ರಾಮು ಕೊನೆಯ ಚಿತ್ರದ ನಿರ್ದೇಶಕನ ಮನದ ಮಾತು
ಕೋಟಿ ನಿರ್ಮಾಪಕನ ಒಡನಾಟ ಬಿಚ್ಚಿಟ್ಟ ಅರ್ಜುನ್ ಗೌಡ ನಿರ್ದೇಶಕ ಲಕ್ಕಿ ಶಂಕರ್
Team Udayavani, Apr 30, 2021, 7:38 AM IST
“ಟಿಕೆಟ್ ತೆಗೆದುಕೊಳ್ಳುವ ಪ್ರೇಕ್ಷಕನಿಗೆ ಯಾವತ್ತೂ ಮೋಸ ಮಾಡಬಾರದು. ನಾವು ಮಾಡೋ ಸಿನಿಮಾನಾ ನೋಡುವ ಅವನು ಹ್ಯಾಪಿಯಾಗಿ ಸಿನಿಮಾವನ್ನ ಎಂಜಾಯ್ ಮಾಡಬೇಕು’ ಇದು ನಿರ್ಮಾಪಕ ರಾಮು ಸರ್, ನನಗೆ ಪದೇ ಪದೇ ಹೇಳುತ್ತಿದ್ದ ಮಾತು.
ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳವಣಿಗೆ ಬಗ್ಗೆ ತುಂಬಾ ಕನಸುಗಳನ್ನು ಇಟ್ಟುಕೊಂಡಿದ್ದರು. 24 ಗಂಟೆ ಜೊತೆಗಿದ್ರು ಬರೀ ಸಿನಿಮಾ ಬಗ್ಗೆ ಮಾತಾಡೋರು. ಅಂಥಾ ಪ್ಯಾಷನೇಟ್ ನಿರ್ಮಾಪಕ. ಸುಮಾರು ಹತ್ತು ದಿನಗಳ ಹಿಂದಿನ ಘಟನೆ. ಅವತ್ತು ಬೆಂಗಳೂರಿನಲ್ಲಿ ಜೋರು ಮಳೆ.
ಹಠಾತ್ತಾಗಿ ಸುರಿದ ಮಳೆಗೆ ರಾಮು ಸರ್ ಕೂಡ ನೆನೆದು ಹೋಗಿದ್ದರು. “ಇವತ್ತು ಮಳೆಯಲ್ಲಿ ನೆನೆದು ಬಿಟ್ಟೆ. ಈ ಮಳೆ ಬಂದ ಮೇಲೆ ಬರುವ ಮಣ್ಣಿನ ಘಾಟು (ವಾಸನೆ) ನನಗೆ ಆಗಲ್ಲ. ನೋಡಿ ಇವತ್ತು ನನಗೆ ಜ್ವರ ಬರುತ್ತೆ’ ಅಂತ ಅಂದಿದ್ದರು ರಾಮು ಸಾರ್. ಅದರಂತೆ ಜ್ವರಕ್ಕೆ ಬಿದ್ದ ರಾಮು ಸರ್, ಮತ್ತೆ ಎದ್ದು ಬರಲೇ ಇಲ್ಲ!
