ಕೋವಿಡ್ ನಿಯಂತ್ರಣಕ್ಕೆ ದ.ಕ., ಉಡುಪಿ ಜಿಲ್ಲಾಡಳಿತಗಳು ಸನ್ನದ್ಧ

Team Udayavani, Apr 30, 2021, 7:25 AM IST

ಕೋವಿಡ್ ನಿಯಂತ್ರಣಕ್ಕೆ ದ.ಕ., ಉಡುಪಿ ಜಿಲ್ಲಾಡಳಿತಗಳು ಸನ್ನದ್ಧ

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ವೆನ್ಲಾಕ್, ಖಾಸಗಿ ವೈದ್ಯಕೀಯ  ಕಾಲೇಜುಗಳ ಆಸ್ಪತ್ರೆಗಳಲ್ಲಿ ಒಟ್ಟು 4,884 ಹಾಸಿಗೆಗಳನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಸುರತ್ಕಲ್‌ನ ಎನ್‌ಐಟಿಕೆ, ಕದ್ರಿ ಶಿವಬಾಗ್‌ನ ಇಎಸ್‌ಐ ಆಸ್ಪತ್ರೆಯನ್ನು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಲಾಗುತ್ತಿದೆ.

ಕೋವಿಡ್  ಮೊದಲ ಅಲೆಯ ಸಂದರ್ಭ ಬಳಸಿದ್ದ ಎನ್‌ಐಟಿಕೆ ಸೆಂಟರ್‌ 100 ಹಾಗೂ ಇಎಸ್‌ಐ ಆಸ್ಪತ್ರೆಯಲ್ಲಿ 75 ಹಾಸಿಗೆ ಸಾಮರ್ಥಯ ಹೊಂದಿದೆ. ಕುಡಿಯುವ

ನೀರು ಸೇರಿದಂತೆ ಅಗತ್ಯ ಸೌಲಭ್ಯ ಗಳೆಲ್ಲವನ್ನೂ ಆರೋಗ್ಯ ಇಲಾಖೆ ಕಲ್ಪಿ ಸುತ್ತಿದೆ. ಜತೆಗೆ ಮೊರಾರ್ಜಿ ದೇಸಾಯಿ ಶಾಲೆಯನ್ನು ಕೇರ್‌ ಸೆಂಟರ್‌ ಆಗಿ ಪರಿವರ್ತಿಸುವ ಸಾಧ್ಯತೆ ಇದೆ. ಅಗತ್ಯ ಬಿದ್ದರೆ ಇನ್ನೂ ಕೆಲವು ಶಾಲೆ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗ‌ಳು, ಹೊಟೇಲ್‌ಗ‌ಳನ್ನು ಪರಿವರ್ತನೆಯಾಗಲಿದೆ. ಅದೂ ಸಾಲದಿದ್ದರೆ ಜಿಲ್ಲೆಯ ಆಯು ರ್ವೇದ, ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ಹೆಚ್ಚುವರಿ ಹಾಸಿಗೆಗಳನ್ನೂ ಪಡೆಯುವುದು ಜಿಲ್ಲಾಡಳಿತದ ಲೆಕ್ಕಾಚಾರ.

ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ವೈದ್ಯರು ಹಾಗೂ ದಾದಿಯರನ್ನು ನಿಯೋಜಿಸುತ್ತಿದ್ದು, ಸೋಂಕು ಲಕ್ಷಣ ಇಲ್ಲದ ರೋಗಿಗಳಿಗೆ ಕನಿಷ್ಠ ಹತ್ತು ದಿನ ಚಿಕಿತ್ಸೆ ಅಲ್ಲಿ ಲಭ್ಯವಾಗಲಿದೆ.

ಹೋಂ ಐಸೊಲೇಶನ್‌ ಅಧಿಕ :

ಕಳೆದ ಬಾರಿ ಜಿಲ್ಲೆಯಲ್ಲಿ ಬಹುಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕಡಿಮೆ ಪ್ರಮಾಣದಲ್ಲಿ ಜನರು ಹೋಂ ಐಸೊಲೇಶನ್‌ನಲ್ಲಿದ್ದರು. ಆದರೆ ಈ ಬಾರಿ ಸೋಂಕಿತರ ಪೈಕಿ ಶೇ. 80ರಷ್ಟು ಮಂದಿ ಹೋಂ ಐಸೊಲೇಶನ್‌ನಲ್ಲಿದ್ದಾರೆ. ಇತ್ತೀಚಿನ  ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 887 ಮಂದಿ ಆಸ್ಪತ್ರೆಗಳಲ್ಲಿ ಹಾಗೂ 3,249 ಮಂದಿ ಹೋಂ ಐಸೋಲೇಶನ್‌ನಲ್ಲಿದ್ದಾರೆ.

