ನಗರ, ಪಟ್ಟಣ ಪ್ರದೇಶಗಳಲ್ಲಿನ ದಿನಸಿ, ತರಕಾರಿ, ಮಾಂಸ ಖರೀದಿಗೆ ಮುಗಿಬಿದದ್ದು ಕಂಡುಬಂತು. ನಂತರ ಖಾಕಿ ಪಡೆ ರಸ್ತೆಗಿಳಿದು ವ್ಯಾಪಾರ ವಹಿವಾಟು ಬಂದ್‌ ಮಾಡಿಸಿತು. ಜನಸಂಚಾರ, ವಾಹನ ಸಂಚಾರ ಸ್ತಬ್ದಗೊಂಡಿದ್ದು, ನಗರ ಸೇರಿದಂತೆ ಜಿಲ್ಲಾದ್ಯಂತ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಹಾಗಾಗಿ ಗಾಂ ಧಿ ಗಂಜ್‌, ಮೋಹನ್‌ ಮಾರ್ಕೆಟ್‌, ಅಂಬೇಡ್ಕರ ವೃತ್ತ, ನಾಂದೇಡ್‌ ರಸ್ತೆ ಮತ್ತು ಓಲ್ಡ್‌ ಸಿಟಿ ಸೇರಿದಂತೆ ನಗರದ ಎಲ್ಲ ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನುತ್ತಿವೆ. ಎಲ್ಲಾ ದೇವಸ್ಥಾನಗಳು, ಮಸೀದಿ, ಚರ್ಚ್‌ ಮತ್ತು ಇನ್ನಿತರ ಧಾರ್ಮಿಕ ಸ್ಥಳಗಳಿಗೆ ಬೀಗ ಹಾಕಲಾಗಿತ್ತು. ಸಾರಿಗೆ ಬಸ್‌ಗಳ ಕಾರ್ಯಾಚರಣೆಯನ್ನು ಸಹ ನಿಷೇಧ ಮಾಡಲಾಗಿದೆ. ಅನಗತ್ಯ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಲಾಠಿ ರುಚಿ, ಬಸ್ಕಿ ಹೊಡೆಸಿ ಬಿಸಿ ಮುಟ್ಟಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲೂ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಆದರೆ, ಹಳ್ಳಿಗಳಲ್ಲಿ ಜನರ ಓಡಾಡುವಿಕೆ ಮಾತ್ರ ಇನ್ನೂ ನಿಂತಿಲ್ಲ.

ಟಾಪ್ ನ್ಯೂಸ್

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು

Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು

rape

Bidar; 9 ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

Chaluvarayaswamy

Farmers; ಬೆಳೆ ವಿಮೆ ‘ಷರತ್ತು’ ಬದಲಾವಣೆ: ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ

Swamijis should talk to High command about CM change: Chaluvarayaswamy

CM ಬದಲಾವಣೆ ಬಗ್ಗೆ ಸ್ವಾಮೀಜಿಗಳು ಬೇಕಾದರೆ ವರಿಷ್ಠರ ಜತೆ ಮಾತನಾಡಲಿ: ಚಲುವರಾಯಸ್ವಾಮಿ‌

Bidar; I was defeated for our selfishness says Bhagwanth Khuba

Bidar; ನಮ್ಮವರ ಸ್ವಾರ್ಥಕ್ಕಾಗಿ ನನಗೆ ಸೋಲಾಯಿತು…: ಭಗವಂತ ಖೂಬಾ ಬೇಸರ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

police crime

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.