ನಾನು ಹತ್ತಿರದಿಂದ ಕಂಡಂತೆ, ರಾಮು ಸಾರ್ ಬರೀ ನಿರ್ಮಾಪಕರಲ್ಲ. ಅವರೊಬ್ಬ ಪ್ಯಾಷನೇಟ್ ಫಿಲಂ ಮೇಕರ್, ನಿಜವಾದ ಚಿತ್ರ ಪ್ರೇಮಿ, ಬೆಸ್ಟ್ ಫಿಲಂ ಟೀಚ ರ್. ಎಲ್ಲರಿಗೂ ವರ್ಷದಲ್ಲಿ ಕೆಲವು ದಿನಗಳು ಮಾತ್ರ ಹಬ್ಬ ಬರುತ್ತೆ. ಆದರೆ ರಾಮು ಸರ್‌ಗೆ ಪ್ರತಿ ಗುರುವಾರ-ಶುಕ್ರವಾರ ಬಂತಂದ್ರೆ ಹಬ್ಬ. ಹೊಸ ಫಿಲಂ ರಿಲೀಸ್ ಆಗುತ್ತೆ, ಓಪನಿಂಗ್ ಹೆಂಗಿ ರುತ್ತೆ, ಎಲ್ಲಾ ಡಿಸ್ಟ್ರಿಬ್ಯೂ ಟರ್‌ಗಳಿಗೆ ಫೋನ್ ಮಾಡಿ, ಆ ಪಿಕ್ಚರ್ ಕಲೆಕ್ಷನ್ ಹೆಂಗಿದೆ, ರಿಪೋರ್ಟ್ ಹೆಂಗಿದೆ ಅಂತ ಉತ್ಸಾಹ ಮತ್ತು ಕುತೂಹಲದಿಂದ ತಿಳಿದುಕೊಳ್ತಾ ಇದ್ದವರು. ಥಿಯೇಟರ್ ನಲ್ಲೇ ಎಲ್ಲಾ ಸಿನಿಮಾ ನೋಡಿ ಆನಂದ ಪಡ್ತಾ ಇದ್ದರು. ಸಿನಿಮಾಗೋಸ್ಕರನೇ ಅವರ ಲೈಫ್ ಮುಡಿಪಾಗಿಟ್ಟವರು.
ಕೆಲವು ದಿನಗಳ ಹಿಂದೆ ಎಡಿಟಿಂಗ್ ರೂಂನಲ್ಲಿ “ಅರ್ಜುನ್ ಗೌಡ’ ಇಡೀ ಸಿನಿಮಾ ನೋಡಿದ ರಾಮು ಸರ್ ತುಂಬ ಖುಷಿಯಾಗಿದ್ದರು. “ತುಂಬಾ ಚೆನ್ನಾಗಿದೆ, ನಮ್ಮ ಸಿನಿಮಾ ಶ್ಯೂರ್ ಹಿಟ್ ಆಗುತ್ತೆ. ಎಲ್ಲರ ವರ್ಕ್ ತುಂಬ ಚೆನ್ನಾಗಿದೆ. ಪ್ರಜ್ಜು ತುಂಬಾ ಚೆನ್ನಾಗಿ ಕಾಣಿಸ್ತಾರೆ. ಪ್ರಮೋಶನ್ ವರ್ಕ್ ಸ್ಟಾರ್ಟ್ ಮಾಡಿ, ಡಿಸೈನ್ಸ್ ಎಲ್ಲಾ ರೆಡಿ ಮಾಡಿ, ಎಲ್ಲಾ ಪೇಪರ್‌ಗೂ ಹಾಕಿಸಿಬಿಡೋಣ. ಈ ಸಿನಿಮಾದಿಂದ ನಿಮಗೆ ಒಳ್ಳೆಯ ನೇಮ್ ಬರುತ್ತೆ ನೋಡಿ’ ಎಂದು ಹೃದಯ ತುಂಬಿ ಮಾತನಾಡಿದ್ದರು.
ಹಾಗೇ “ಟ್ರೇಲರ್ ರಿಲೀಸ್ ಮಾಡೋಣ, ಸಿನಿಮಾ ಚೆನ್ನಾಗಿ ಬಂದಿದೆ ಸಕ್ಸಸ್ ಆಗುತ್ತೆ’ ಅಂದಿದ್ರು. ಟ್ರೇಲರ್ ರಿಲೀಸ್ ಆದ ನಂತರ, ಟ್ರೇಲರ್ ನೋಡಿ ಫೋನ್ ಮಾಡಿದ ಎಲ್ಲರಿಗೂ, “ಸಿ ನಿಮಾ ನೋಡಿ ಇನ್ನೂ ಸೂಪರ್ ಆಗಿದೆ. ಮುಂದಿನ ತಿಂಗಳು ರಿಲೀಸ್’ ಅಂತ ಹೇಳುತ್ತಿದ್ದರು. ರಾಮು ಸರ್ ವ್ಯಕ್ತಿತ್ವವೇ ಹಾಗೆ. ಅವರಿಗೆ ಅನಿಸಿದ್ದನ್ನು ನೇರವಾಗಿ, ಸ್ಪಾಟ್ ನಲ್ಲೇ ಹೇಳಿ ಬಿಡ್ತಾ ಇದ್ರು. ಅದು ಸ್ವಂತ ಸಿನಿಮಾ ಆದ್ರೂ ಒಂದೇ, ಬೇರೆಯವರ ಸಿನಿಮಾ ಆದ್ರೂ ಒಂದೇ. ಕೆಲವು ವರ್ಷಗಳಿಂದ ನಾವಿಬ್ಬರು ಒಟ್ಟಿಗೇ ಥಿಯೇಟರ್ ನಲ್ಲಿ ಆ್ಯಕ್ಷ ನ್ ಸಿನಿಮಾಗಳನ್ನು ನೋಡ್ತಿದ್ದೆವು.