ಸದ್ಯದ ಹಾಸಿಗೆ ಲಭ್ಯತೆ  – 4, 884 :

ಎನ್‌ಐಟಿಕೆ ಕೇರ್‌ ಸೆಂಟರ್‌ – 100

ಇಎಸ್‌ಐ ಆಸ್ಪತ್ರೆ – 75

ವೆನ್ಲಾಕ್  ಆಸ್ಪತ್ರೆ – 275

ವಿವಿಧ ತಾಲೂಕು ಆಸ್ಪತ್ರೆ,  ಪ್ರಾ. ಆ. ಕೇಂದ್ರ, ಸಮುದಾಯ ಆ.ಕೇಂದ್ರ- 450

ಶೇ. 50 ರಷ್ಟು ಹಾಸಿಗೆ ಲಭ್ಯತೆ  :

ಖಾಸಗಿ ವೈದ್ಯಕೀಯ ಕಾಲೇಜು  – 8

ಖಾಸಗಿ ಆಸ್ಪತ್ರೆಗಳು  – 58

ಜಿಲ್ಲೆಯ ಆಸ್ಪತ್ರೆಗಳಲ್ಲಿ ಒಟ್ಟು 4,884 ಬೆಡ್‌ಗಳನ್ನು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ. ನಗರ ದಲ್ಲಿ ಮೂರು ಕಡೆ ಕೋವಿಡ್‌ಕೇರ್‌ ಸೆಂಟರ್‌ ತೆರೆಯಲು ಎಲ್ಲ ಪ್ರಕ್ರಿಯೆ ಗಳನ್ನು ಈಗಾಗಲೇ ನಡೆಸಲಾಗಿದೆ.- ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆಯಲ್ಲಿ  2 ಸಾವಿರ ಹಾಸಿಗೆಗಳು ಮೀಸಲು :

ಉಡುಪಿ: ಕೋವಿಡ್  ಪರಿಸ್ಥಿತಿ ನಿರ್ವಹಣೆಗೆ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಹಾಸಿಗೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳಲಾಗಿದೆ.

“ಜಿಲ್ಲೆಯಲ್ಲಿ 2,000 ಹಾಸಿಗೆಗಳಿದ್ದು, 500 ಹಾಸಿಗೆಗಳು ಬಳಕೆಯಲ್ಲಿವೆ. ಹಾಗಾಗಿ ಸದ್ಯಕ್ಕೆ ಹಾಸಿಗೆಗಳ ಕೊರತೆ ಇಲ್ಲ’ ಎನ್ನುತ್ತದೆ ಜಿಲ್ಲಾಡಳಿತ. ನಿತ್ಯವೂ ಅವಲೋಕನ ನಡೆಸಲಾಗುತ್ತಿದ್ದು, ರೆಮ್‌ಡಿಸಿವರ್‌ ಕೊರತೆಯನ್ನೂ ನೀಗಿಸಲಾಗಿದೆ.

ಆಕ್ಸಿಜನ್‌ ಪೂರೈಕೆ :

ಬೆಳಪುವಿನಲ್ಲಿ ಆಕ್ಸಿಜನ್‌ ಪೂರೈಕೆ ಘಟಕ ಮೂರು ದಿನಗಳ ಹಿಂದೆ ಕಾರ್ಯಾರಂಭ ಮಾಡಿದೆ. ಮಣಿಪಾಲ ಆಸ್ಪತ್ರೆ ತನ್ನದೇ ಆದ ಆಕ್ಸಿಜನ್‌ ಘಟಕ ಹೊಂದಿದೆ. ಡಾ| ಟಿಎಂಎ ಪೈ ಆಸ್ಪತ್ರೆಗೆ ಮಂಗಳೂರಿನಿಂದ ಪೂರೈಕೆ ಆಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 6 ಕೆಎಲ್‌ ಸಾಮರ್ಥ್ಯದ ಆಕ್ಸಿಜನ್‌ ವ್ಯವಸ್ಥೆ ಇದೆ. ಉಳಿದ ಆಸ್ಪತ್ರೆಗಳಿಗೆ ಮಾತ್ರ ಬೆಳಪು ವಿನಿಂದ ಪೂರೈಸಲಾಗುತ್ತದೆ.

