ಆಸ್ಪತ್ರೆಯಲ್ಲೇ ರೆಮಿಡಿಸಿವಿರ್ ಬಳಸಿ
Team Udayavani, Apr 30, 2021, 6:45 AM IST
ಹೊಸದಿಲ್ಲಿ: ದೇಶದಲ್ಲಿ ಸೋಂಕು ಪರಿಸ್ಥಿತಿ ಬಿಗಡಾಯಿಸುತ್ತಿರುವಂತೆ ಕೇಂದ್ರ ಸರಕಾರ ಹೋಮ್ ಐಸೊಲೇಶನ್‌ನ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಿಶೇಷವಾಗಿ ರೋಗಲಕ್ಷಣ ರಹಿತ ಮತ್ತು ಅಲ್ಪ ಪ್ರಮಾಣದ ಲಕ್ಷಣಗಳು ಇರುವವರಿಗೆ ಇದರಿಂದ ಅನುಕೂಲವಾಗಲಿದೆ. ಮನೆಯಲ್ಲಿ ರೆಮಿಡಿಸಿವಿರ್ ಇಂಜೆಕ್ಷನ್ ಪಡೆಯುವುದನ್ನು ನಿಷೇಧಿಸಲಾಗಿದ್ದು, ಆಸ್ಪತ್ರೆಯಲ್ಲಿ ಮಾತ್ರ ಪಡೆಯಬೇಕು ಎಂದು ಸಲಹೆ ಮಾಡಲಾಗಿದೆ. ಮತ್ತೂಂದು ಗಮನಾರ್ಹ ಅಂಶವೆಂದರೆ ಸೋಂಕು ದೃಢಪಟ್ಟವರು ಮನೆಯಲ್ಲಿರುವಾಗ ಕೂಡ ಮೂರು ಪದರಗಳ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಲಾಗಿದೆ.
ಇನ್ನಿತರ ಸಲಹೆಗಳು :
- ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಶ್ವಾಸ ಕೋಶ, ಪಿತ್ತಕೋಶ, ಮೂತ್ರಪಿಂಡ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟವರು ಮನೆಯಲ್ಲೇ ಐಸೊಲೇಶನ್‌ನಲ್ಲಿ ಇರುವಂತಿಲ್ಲ. ಮನೆಯಲ್ಲೇ ಇರಬೇಕೆಂದಾದರೆ ವೈದ್ಯಕೀಯ ತಜ್ಞರು ಶಿಫಾರಸು ಮಾಡಬೇಕು.
- ಅಲ್ಪ ಪ್ರಮಾಣದ ಲಕ್ಷಣ ಇರುವವರಿಗೆ ಓರಲ್ ಸ್ಟೀರಾಯ್ಡ ನೀಡುವಂತಿಲ್ಲ.
- ಜ್ವರ, ವಿಪರೀತ ಕೆಮ್ಮು 7 ದಿನಗಳಿಗಿಂತ ಹೆಚ್ಚಾಗಿದ್ದರೆ ವೈದ್ಯರ ಸಲಹೆ ಪಡೆಯಬೇಕು.
- ಮನೆಯಲ್ಲಿ ಐಸೊಲೇಶನ್ ಆಗಲು ಸೂಕ್ತ ವ್ಯವಸ್ಥೆಗಳು ಇರಬೇಕು.
- ಮನೆಯಲ್ಲಿ ವೈದ್ಯರ ಸಲಹೆಯಿಲ್ಲದೆ ರೆಮಿಡಿಸಿವಿರ್ ಪಡೆಯುವಂತಿಲ್ಲ.
- ಸೋಂಕುಪೀಡಿತರು ಮನೆಯಲ್ಲಿ ಇರುವಾಗಲೂ ಮೂರು ಪದರಗಳುಳ್ಳ ಮಾಸ್ಕ್ ಧರಿಸಬೇಕು. 8 ತಾಸುಗಳ ಬಳಿಕ ಬದಲಾಯಿಸಬೇಕು.
- ಸೋಂಕುಪೀಡಿತರು ಇರುವ ಕೊಠಡಿಗೆ ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆ ಇರಬೇಕು.
- ಸೋಂಕುಪೀಡಿತರ ಕೊಠಡಿಗೆ ಆರೈಕೆದಾರರು ಪ್ರವೇಶಿಸುವಾಗ ಇಬ್ಬರೂ ಮಾಸ್ಕ್ ಧರಿಸಬೇಕು. ಎನ್95 ಮಾಸ್ಕ್ ಆದರೆ ಉತ್ತಮ.
- ಕೋವಿಡ್ ಪೀಡಿತರು ಸಾಕಷ್ಟು ದ್ರವಾಹಾರ ಸೇವಿಸಬೇಕು.
- ದಿನಕ್ಕೆ ಎರಡು ಬಾರಿ ಬಿಸಿ ನೀರಿನ ಆವಿ ತೆಗೆದುಕೊಳ್ಳಬೇಕು ಅಥವಾ ಬಿಸಿ ನೀರಿನಲ್ಲಿ ಗಂಟಲು ಸ್ವಚ್ಛಗೊಳಿಸಬೇಕು.
- ಕೈಗಳನ್ನು ಆಗಾಗ ಸಾಬೂನು ಬಳಸಿ ತೊಳೆಯಬೇಕು ಅಥವಾ ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು.
- ಆಮ್ಲಜನಕ ಪ್ರಮಾಣ ಕುಸಿಯುತ್ತಿದ್ದರೆ ಅಥವಾ ಉಸಿರಾಟಕ್ಕೆ ತೊಂದರೆ ಉಂಟಾದರೆ ಆಸ್ಪತ್ರೆಗೆ ದಾಖಲಿಸಬೇಕು.
- ಹತ್ತು ದಿನಗಳ ಬಳಿಕ ಹೋಮ್ ಐಸೊಲೇಶನ್ ಇದ್ದವರು ಎಂದಿನ ಜೀವನ ಶೈಲಿಗೆ ವಾಪಸಾಗಬಹುದು.
- ಆರೈಕೆದಾರರು ಸೋಂಕುಪೀಡಿತರ ಬಗ್ಗೆ 24 ತಾಸು ನಿಗಾ ಇರಿಸಬೇಕು.
- ಎಚ್‌ಐವಿ, ಕ್ಯಾನ್ಸರ್ ಚಿಕಿತ್ಸೆ ಪಡೆಯುವವರು, ಕಿಡ್ನಿ ಕಸಿ ಮಾಡಿಸಿಕೊಂಡವರು ಹೋಮ್ ಐಸೋಲೇಶನ್‌ನಲ್ಲಿ ಇರುವಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.