ಅದರಲ್ಲೂ ನೈಟ್ ಶೋ ಗಳೇ ಹೆಚ್ಚು. ಸಿನಿಮಾ ನೋಡಿ ಮಧ್ಯರಾತ್ರಿ ಹೋಟೆ ಲ್‌ಗೆ ಹೋಗಿ, ಊಟ ಮಾಡಿ, ಖಾಲಿ ರಸ್ತೆಗಳಲ್ಲಿ ನಿಂತು ಆ ಸಿನಿಮಾಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಆ ನಂತರವೇ ಅವರು ಖುಷಿಯಿಂದ ರಿಫ್ರೆಶ್ ಆಗಿ ಮನೆಗೆ ಹೋಗ್ತಾ ಇದ್ರು. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ರೆಗ್ಯೂಲರ್ ಆಗಿ ನನಗೆ ಫೋನ್ ಮಾಡುತ್ತಿದ್ದರು. ಆದರೆ, ಯಾಕೋ ಕೊನೆಯ ಎರಡು ದಿನ ಅವರ ಮೊಬೈಲ್ ಸ್ವಿಚ್ ಆಫ್ ಆಗೋಯ್ತು. ಅವರನ್ನು ಭೇಟಿಯಾದ ದಿನದಿಂದ ಅವರ ಮೊಬೈಲ್ ಆಫ್ ಆಗಿರೋದು ನಾನು ನೋಡೇ ಇರಲಿಲ್ಲ. ಯಾವುದೇ ಮಿಸ್ ಕಾಲ್ ಇದ್ರು, ವಾಪಾಸ್ ಕಾಲ್ ಮಾಡಿ ಮಾತಾಡ್ತಾ ಇದ್ದವರು ಅವರು. ನನ್ನ ಮೊಬೈಲ್ ನಲ್ಲಿ ರಾಮು ಸರ್ ನಂಬರ್‌ನ “ರಾಜ್ ಕಪೂರ್’ ಅಂತಾನೇ ಸೇವ್ ಮಾಡಿಕೊಂಡಿದ್ದೆ. ನನ್ನ ಮಟ್ಟಿಗೆ ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲಿ ಕನ್ನಡ ಸಿನಿ ಮಾನಾ ಟಾಪ್ ಲೆವೆಲ್‌ಗೆ ಕೂರಿಸಿದ ನಿರ್ಮಾಪಕರು ಅವರು. ಆದರೆ, ಆ ರಾಜ್ ಕಪೂರ್ ಕಾಲ್, ಇಷ್ಟು ಬೇಗ ಸ್ಟಾಪ್ ಆಗುತ್ತೆ ಎಂಬುದನ್ನು ಇನ್ನೂ ನಂಬೋಕೆ ಆಗ್ತಾ ಇಲ್ಲ. ಅವರ ಎಲ್ಲಾ ನಿರ್ಮಾಣ ಮತ್ತು ವಿತರಣೆ ಮಾಡಿರುವ ಅನುಭವಗಳನ್ನು ಸದಾ ಹೇಳ್ತಾ ಇದ್ರು. ನಾನೊಬ್ಬ ಸ್ಟೂಡೆಂಟ್ ಥರ ತರಹ ಕೇಳಿ ಅದನ್ನ ಕಲೀತಾ ಇದ್ದೆ.