ವ್ಯಾಕ್ಸಿನ್‌ ಪೂರೈಕೆ ಕೋವಿಡ್  ವ್ಯಾಪಿಸುತ್ತಿದ್ದು, ಸಾರ್ವಜನಿಕರೂ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.  ಸೋಮವಾರ 5 ಸಾವಿರ ಲಸಿಕೆ ಪೂರೈಕೆ ಆಗಿದ್ದು, ಮಂಗಳವಾರ 12 ಸಾವಿರ ಬಂದಿದೆ. ಬುಧವಾರ 10 ಸಾವಿರ ಲಸಿಕೆ ವಿತರಿಸಲಾಗಿದೆ. ಹೀಗೆ ವ್ಯಾಕ್ಸಿನ್‌ ಪೂರೈಕೆ  ದಿನದಿನವೂ ನಡೆಯುತ್ತಿದೆ. ಕೊವ್ಯಾಕ್ಸಿನ್‌ ಸದ್ಯವೇ ಬರಲಿದೆ ಎನ್ನು ತ್ತಾರೆ ಜಿಲ್ಲಾಧಿಕಾರಿ ಜಿ. ಜಗದೀಶ್‌.  ಜಿಲ್ಲೆಯ ಆರು ಸಮುದಾಯ ಆರೋಗ್ಯ ಕೇಂದ್ರಗಳನ್ನು (ಸಿಎಚ್‌ಸಿ) ಸಿದ್ಧವಾಗಿ ರಿಸಿ ಕೊಳ್ಳುತ್ತಿದ್ದೇವೆ. ಪ್ರತಿ ಕೇಂದ್ರಗಳಲ್ಲೂ 30 ಹಾಸಿಗೆಗಳಿದ್ದು, ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳ ಲಾಗುವುದು ಎನ್ನುತ್ತಾರೆ ಜಿಲ್ಲೆಯ ಜಿಲ್ಲೆಯ ವೈದ್ಯಾಧಿಕಾರಿ ಡಾ| ಸುಧೀರ್‌ ಚಂದ್ರ ಸೂಡ.

ಸಹಾಯವಾಣಿ :

ಉಡುಪಿ               9663957222, 9663950222

ಕುಂದಾಪುರ      6363862122, 7483984733

ಕಾರ್ಕಳ               7676227624, 7411323408

ಜಿಲ್ಲೆಯಲ್ಲಿ 900 ಆಕ್ಸಿಜನ್‌ ಹಾಸಿಗೆಗಳಿವೆ. ಜತೆಗೆ ಇತರೆ ಹಾಸಿಗೆಗಳೂ ಇವೆ. ಖಾಸಗಿ ಆಸ್ಪತ್ರೆಗಳ ಶೇ. 75 ರಷ್ಟು ಹಾಸಿಗೆಗಳನ್ನು ಸರಕಾರಕ್ಕೆ ನೀಡಲಾಗಿದೆ. ಹಾಗಾಗಿ ಒಂದು ವೇಳೆ ಯಾರಾದರೂ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋದಾಗ ಅಲ್ಲಿ ಹಾಸಿಗೆಗಳಿಲ್ಲ ಎಂದಿರಬಹುದು. ಇಂಥ ಸಂದರ್ಭದಲ್ಲಿ ಸಾರ್ವಜನಿಕರು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಅಥವಾ ನೋಡಲ್‌ ಅಧಿಕಾರಿ ಡಾ| ಪ್ರಶಾಂತ ಭಟ್‌ ಅವರನ್ನು ಸಂಪರ್ಕಿಸಬಹುದು. ತಾಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆದಿದ್ದು, ಸಾರ್ವಜನಿಕರು ಆ ಮೂಲಕ ವೈದ್ಯಕೀಯ ವ್ಯವಸ್ಥೆಯನ್ನು ಪಡೆಯಬಹುದು.  ಜಿ. ಜಗದೀಶ್‌, ಜಿಲ್ಲಾಧಿಕಾರಿ, ಉಡುಪಿ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

hejjenu 1

Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.