ಇತ್ತೀಚೆಗೆ ನಾವಿಬ್ಬರು ನೋಡಿದ ಸಿನಿಮಾ “ರಾಬರ್ಟ್’. ಕಾವೇರಿ ಥಿಯೇಟರ್ ನಲ್ಲಿ ನೈಟ್ ಶೋಗೆ ಹೌಸ್‌ಫುಲ್ ಆಗಿದ್ದ ಜನರನ್ನ ನೋಡಿ, ಖುಷಿಯಿಂದ, “ನೋಡಿದ್ರಾ, ಕಮರ್ಷಿಯಲ್ ಸಿನಿಮಾ ಯಾವತ್ತಿದ್ದರೂ ಕಮರ್ಷಿಯಲ್ ಆಗಿಯೇ ಇರುತ್ತೆ. ನಮ್ಮ ಸಿನಿಮಾಗೂ ಹೀಗೆ ಜನ ಬರಲಿ. ಎಲ್ಲರಿಗೂ ಒಳ್ಳೆಯದಾಗುತ್ತೆ’ ಅಂದಿದ್ರು.
ಅಷ್ಟಕ್ಕೇ ರಾಮು ಸರ್ ಜೊತೆ ಸಿನಿಮಾ ನೋಡೋ ಋಣ ಮುಗಿಯುತ್ತೆ ಅಂತ ಅಂದು ಕೊಂಡಿರಲಿಲ್ಲ. ಕೊನೆಯದಾಗಿ ನಾವಿಬ್ಬರೂ ಭೇಟಿಯಾಗಿದ್ದು, “ಕದಂಬ’ ಹೋಟೆಲ್ ನಲ್ಲಿ. “ಪಬ್ಲಿಸಿಟಿ ವರ್ಕ್ ಬಗ್ಗೆ ಕಾನ್ಸಂಟ್ರೇಟ್ ಮಾಡಿ, ಮುಂದಿನ ತಿಂಗಳು ರಿಲೀಸ್ ಪ್ಲಾನ್ ಮಾಡಿ ಕೊಳ್ಳೋಣ’ ಅಂತ ಬೈ ಮಾಡಿ ಹೊರಟರು. ಅದೇ ಕೊನೆ ಭೇಟಿ. ನಂತರ ಅವರು ಆಸ್ಪತ್ರೆಯಲ್ಲಿದ್ದಾಗ ಕಾಲ್ ಮಾಡಿ, ಅವರ ಆರೋಗ್ಯದ ಬಗ್ಗೆ ವಿಚಾರಿಸಿದೆ. ಬೇಸರದಲ್ಲಿದ್ದ ರಾಮು ಸರ್, “ಐಸಿಯು ವಾರ್ಡ್‌ಗೆ ಕರೆಯುತ್ತಿದ್ದಾರೆ, ಹೊರಡುತ್ತಿದ್ದೇನೆ…’ ಎಂದರು. “ದಟ್ ವಾಸ್ ದಿ ಲಾಸ್ಟ್ ವಾಯ್ಸ ಕಾಲ್ ಫ್ರಮು ಸರ್’
ನಾನು ದೇವರು, ಆತ್ಮ ಅನ್ನೋ ನಂಬಿಕೆಯನ್ನು ಮರೆತುಬಿಟ್ಟಿದ್ದೇನೆ. ಒಂದು ವೇಳೆ ಇದ್ದರೆ ಎಲ್ಲಾ ದೇವರಿಗೂ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಸದಾ ಶಾಂತಿ ಸಿಗಲಿ ಎಂದು.
ಐ ಲವ್ ಯೂ ರಾಮು ಸಾರ್. ಎ ಬಿಗ್ ಸೆಲ್ಯೂಟ್ ಟು ಯು…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ತೆರೆಮೇಲೆ ʼಅನಾಥʼನ ಕನಸು
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.